ಶಮಂತ್ ಬ್ರೋ ಗೌಡ ಖರೀದಿಸಿದ ಹೊಸ ಕಾರು ರೈಡ್ ಮಾಡಿದ ಕಿಚ್ಚ ಸುದೀಪ್
ಬಿಗ್ ಬಾಸ್ ಸೀಸನ್ 8 ರಲ್ಲಿ ಶಮಂತ್ ಬ್ರೋಗೌಡ ದೊಡ್ಡ ಅದೃಷ್ಟಶಾಲಿ ವ್ಯಕ್ತಿ. ಬಿಗ್ ಬಾಸ್ ಜರ್ನಿಯ ಆರಂಭದಲ್ಲಿ ಸ್ವಲ್ಪ ಸ್ಲೋ ಇದ್ದ ಬ್ರೋ ಗೌಡ ಬಿಗ್ ಬಾಸ್ ಕೊನೆಯ ವೇಳೆಗೆ ವಿಕ್ಷಕರ ಮನ ಗೆದ್ದಿದ್ದರು. ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಶಮಂತ್ ಬೇಡಿಕೆ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಮಂದಿ ಅವರನ್ನು ಫಾಲೋ ಮಾಡುತ್ತಿದ್ದಾರೆ.
ಇತ್ತೀಚೆಗೆ ಶಮಂತ್ ಬ್ರೋ ಗೌಡ ಐಷಾರಾಮಿ ಕಾರು ಖರೀದಿ ಮಾಡಿದ್ದಾರೆ. ಅವರ ಕಾರನ್ನು ಕಿಚ್ಚ ಸುದೀಪ್ ಓಡಿಸಿದ್ದಾರೆ. ಆ ವಿಡಿಯೋ ಈಗ ವೈರಲ್ ಆಗುತ್ತಿದೆ.
ಬಿಗ್ ಬಾಸ್ ಸ್ಪರ್ಧಿಗಳ ಬಗ್ಗೆ ಬಿಗ್ ಸುದೀಪ್ ಅವರಿಗೆ ಮೊದಲಿನಿಂದಲೂ ವಿಶೇಷ ಗೌರವವಿದೆ ಬಿಗ್ ಬಾಸ್ ಸ್ಪರ್ಧಿಗಳನ್ನು ತಮ್ಮ ಮನೆಯವರಂತೆ ನಡೆಸಿಕೊಳ್ಳುತ್ತಾರೆ. ಬಿಗ್ ಬಾಸ್ ಸ್ಪರ್ಧಿ ಸೋನು ಪಾಟೀಲ್ ಅವರ ತಾಯಿ ಅನಾರೋಗ್ಯಕ್ಕೆ ಒಳಗಾದಾಗ ಸುದೀಪ್ ಆರ್ಥಿಕವಾಗಿ ಸಹಾಯ ಮಾಡಿದರು.
ಶಮಂತ್ ಬ್ರೋ ಗೌಡ ಇತ್ತೀಚೆಗೆ BMW 525D ಅನ್ನು ಖರೀದಿಸಿದರು. ಈ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದರು. ಈ ಕಾರನ್ನು ಸುದೀಪ್ ಅವರಿಗೆ ತೋರಿಸಿ ಅವರಿಂದ ಆಶೀರ್ವಾದ ಪಡೆಯಬೇಕೆಂಬುದು ಬ್ರೋ ಗೌಡರ ಆಸೆಯಾಗಿತ್ತು. ಅದು ಈಗ ಈಡೇರಿದೆ.
ಸುದೀಪ್ ‘ವಿಕ್ರಾಂತ್ ರೋಣಾ’ ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಕೋವಿಡ್ ಹಾವಳಿ ಕಡಿಮೆ ಆದರೆ ಚಿತ್ರ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಈ ನಡುವೆ ಶಮಂತ್ ಬ್ರೋ ಗೌಡ ಅವರ ಕಾರನ್ನು ಓಡಿಸಿದ್ದಾರೆ. ಈ ವೀಡಿಯೊವನ್ನು ಬ್ರೋ ಗೌಡ ಅವರು ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.
ಶಮಂತ್ ತಮ್ಮ ಬಿಎಂಡಬ್ಲ್ಯು ಕಾರನ್ನು ಸುದೀಪ್ ಮನೆಗೆ ತಂದಿದ್ದಾರೆ. ಸುದೀಪ್ ಕಾರು ಓಡಿಸಿದಷ್ಟೇ ಅಲ್ಲದೇ ಕಾರಿನ ಮೇಲೆ ಆಟೋಗ್ರಾಫ್ ಹಾಕಿದ್ದಾರೆ. ಸದ್ಯ ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಸುದೀಪ್ ಆಶೀರ್ವಾದದಿಂದ ಶಮಂತ್ ತುಂಬಾ ಖುಷಿಯಾಗಿದ್ದಾರೆ.