ಕುಂಭಮೇಳ – ‘ಗಂಗಾ ನದಿಯಲ್ಲಿ ಮಿಂದೆದ್ರೆ ಕೊರೊನಾ ಬರಲ್ವಂತೆ’..!
ಉತ್ತರಖಂಡ : ದೇಶಾದ್ಯಂತ ಕೊರೊನಾ 2ನೇ ಅಲೆ ಜೋರಾಗಿರುವ ನಡುವೆಯೂ ಕುಂಭಮೇಳಕ್ಕೆ ಅವಕಾಶ ನೀಡಲಾಗಿದ್ದು, 3 ದಿನದಲ್ಲಿ ಹರಿದ್ವಾರದಲ್ಲಿ 1000 ಕ್ಕೂ ಅಧಿಕ ಕೊರೊನಾ ಕೇಸಸ್ ದಾಖಲಾಗಿದೆ.
ಲಕ್ಷಾಂತರ ಜನರು ಕುಂಭಮೇಳದಲ್ಲಿ ಸೇರುತ್ತಿದ್ದಾರೆ. ಆದ್ರೆ ಕಳೆದ ವರ್ಷ ಕೊರೊನಾ ತೀವ್ರಗೊಳ್ಳಲು ಕಾರಣವಾಗಿದ್ದ ದೆಹಲಿಯ ನಿಜಾಮುದ್ದೀನ್ ಮರ್ಕಜ್ ಗೂ ಈ ವರ್ಷ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೂ ಹೋಲಿಕೆ ಮಾಡಲಾಗುತ್ತಿದೆ.
ಈ ಬಗ್ಗೆ ಉತ್ತರಾಖಂಡ್ ನ ಸಿಎಂ ತೀರ್ಥ ಸಿಂಗ್ ರಾವತ್ ಪ್ರತಿಕ್ರಿಯೆ ನೀಡಿದ್ದು, ಹರಿದ್ವಾರದಲ್ಲಿ ನಡೆಯುತ್ತಿರುವ ಈ ಕುಂಭಮೇಳವನ್ನು ಕಳೆದ ವರ್ಷದ ನಿಜಾಮುದ್ದೀನ್ ಮರ್ಕಜ್ ಗೆ ಹೋಲಿಸಬಾರದು ಎಂದಿದ್ದಾರೆ.
ನಿಜಾಮುದ್ದೀನ್ ಮರ್ಕಜ್ ಮುಚ್ಚಿದ ಸಭಾಂಗಣದಲ್ಲಿ ನಡೆದಿತ್ತು. ಆದರೆ ಕುಂಭ ಮೇಳವು ಬಯಲು ಪ್ರದೇಶದಲ್ಲಿ ನಡೆಯುತ್ತಿದೆ. ಮರ್ಕಜ್ ನಡೆಯುವಾಗ ಕೋವಿಡ್ ಬಗ್ಗೆ ಹೆಚ್ಚಿನ ಅರಿವಿರಲಿಲ್ಲ. ಯಾವುದೇ ಗೈಡ್ ಲೈನ್ಸ್ ಇರಲಿಲ್ಲ. ಅದರಲ್ಲಿ ವಿದೇಶಿಗರೂ ಭಾಗವಹಿಸಿದ್ದರು.
ಆದರೆ ಕುಂಭಮೇಳದಲ್ಲಿ ಭಾಗವಹಿಸುವವರು ನಮ್ಮವರೇ. ಅಷ್ಟೇ ಅಲ್ಲದೆ ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ಕುಂಭ ಮೇಳ ಕೇವಲ 12 ವರ್ಷಕ್ಕೆ ಒಮ್ಮೆ ಮಾತ್ರ ಬರುತ್ತದೆ. ಹಾಗಾಗಿ ಲಕ್ಷಾಂತರ ಜನರ ನಂಬಿಕೆ ಮತ್ತು ಭಾವನೆಗಳನ್ನು ಗೌರವಿಸಬೇಕಾಗುತ್ತದೆ ಎಂದು ತೀರತ್ ಸಿಂಗ್ ಹೇಳಿದರು.
ಮದುವೆಗೆ ಪೋಷಕರು ಒಪ್ಪಿಲ್ಲ ಅಂತ ಮಸಣದ ದಾರಿ ಹಿಡಿದ ಪ್ರೇಮಿಗಳು..!
ರಾಜ್ಯದಲ್ಲಿ ಲಾಕ್ ಡೌನ್ ಆಗೋದು ಪಕ್ಕಾನಾ..? ಸಿಎಂ ಹೇಳಿದ್ದೇನು..?
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ರಿಗೆ ಕೊರೊನಾ ಪಾಸಿಟಿವ್..!
ONLINE ವಂಚನೆ ತಡೆಗೆ ʼಸಹಾಯವಾಣಿʼ ಸೇವೆ ಆರಂಭ..!