ಮಾ.24 ರಿಂದ ಸಾರಿಗೆ ಮುಷ್ಕರ ಖಚಿತ; ಮುಷ್ಕರ ಕೈಬಿಡಲ್ಲ – ಆರ್ ಚಂದ್ರಶೇಖರ್ ….
ರಾಜ್ಯ ಸರ್ಕರ ಈಗಾಗಲೇ ನೀಡಿರುವ ವೇತನ ಪರಿಷ್ಕರಣೆಗೆ ಸಹಮತ ವ್ಯಕ್ತಪಡಿಸದ ಸಾರಿಗೆ ನೌಕರರ ಮತ್ತೊಂದು ಸಂಘಟನೆ ಈಗಾಗಲೇ ನಿರ್ಧರಿಸಿರುವ ಮಾರ್ಚ್ 24 ರಿಂದ ಸಾರಿಗೆ ನೌಕರರ ಮುಷ್ಕರ ಅಬಾಧಿತ ಎಂದು ಘೋಷಿಸಿದೆ.
ಕೆಲದಿನಗಳ ಹಿಂದೆಯಷ್ಟೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಶೇಕಡ 15 ರಷ್ಟು ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದರು. ಇದಕ್ಕೆ ಹಲವು ಸಂಘಟನೆಗಳು ಸಹಮತ ವ್ಯಕ್ತಪಡಿಸಿದ್ದರೆ ಇನ್ನು ಕೆಲವು ಸಂಘಟನೆಗಳು ಸಹಮತವನ್ನ ವಿರೋಧಿಸಿ.
ಕೆ ಎಸ್ ಆರ್ ಟಿ ಸಿ ನೌಕರರ ಒಕ್ಕೂಟ ಹೋರಾಟ ಮುಂದುವರೆಸಲು ನಿರ್ಧರಿಸಿದೆ. “ಸರ್ಕಾರಿ ನೌಕರರ ಸರಿಸಮಾನ ವೇತನಕ್ಕೆ ಆಗ್ರಹಿಸಿ ನೀಡಿರುವ ಕರೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಈಗಾಗಲೇ ನಿರ್ಧರಿಸಿದಂತೆ 24 ರಂದು ಕರ್ತವ್ಯಕ್ಕೆ ಗೈರು ಹಾಜರಾಗಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಗುವುದು” ಎಂದು ಕೆ ಎಸ್ ಆರ್ ಟಿ ಸಿ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ಸ್ಪಷ್ಟಪಡಿಸಿದ್ದಾರೆ.
ಸಿಬ್ಬಂಧಿ ಮುಷ್ಕರ ಕೈ ಬಿಡುವಂತೆ ಅಧಿಕಾರಿಗಳು ನಡೆಸಿದ ಸಂಧಾನ ಸಭೆ ವಿಫಲಾಗಿದ್ದು, ಮಂಗಳವಾರ ರಾತ್ರಿಯಿಂದಲೇ ಹಲವು ನೌಕರರು ಮುಷ್ಕರಕ್ಕೆ ಮುಂದಾಗಿದ್ದು, ಪೂರ್ವಭಾವಿ ಹೋರಾಟಕ್ಕೆ ಚಾಲನೆ ನೀಡಿದ್ದಾರೆ.
KSRTC : Transport strike confirmed from March 24; Strike not abandoned – R Chandrasekhar….