‘ಲಕ್ಷ್ಮೀ ಬಾರಮ್ಮ’ ಜೋಡಿ ಚಿನ್ನು – ಚಂದು ಎಂಗೇಜ್ ಮೆಂಟ್..!

1 min read

‘ಲಕ್ಷ್ಮೀ ಬಾರಮ್ಮ’ ಜೋಡಿ ಚಿನ್ನು – ಚಂದು ಎಂಗೇಜ್ ಮೆಂಟ್..!

ಲಕ್ಷ್ಮೀ ಬಾರಮ್ಮ ಧಾರವಾಹಿ ಮೂಲಕ ಮನೆ ಮಾತಾಗಿದ್ದ ಕ್ಯೂಟ್ ಜೋಡಿ ಚಂದನ್ ಕುಮಾರ್ ಮತ್ತೆ ಕವಿತಾ ಗೌಡ ( ಚಂದು – ಚಿನ್ನು )ಇಂದು ಎಂಗೇಜ್ ಮೆಂಟ್ ಮಾಡಿಕೊಳ್ಳುವ ಮೂಲಕ ಎಲ್ಲಾ  ಗಾಸಿಪ್ ಗಳಿಗೆ ತೆರೆ ಎಳೆದಿದ್ದಾರೆ.

ಹೌದು ಈ ಜೋಡಿ ಸುತ್ತಾಟ , ಒಟ್ಟಾಗಿಯೇ ಕಾಣಿಸಿಕೊಳ್ಳುತ್ತಿದ್ದನ್ನ ಕಂಡು ಇವರು ಲವರ್ಸ್ ಅಂತಲೇ ನೆಟ್ಟಿಗರು ಮಾತನಾಡಿಕೊಳ್ಳೋಕೆ ಶುರು ಮಾಡಿದ್ದರು. ಆದ್ರೆ ಈ ಗಾಸಿಪ್ ಗಳಿಗೆ ಹಲವು ಬಾರಿ ಪ್ರತಿಕ್ರಿಯೆ ನೀಡಿದ್ದ  ಚಂದನ್ ಕವಿತಾ ನಾವಿಬ್ಬರೂ ಒಳ್ಳೆಯ ಫ್ರೆಂಡ್ಸ್ ಅಷ್ಟೇ ಎಂದಿದ್ದರು. ಆದ್ರೂ ನೆಟ್ಟಿಗರು ಇದನ್ನ ಒಪ್ಪಲು ತಯಾರಿರಲಿಲ್ಲ. ಇದೀಗ ಕಡೆಗೂ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದೆ.

ಆದ್ರೆ ಮದುವೆ ದಿನಾಂಕವನ್ನ ಇನ್ನೂವರೆಗೂ ರಿವೀಲ್ ಮಾಡಿಲ್ಲ. ಇನ್ನೂ ಚಂದನ್ ತಮ್ಮ ಎಂಗೇಜ್ ಮೆಂಟ್  ಫೋಟೋಗಳನ್ನ ಇನ್ ಸ್ಟಾಗ್ರಾಂನಲ್ಲಿ  ಶೇರ್ ಮಾಡಿ ಜೀವನ ಸಂಗಾತಿ ಒಬ್ಬ ಉತ್ತಮ ಗೆಳೆಯ/ಗೆಳತಿಯಂತಿರಬೇಕು ಎಂಬುದನ್ನು ನಾನು ಕೇಳಿದ್ದೇನೆ. ಆದರೆ ನಮ್ಮ ಜೀವನದಲ್ಲಿ ಅದು ರಿವರ್ಸ್ ಆಗಿದೆ. ನಾವಿಬ್ಬರೂ ಜೀವನದ ಉತ್ತಮ ಪಾರ್ಟ್ನರ್ಸ್ ಆಗಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ನಿನ್ನೆಯಷ್ಟೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ನಾವಿಬ್ಬರು ಏಪ್ರಿಲ್ 1 ರಂದು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದೇವೆಂದು ಬಹಿರಂಗಪಡಿಸಿದ್ದರು.  ‘ಏಪ್ರಿಲ್ 1ಕ್ಕೆ ನಾವು ಮೂರ್ಖರಾಗುತ್ತಿದ್ದೇವೆ’ ಎಂದು ಬರೆದುಕೊಂಡು ಕವಿತಾ ಗೌಡ ಜೊತೆಗಿರುವ ಫೋಟೋವನ್ನು ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಭಾರೀ ಚರ್ಚೆಗೆ ಗ್ರಾಸವಾಗಿತ್ತು.  ಸಾಕಷ್ಟು ಊಹಾಪೋಹಗಳಿಗೂ ಕಾರಣವಾಗಿತ್ತು. ಈಗ ನೆಟ್ಟಿಗರ ಎಲ್ಲ ಅನುಮಾನಗಳು ದೂರಾಗಿವೆ.

BIGBOSS : ನನ್ನ ತಂಟೆಗೆ ಬಂದ್ರೆ ಸುಮ್ಮನೆ ಇರಲ್ಲ – ಸಂಬರಗಿಗೆ ವಾರ್ನಿಂಗ್ ಕೊಟ್ಟ ಉರುಡುಗ..!

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd