ಮೊದಲ ಟಿ20 ಪಂದ್ಯಕ್ಕೂ ಮುನ್ನಾ ಕಿವೀಸ್ ಗೆ ಆಘಾತ kyle-jamieson saaksha tv
ಟೀಂ ಇಂಡಿಯಾ ವಿರುದ್ಧದ ಮೊದಲ ಟಿ20 ಪಂದ್ಯಕ್ಕೂ ಮುನ್ನ ನ್ಯೂಜಿಲೆಂಡ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ.
ಟೀಂ ಇಂಡಿಯಾದ ವಿರುದ್ಧದ ಟಿ 20 ಸರಣಿಯಿಂದ ನ್ಯೂಜಿಲೆಂಡ್ ನ ಸ್ಟಾರ್ ಬೌಲರ್ ಕೈಲ್ ಜೇಮಿನ್ಸನ್ ಹಿಂದೆ ಸರಿದಿದ್ದಾರೆ.
ಅವರು ಮುಂಬರುವ ಭಾರತ ವಿರುದ್ಧದ ಟೆಸ್ಟ್ ಸರಣಿಯತ್ತ ಗಮನ ಹರಿಸಲು ವಿಶ್ರಾಂತಿ ನೀಡಲಾಗಿದೆ ಎಂದು ತಂಡದ ಮುಖ್ಯ ಕೋಚ್ ಗ್ಯಾರಿ ಸ್ಟೆಡ್ ಹೇಳಿದ್ದಾರೆ.
ಈಗಾಗಲೇ ಗಾಯದ ಸಮಸ್ಯೆಯಿಂದಾಗಿ ಕೇನ್ ವಿಲಿಯಮ್ಸನ್ ತಂಡದಿಂದ ಹೊರಗುಳಿದಿದ್ದಾರೆ. ತಂಡದ ನಾಯಕತ್ವವನ್ನು ವೇಗದ ಬೌಲರ್ ಟಿಮ್ ಸೌಥಿ ವಹಿಸಲಿದ್ದಾರೆ.
ನ್ಯೂಜಿಲೆಂಡ್-ಭಾರತ ನಡುವಿನ ಮೊದಲ ಟಿ20 ಪಂದ್ಯ ಬುಧವಾರ (ನವೆಂಬರ್ 17) ಜೈಪುರದಲ್ಲಿ ನಡೆಯಲಿದೆ.
ಕೇನ್ ವಿಲಿಯಮ್ಸನ್ ಮತ್ತು ಕೈಲ್ ಜೇಮಿಸನ್ ಅವರೊಂದಿಗೆ ಮಾತನಾಡಿ ನಾವು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ.
ಅವರಿಬ್ಬರೂ ಭಾರತ ವಿರುದ್ಧ ಟೆಸ್ಟ್ ಪಂದ್ಯಗಳಿಗೆ ಸಿದ್ಧರಾಗಲಿದ್ದಾರೆ ಎಂದು ತಂಡದ ಕೋಚ್ ತಿಳಿಸಿದ್ದಾರೆ.









