Laal Singh Chaddha : ಟಾಲಿವುಡ್ ಸ್ಟಾರ್ಸ್ ಗೆ ಅಮೀರ್ ಖಾನ್ ಮೆಗಾ ಪ್ರಿವ್ಯೂ
ಪಾತ್ರಕ್ಕೆ ತಕ್ಕಂತೆ ಬದಲಾಗುವ ಅಮೀರ್ ಖಾನ್ ಅವರ ಮುಂದಿನ ಬಹುನಿರೀಕ್ಷಿತ ಸಿನಮಾ ಲಾಲ್ ಸಿಂಗ್ ಚಡ್ಡಾ.
ಈ ಸಿನಿಮಾದಲ್ಲಿ ಟಾಲಿವುಡ್ ಹೀರೋ ಅಕ್ಕಿನೇನಿ ನಾಗಚೈತನ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಅದ್ವೈತ್ ಚಂದನ್ ನಿರ್ದೇಶನದ ಈ ಸಿನಿಮಾ ಆಗಸ್ಟ್ 11 ರಂದು ರಿಲೀಸ್ ಆಗಲಿದೆ.
ಈ ಹಿನ್ನೆಲೆಯಲ್ಲಿ ಟಾಲಿವುಡ್ ಪ್ರಮುಖರಿಗಾಗಿ ಒಂದು ಪ್ರತ್ಯೇಕ ಶೋ ಹಾಕಲಾಗಿತ್ತು.

ಏಕಾಏಕಿ ಮೆಗಾಸ್ಟಾರ್ ಚಿರಂಜೀವಿ ಮನೆಯಲ್ಲಿ ಲಾಲ್ ಸಿಂಗ್ ಚಡ್ಡಾ ಪ್ರಿಮಿಯರ್ ಶೋ ಹಾಕಲಾಗಿತ್ತು.
ಚಿರಂಜೀವಿ, ನಾಗಾರ್ಜುನ, ರಾಜಮೌಳಿ, ಸುಕುಮಾರ್, ನಾಗಚೈತನ್ಯ ಜೊತೆಯಲ್ಲಿ ಅಮೀರ್ ಖಾನ್ ಸಿನಿಮಾ ವೀಕ್ಷಿಸಿದ್ದಾರೆ.
ಇದಕ್ಕೆ ಸಂಬಂದಿಸಿದಂತೆ ಒಂದು ವಿಡಿಯೋವನ್ನು ಮೆಗಾಸ್ಟಾರ್ ಚಿರಂಜೀವಿ ತಮ್ಮ ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಅಮೀರ್ ಖಾನ್ ಅದ್ಭುತವಾಗಿ ಸಿನಿಮಾ ಮಾಡಿದ್ದಾರೆ.
ಲಾಲ್ ಸಿಂಗ್ ಚಡ್ಡಾ ತೆಲುಗು ಆವೃತ್ತಿಯನ್ನು ಪ್ರಸ್ತುತಪಡಿಸುವುದು ನನ್ನ ಅದೃಷ್ಠ ಎಂದು ಭಾವಿಸುತ್ತೇನೆ.
ಅವರನ್ನ ಪ್ರೇಕ್ಷಕರು ಆದರಿಸುತ್ತಾರೆ ಎಂದು ಚಿರು ಬರೆದುಕೊಂಡಿದ್ದಾರೆ.