ಮಂಗಳೂರು : ಇಂದು ನಾಗರ ಪಂಚಮಿ, ಪ್ರತಿ ವರ್ಷ ನಾಗರ ಪಂಚಮಿಯಂದು ಜನರು ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸುತ್ತಿದ್ದರು. ಆದ್ರೆ ಈ ಬಾರಿ ಹೆಮ್ಮಾರಿ ಕೊರೊನಾ ವೈರಸ್ ಈ ಎಲ್ಲಾ ಆಚರಣೆಗಳಿಗೂ ಅಡ್ಡಿಯಾಗಿದೆ. ನಾಗರ ಪಂಚಮಿಯಂದೇ ಇತಿಹಾಸ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಬಂದ್ ಆಗಿದೆ. ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆ ಇಂದು ದೇವಾಲಯದಲ್ಲಿ ನಡೆಯುತ್ತಿರುವ ನಾಗರಪಂಚಮಿ ಪೂಜೆಗೆ ಸಾರ್ವಜನಿಕರಿಗೆ ಅವಕಾಶ ನೀಡದಿರಲು ದೇಗುಲ ಮಂಡಳಿ ನಿರ್ಧರಿಸಿದೆ. ಈ ಬಾರಿ ಅರ್ಚಕರಿಂದ ಮಾತ್ರ ಧಾರ್ಮಿಕ ವಿಧಿ ವಿಧಾನ ನಡೆಯಲಿದೆ.
ಇದಲ್ಲದೇ ಮಂಗಳೂರಿನ ಕುಡುಪು ದೇವಾಲಯಕ್ಕೂ ಇಂದು ನಿರ್ಬಂಧ ಹೇರಲಾಗಿದೆ. ಉತ್ತರ ಕರ್ನಾಟಕದಲ್ಲಿ ನಾಗರಪಂಚಮಿಯಂದು ಮದುವೆ ಆದ ಸಹೋದರಿಯರನ್ನ ಮನೆಗೆ ಕರೆಸುವ ಸಂಪ್ರದಾಯಕ್ಕೂ ಈ ವರ್ಷ ಬ್ರೇಕ್ ಬಿದ್ದಿದೆ.








