ಜೀವನ ಪೂರ್ತಿ ಓದಲಿಲ್ಲ.. ಆದ್ರೂ 104ರ ಹರೆದಲ್ಲಿ ವಿದ್ಯಾಭ್ಯಾಸ ಕಲಿತ ವೃದ್ಧೆ  ಪರೀಕ್ಷೆಯಲ್ಲಿ 100ಕ್ಕೆ 89 ಅಂಕ ಗಳಿಸಿದ ಕಥೆ..!

1 min read

ಜೀವನ ಪೂರ್ತಿ ಓದಲಿಲ್ಲ.. ಆದ್ರೂ 104ರ ಹರೆದಲ್ಲಿ ವಿದ್ಯಾಭ್ಯಾಸ ಕಲಿತ ವೃದ್ಧೆ  ಪರೀಕ್ಷೆಯಲ್ಲಿ 100ಕ್ಕೆ 89 ಅಂಕ ಗಳಿಸಿದ ಕಥೆ..!

ಕೇರಳ : ಕೇರಳದ ಅಯರ್ಕುನ್ನಂ ಪಂಚಾಯತ್‍ ನಲ್ಲಿ ‘ಸಾಕ್ಷರತಾ’ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗಿತ್ತು.. ಈ ಪರೀಕ್ಷೆಯಲ್ಲಿ 104 ವರ್ಷದ ವೃದ್ಧೆಯೊಬ್ಬರು 100ಕ್ಕೆ 89 ಅಂಕಗಳನ್ನು ಪಡೆದು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಮೂಲಕ ವಯಸ್ಸು ಕೇವಲ ಸಂಖ್ಯೆಯಷ್ಟೇ ಎನ್ನುವುದನ್ನ ಸಾಬೀತುಪಡಿಸಿದ್ದಾರೆ..

ಈ ಕುರಿತಂತೆ ಕೇರಳದ ಶಿಕ್ಷಣ ಸಚಿವ ವಾಸುದೇವನ್ ಶಿವನ್‍ಕುಟ್ಟಿ ಅವರು ತಮ್ಮ ಟ್ವೀಟ್ ಮಾಡಿದ್ದಾರೆ.. ಪರೀಕ್ಷೆಯಲ್ಲಿ ಉತ್ತೀರ್ಣರಾದ ವೃದ್ಧೆ “ಕುಟ್ಟಿಯಮ್ಮ” ಅವರ   ಫೋಟೋವನ್ನು  ಶೇರ್ ಮಾಡಿ, 104 ವರ್ಷದ ಕೊಟ್ಟಾಯಂನ ಕುಟ್ಟಿಯಮ್ಮ ಕೇರಳ ರಾಜ್ಯ ಸಾಕ್ಷರತಾ ಮಿಷನ್‍ನ ಪರೀಕ್ಷೆಯಲ್ಲಿ 89/100 ಅಂಕಗಳನ್ನು ಗಳಿಸಿದ್ದಾರೆ. ಜ್ಞಾನದ ಜಗತ್ತನ್ನು ಪ್ರವೇಶಿಸಲು ವಯಸ್ಸು ಅಡ್ಡಿಯಾಗುವುದಿಲ್ಲ. ಅತ್ಯಂತ ಗೌರವ ಮತ್ತು ಪ್ರೀತಿಯಿಂದ, ಕುಟ್ಟಿಯಮ್ಮ ಮತ್ತು ಹೊಸದಾಗಿ ಕಲಿಯುವವರಿಗೆ ನಾನು ಶುಭ ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಅಂದ್ಹಾಗೆ ಕುಟ್ಟಿಯಮ್ಮ ಅವರು ತಮ್ಮ ಜೀವನದಲ್ಲಿ ಶಾಲೆಗೆ ಹೋಗದೇ ಇರುವುದರಿಂದ ಶಿಕ್ಷಣ ಪಡೆಯಲು ಸಾಧ್ಯವಾಗಲಿಲ್ಲ. ಆದರೆ, ಸಾಕ್ಷರತಾ ಪ್ರೇರಕ ರೆಹನಾ ಕಾರ್ಯಕ್ರಮದ ಮೂಲಕ ಬರೆಯುವುದನ್ನು ಕಲಿತರು. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ತಮ್ಮ ಮನೆಯಲ್ಲಿಯೇ ತರಗತಿಗೆ ಹಾಜರಾಗುತ್ತಿದ್ದರು. ತರಗತಿಗಳಿಗೆ ಹಾಜರಾದ ನಂತರ ಕುಟ್ಟಿಯಮ್ಮ 4ನೇ ತರಗತಿಗೆ ಪರೀಕ್ಷೆಯನ್ನು ತೆಗೆದುಕೊಳ್ಳಲು ಅರ್ಹರಾದರು.

104 ವರ್ಷ ವಯಸ್ಸಿನ ಕುಟ್ಟಿಯಮ್ಮ ಅವರಿಗೆ ಕಿವಿ ಕೇಳಿಸುವುದಿಲ್ಲ, ಆದ್ದರಿಂದ ಅವರು ಪರೀಕ್ಷೆ ವೇಳೆ ಗಟ್ಟಿಯಾಗಿ ಮಾತನಾಡುವಂತೆ ಇನ್ವಿಜಿಲೇಟರ್‍ಗಳಿಗೆ ಮನವಿ ಮಾಡಿದ್ದರು. ಸದ್ಯ ಕುಟ್ಟಿಯಮ್ಮ ಅವರ ಛಲ ಆತ್ಮವಿಶ್ವಾಸ ಇಳಿ ವಯಸ್ಸಿನಲ್ಲಿಯೂ ಕಲಿಯುವ ಹುಮ್ಮಸ್ಸಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ..

ಹಣ ಕದಿಯುವ ಮೊದಲು ದೇವರ ಕಾಲಿಗೆ ಬಿದ್ದು ಪ್ರಾರ್ಥಿಸಿದ ಕಳ್ಳ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd