ADVERTISEMENT
Saturday, April 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಜೀವಮಾನದಲ್ಲಿ ಒಮ್ಮೆ ಭೇಟಿ ನೀಡಲೇಬೇಕಾದ ‘ಲಕ್ಷದ್ವೀಪ’..!

Namratha Rao by Namratha Rao
June 14, 2021
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಜೀವಮಾನದಲ್ಲಿ ಒಮ್ಮೆ ಭೇಟಿ ನೀಡಲೇಬೇಕಾದ ‘ಲಕ್ಷದ್ವೀಪ’..!

ಲಕ್ಷದ್ವೀಪ.. ಭಾರತದ ದಕ್ಷಿಣಕ್ಕೆ ಅರಬ್ಬೀ ಸಮುದ್ರದಲ್ಲಿರುವ ಸುಂದರ ದ್ವೀಪ ಸಮೂಹ. ಈ ದ್ವೀಪಸಮೂಹ ಭಾರತದ ಚಿಕ್ಕ ಕೇಂದ್ರಾಡಳಿತ ಪ್ರದೇಶ. ಲಕ್ಷದ್ವೀಪದ ಒಟ್ಟು ಭೂ ವಿಸ್ತೀರ್ಣ 32ಚದರ ಕಿ.ಮೀ.ಗಳು. ಇವು 4,200ಚ. ಕಿ. ಮೀ. ವಿಸ್ತೀರ್ಣದ ಜಲಭಾಗದ ಮಧ್ಯೆ ಇವೆ.

Related posts

ಮೋದಿ ಎಂದರೆ ಭಯವೇ ನಾವು ಕೇಜ್ರಿವಾಲ್ ಸೈನಿಕರು ಸಮೋಸಾ ಬೆಲೆ ಇಳಿಸುವುದಲ್ಲ ನಮ್ಮ ಗುರಿ ರಾಘವ್ ಚಡ್ಡಾಗೆ ಆಪ್ ತಿರುಗೇಟು

ಮೋದಿ ಎಂದರೆ ಭಯವೇ ನಾವು ಕೇಜ್ರಿವಾಲ್ ಸೈನಿಕರು ಸಮೋಸಾ ಬೆಲೆ ಇಳಿಸುವುದಲ್ಲ ನಮ್ಮ ಗುರಿ ರಾಘವ್ ಚಡ್ಡಾಗೆ ಆಪ್ ತಿರುಗೇಟು

April 4, 2026
ಎಸ್ಎಸ್ಎಲ್ ಸಿ ತೃತೀಯ ಭಾಷೆ ಅಂಕ ಕಡಿತ ನಿರ್ಧಾರ ಮರುಪರಿಶೀಲಿಸಿ ರಾಜ್ಯ ಸರ್ಕಾರಕ್ಕೆ ರಾಜ್ಯಪಾಲರ ಖಡಕ್ ಸೂಚನೆ

ಎಸ್ಎಸ್ಎಲ್ ಸಿ ತೃತೀಯ ಭಾಷೆ ಅಂಕ ಕಡಿತ ನಿರ್ಧಾರ ಮರುಪರಿಶೀಲಿಸಿ ರಾಜ್ಯ ಸರ್ಕಾರಕ್ಕೆ ರಾಜ್ಯಪಾಲರ ಖಡಕ್ ಸೂಚನೆ

April 4, 2026

ಲಕ್ಷದ್ವೀಪವು ಒಂದು ಕೇಂದ್ರಾಡಳಿತ ಪ್ರದೇಶವಾಗಿದ್ದು ಸಾಕಷ್ಟು ಭಾರತೀಯ ಸೇನಾ ಕಚೇರಿಗಳನ್ನು ಇಲ್ಲಿ ಕಾಣಬಹುದಾಗಿದೆ. ಈ ನಡುಗಡ್ಡೆಗಳ ಸಮೂಹವು ಸಾಕಷ್ಟು ಸಂಖ್ಯೆಯಲ್ಲಿ ಚಿಕ್ಕ ಪುಟ್ಟ ಭೂಪ್ರದೇಶಗಳನ್ನು ಹೊಂದಿದ್ದು ಮಾರ್ಮಿಕವಾಗಿ ಲಕ್ಷದ್ವೀಪಗಳಿಂದ ಕೂಡಿರುವಂತೆ ಕಾಣುವುದರಿಂದ ಇದಕ್ಕೆ ಲಕ್ಷದ್ವೀಪ ಎಂಬ ಹೆಸರು ಬಂದಿದೆ. ಇನ್ನು, ಏಳನೇಯ ಶತಮಾನದಲ್ಲಿ ಇಸ್ಲಾಂ ಧರ್ಮಪ್ರಚಾರಕರು ಇಲ್ಲಿಗೆ ಬಂದು ತಮ್ಮ ಧರ್ಮದ ಪ್ರಭಾವ ಬೀರಿದರು.

ಟಿಪ್ಪು ಸುಲ್ತಾನನ ವಶದಲ್ಲಿತ್ತು ಈ ಪ್ರದೇಶ..!

ಪೋರ್ಚುಗೀಸರು ಹಾಗೂ ಮಧ್ಯಕಾಲೀನದಲ್ಲಿ ಚೋಳ ಸಾಮ್ರಾಜ್ಯವೂ ಇಲ್ಲಿ ಆಡಳಿತ ನಡೆಸಿತ್ತೆಂದು ತಿಳಿದುಬರುತ್ತದೆ. ತದನಂತರ ಟಿಪ್ಪು ಸುಲ್ತಾನನ ಕೈವಶವಾಗಿ ಕೊನೆಯದಾಗಿ ಬ್ರಿಟಿಷರ ಆಡಳಿತಕ್ಕಿದು ಒಳಪಟ್ಟಿತು. ಬ್ರಿಟಿಷರು ಭಾರತವನ್ನು ತೊರೆದ ನಂತರ ಈ ನಡುಗಡ್ಡೆಗಳ ಸಮೂಹವು ಸ್ವತಂತ್ರ ಭಾರತದ ಅಧೀನಕ್ಕೊಳಪಟ್ಟು ನಂತರ ಇದನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ರೂಪಿಸಲಾಯಿತು. ಇಲ್ಲಿಯ ಜನರ ಧರ್ಮದ ಬಗ್ಗೆ ಅನೇಕ ಕಥೆಗಳಿದ್ದು, ಕೇರಳದ ಕೊಚ್ಚಿಯ ಕೊನೆಯ ರಾಜ ಚೆರಮಾನ್ ಪೆರುಮಾಳ್ ದ್ವೀಪಕ್ಕೆ ಬಂದಾಗ ಅರಬ್ ವ್ಯಾಪಾರಿಗಳ ಪ್ರಭಾವಕ್ಕೆ ಒಳಗಾಗಿ ಮತಾಂತರವಾಗಿದ್ದಾನೆ ಎಂಬುದು ಅವುಗಳಲ್ಲಿ ಒಂದು.

ಇಲ್ಲಿಯ ಮುಖ್ಯ ದ್ವೀಪಗಳೆಂದರೆ ಕವರಟಿ, ಕಲ್ಪೇನಿ, ಮಿನಿಕಾಯ್, ಅಗಟಿ, ಕಡಮಟ್ಟಿ, ತಿನ್ನಿಕಾರ್ ಮತ್ತು ಬಂಗಾರಂ. ಪ್ರಮುಖ ದ್ವೀಪವಾದ ಕೊಡಮಾಟ್ ಅನ್ನು ಹಿಂದೆ ಲಖ್‍ದೀವ್ ಮಿನಿಕಾಯ್ ದ್ವೀಪವೆಂದು ಕರೆಯುತ್ತಿದ್ದರು.

ಲಕ್ಷದ್ವೀಪ ಅನೂಹ್ಯ ನೈಸರ್ಗಿಕ ಸೌಂದರ್ಯ ಮತ್ತು ಅಪ್ಪಟ ಸ್ಪಟಿಕದಂತದ ಸಮುದ್ರ ತೀರಗಳಿಗಾಗಿ ಪ್ರಸಿದ್ದಿ ಪಡೆದಿದೆ. ಹೀಗಾಗಿ ಇಲ್ಲಿ ಸದಾ ಪ್ರವಾಸಿಗರು ಆಗನಿಸುತ್ತಿರುತ್ತಾರೆ. ಹಡಗಿನಲ್ಲಿ ಸುಮಾರು ಒಂದು ದಿನ ಪಯಣಿಸಿ ಅಥವಾ ಚಿಕ್ಕ ವಿಮಾನದಲ್ಲಿ ಮಾತ್ರವೇ ಇಲ್ಲಿ ಬರಬಹುದು. ಕಡಿಮೆ ಸ್ಥಳ ಇರುವ ಕಾರಣದಿಂದಲೇ ಇಲ್ಲಿ ಬರುವ ಪ್ರವಾಸಿಗರ ಸಂಖ್ಯೆಗೆ ಮಿತಿ ಇರುತ್ತದೆ. ಹಾಗಾಗಿ, ಅಧಿಕೃತ ಪ್ರವಾಸಿ ಏಜೆಂಟರ ಮೂಲಕವೇ ಇಲ್ಲಿ ಬರಬೇಕಾಗುತ್ತದೆ. ಇದಕ್ಕಾಗಿ ಕೊಚಿನ್ ನಗರದಲ್ಲಿರುವ ಕಚೇರಿಯಲ್ಲಿ ಪ್ರವಾಸಿಗರಾಗಿ ನೊಂದಾಯಿಸಿಕೊಂಡು ಅಧಿಕೃತ ಪರವಾನಗಿಯ ಮೂಲಕವೇ ಪ್ರಯಾಣಿಸಬೇಕು.

ಆಲೆಪ್ಪಿ…ದೋಣಿಮನೆಗಳು ಪ್ರವಾಸಿಗರ ಹಾಟ್ ಫೇವ್ರೇಟ್..! ಈ ಸ್ಥಳದ ವಿಶೇಷತೆಗಳು ಸಾಕಷ್ಟಿವೆ..!

ಇಲ್ಲಿ ಎಳನೀರು ‌ಭಾರೀ ಅಗ್ಗ..!!

ಇಲ್ಲಿ ಬಾವಿ ತೋಡಿದರೂ ಸಿಗುವುದು ಉಪ್ಪು ನೀರು. ಹಾಗಾಗಿ ತಾಜಾ ನೀರಿಗೆ ಇಲ್ಲಿ ಸದಾ ಆಭಾವ. ಮಿನರಲ್ ನೀರು ಬೇಕಿದ್ದರೆ 403 ಕಿ.ಮೀ. ದೂರದ ಕೊಚ್ಚಿನ್ ನಗರದಿಂದಲೇ ಬರಬೇಕು. ಹಾಗಾಗಿ ನೀರು ಇಲ್ಲಿ ದುಬಾರಿ. ಬದಲಿಗೆ, ಇಲ್ಲಿ ಸದಾ ದೊರಕುವ ಎಳನೀರನ್ನೇ ಜನರು ನೀರಿನ ಬದಲಾಗಿ ಕುಡಿಯುತ್ತಾರೆ. ಅಂಗಡಿಗಳಲ್ಲಿಯೂ ಸದಾ ಎಳನೀರು ದೊರಕುತ್ತದೆ.

ಇಲ್ಲಿ ಕಳ್ಳತನ ನಡೆಯುವುದೇ ಇಲ್ಲ..!

ಇಲ್ಲಿ ನೀವೇನಾದರೂ ಪ್ರವಾಸಕ್ಕೆ ತೆರಳುವುದಾದರೆ ನಿಮ್ಮ ವಸ್ತುಗಳು ಕಳ್ಳತನವಾಗುವ ಬಗ್ಗೆ ಟೆನ್ಷನ್ ಬಿಟ್ಟುಬಿಡಿ. ಇಲ್ಲಿ ಕಳ್ಳತನಕ್ಕೆ ಅವಕಾಶವೇ ಇಲ್ಲ.

ಇನ್ನು, ಲಕ್ಷದ್ವೀಪದ ಮುಖ್ಯ ಆಕರ್ಷಣೆ ಇಲ್ಲಿನ ಪೂರ್ವತೀರದ ಅಟ್ಟಾಲ್ ಗಳಾಗಿವೆ. ಇವು ಹೆಚ್ಚಿನಂಶ ಮೊಣಕಾಲಿನಷ್ಟೇ ಆಳದಲ್ಲಿದ್ದು ಇಲ್ಲಿ ನೂರಾರು ಬಗೆಯ ಹವಳಗಳಿವೆ. ಇವು ಗಾಜಿನಂತೆ ಮುರಿದರೆ ತೀವ್ರ ಹರಿತವಾದ ಅಂಚಿನ ಕತ್ತಿಯಂತಿದ್ದು ಇದರ ಮೇಲೆ ಕಾಲಿಟ್ಟರೆ ಕಾಲು ಕುಯ್ದು ಹೋಗುತ್ತದೆ. ಹಾಗಾಗಿ, ಹವಳಗಳ ಮೇಲೆ ಕಾಲಿಡುವುದು ಅಪಾಯಕರ. ಅಷ್ಟೇ ಅಲ್ಲ ಭಾರತ ಸರ್ಕಾರ ಈ ಹವಳಗಳನ್ನು ಕೀಳುವುದನ್ನಾಗಲಿ ಕೊಂಡು ಹೋಗುವುದನ್ನಾಗಲಿ ನಿಷೇಧಿಸಿದೆ. ಅದರಲ್ಲೂ ಉದ್ದೇಶಪೂರ್ವಕವಾಗಿ ಹವಳಗಳಿಗೆ ಹಾನಿ ಎಸಗುವುದು ಕಂಡು ಬಂದರೆ ಶಿಕ್ಷೆಗೆ ಗುರಿಪಡಿಸಲಾಗುತ್ತದೆ.

ಕಯಾಕ್ಸ್, ವಿಂಡ್ ಸರ್ಫರ್‌ಗಳು ಮತ್ತು ನೌಕಾಯಾನ ದೋಣಿಗಳು ಬಾಡಿಗೆಗೆ ಲಭ್ಯವಿದೆ. ಡಾಲ್ಫಿನ್ ಡೈವ್ ಸೆಂಟರ್ ಸ್ಕೂಬಾ ಡೈವ್ ಅನ್ನು ಇಷ್ಟಪಡುವವರಿಗೆ ಆಕರ್ಷಣೆಯಾಗಿದೆ. ಈ ಹವಳದ ಸ್ವರ್ಗಕ್ಕೆ ಭೇಟಿ ನೀಡಲು ಕೋರಲ್ ರೀಫ್ ಮತ್ತು ತಾರತಾಶಿ ಪ್ರವಾಸಿ ಪ್ಯಾಕೇಜ್‌ಗಳನ್ನು ಪಡೆಯಬಹುದು. ಮಂಗಳೂರು ಮತ್ತು ಕೊಚ್ಚಿನ್ ನಿಂದ ಲಕ್ಷದ್ವೀಪ ಕ್ಕೆ ಕ್ರೂಸ್ ಮೂಲಕ ಒಂದು ರಾತ್ರಿ ಪ್ರಯಾಣ ಮಾಡಿ ತೆರಳಬಹುದು. ಇನ್ನು ದೇಶದ ಕೆಲವು ನಗರಗಳಿಂದ ಇಲ್ಲಿಗೆ ವಿಮಾನ ಸೌಕರ್ಯವಿದೆ.

ಈ ದ್ವೀಪ ಚಾಕಲೇಟ್ ಗುಡ್ಡಗಳಿಗೆ ಭಾರೀ ಫೇಮಸ್…. ಎಣಿಕೆಗೆ ಸಿಗದಷ್ಟಿವೆ ಚಾಕೊಲೇಟ್ ಗುಡ್ಡಗಳು..!

Tags: indiaislandlakshadweepaTravel
ShareTweetSendShare
Join us on:

Related Posts

ಮೋದಿ ಎಂದರೆ ಭಯವೇ ನಾವು ಕೇಜ್ರಿವಾಲ್ ಸೈನಿಕರು ಸಮೋಸಾ ಬೆಲೆ ಇಳಿಸುವುದಲ್ಲ ನಮ್ಮ ಗುರಿ ರಾಘವ್ ಚಡ್ಡಾಗೆ ಆಪ್ ತಿರುಗೇಟು

ಮೋದಿ ಎಂದರೆ ಭಯವೇ ನಾವು ಕೇಜ್ರಿವಾಲ್ ಸೈನಿಕರು ಸಮೋಸಾ ಬೆಲೆ ಇಳಿಸುವುದಲ್ಲ ನಮ್ಮ ಗುರಿ ರಾಘವ್ ಚಡ್ಡಾಗೆ ಆಪ್ ತಿರುಗೇಟು

by Shwetha
April 4, 2026
0

ಆಮ್ ಆದ್ಮಿ ಪಕ್ಷದಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದ್ದು ನಾಯಕರ ನಡುವಿನ ವಾಕ್ಸಮರ ತಾರಕಕ್ಕೇರಿದೆ. ರಾಜ್ಯಸಭೆಯ ಎಎಪಿ ಉಪನಾಯಕ ಸ್ಥಾನದಿಂದ ಯುವ ನಾಯಕ ರಾಘವ್ ಚಡ್ಡಾ ಅವರನ್ನು ದಿಢೀರನೆ...

ಎಸ್ಎಸ್ಎಲ್ ಸಿ ತೃತೀಯ ಭಾಷೆ ಅಂಕ ಕಡಿತ ನಿರ್ಧಾರ ಮರುಪರಿಶೀಲಿಸಿ ರಾಜ್ಯ ಸರ್ಕಾರಕ್ಕೆ ರಾಜ್ಯಪಾಲರ ಖಡಕ್ ಸೂಚನೆ

ಎಸ್ಎಸ್ಎಲ್ ಸಿ ತೃತೀಯ ಭಾಷೆ ಅಂಕ ಕಡಿತ ನಿರ್ಧಾರ ಮರುಪರಿಶೀಲಿಸಿ ರಾಜ್ಯ ಸರ್ಕಾರಕ್ಕೆ ರಾಜ್ಯಪಾಲರ ಖಡಕ್ ಸೂಚನೆ

by Shwetha
April 4, 2026
0

ರಾಜ್ಯ ಸರ್ಕಾರದ ಎಸ್ಎಸ್ಎಲ್ ಸಿ ಪರೀಕ್ಷೆಯ ತೃತೀಯ ಭಾಷೆ ನೀತಿಗೆ ಇದೀಗ ಹೊಸ ತಿರುವು ಸಿಕ್ಕಿದೆ. ಹತ್ತನೇ ತರಗತಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಗಳಿಗೆ ಅಂಕಗಳ...

ಅಸಮಾಧಾನ ಮರೆತು ದಾವಣಗೆರೆ ಬಾಗಲಕೋಟೆ ಚುನಾವಣಾ ಅಖಾಡಕ್ಕೆ ಧುಮುಕಿದ ಜಮೀರ್ ಅಹ್ಮದ್ ಖಾನ್ ; ಅಲ್ಪಸಂಖ್ಯಾತ ಮತಗಳ ಕ್ರೋಢೀಕರಣಕ್ಕೆ ಜಮೀರ್ ತಂತ್ರ ಶುರು

ಅಸಮಾಧಾನ ಮರೆತು ದಾವಣಗೆರೆ ಬಾಗಲಕೋಟೆ ಚುನಾವಣಾ ಅಖಾಡಕ್ಕೆ ಧುಮುಕಿದ ಜಮೀರ್ ಅಹ್ಮದ್ ಖಾನ್ ; ಅಲ್ಪಸಂಖ್ಯಾತ ಮತಗಳ ಕ್ರೋಢೀಕರಣಕ್ಕೆ ಜಮೀರ್ ತಂತ್ರ ಶುರು

by Shwetha
April 4, 2026
0

ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆಯ ಕಾವೇರುತ್ತಿರುವ ಹೊತ್ತಿನಲ್ಲೇ ರಾಜ್ಯ ಕಾಂಗ್ರೆಸ್ ವಲಯದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಯೊಂದು ನಡೆದಿದೆ. ಕಳೆದ ಕೆಲವು ದಿನಗಳಿಂದ ಪ್ರಚಾರ ಕಣದಿಂದ ಅಂತರ ಕಾಯ್ದುಕೊಂಡಿದ್ದ...

ದೇವೇಗೌಡರ ಶ್ರಮದಿಂದ ಅಧಿಕಾರ ಉಂಡು ದ್ರೋಹ ಬಗೆದ್ರಿ:ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಆಕ್ರೋಶ

ದೇವೇಗೌಡರು ನಮ್ಮನ್ನು ವಸೂಲಿಗೆ ತಂದಿಲ್ಲ ಜನರ ಸೇವೆಗೆ ತಂದಿದ್ದಾರೆ : ಮಗನನ್ನು ರಾಜಕೀಯಕ್ಕೆ ತಂದು ವಸೂಲಿಗಿಳಿದ ಸಿಎಂ ಸಿದ್ದರಾಮಯ್ಯಗೆ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ ; ಹೆಚ್ ಡಿಕೆ ವಾಗ್ದಾಳಿ

by Shwetha
April 4, 2026
0

ಮಂಡ್ಯ: ರಾಜ್ಯ ರಾಜಕಾರಣದಲ್ಲಿ ಮುಡಾ ಹಗರಣ, ಭ್ರಷ್ಟಾಚಾರದ ಆರೋಪಗಳ ನಡುವೆಯೇ ಇದೀಗ ಕುಟುಂಬ ರಾಜಕಾರಣದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಜೆಡಿಎಸ್ ವಿರುದ್ಧ ಕುಟುಂಬ ರಾಜಕಾರಣದ ಟೀಕೆ...

ಎಚ್ ಎಸ್ ಆರ್ ಪಿ ಕಡ್ಡಾಯ ಆದೇಶ ದಿಢೀರ್ ವಾಪಸ್ ನಿಯಮ ಪಾಲಿಸಿದ ಪ್ರಾಮಾಣಿಕ ವಾಹನ ಸವಾರರಿಗೆ ಸರ್ಕಾರದ ಉಂಡೆ ನಾಮ ಗ್ಯಾರಂಟಿ ಆಯ್ತು!

ಎಚ್ ಎಸ್ ಆರ್ ಪಿ ಕಡ್ಡಾಯ ಆದೇಶ ದಿಢೀರ್ ವಾಪಸ್ ನಿಯಮ ಪಾಲಿಸಿದ ಪ್ರಾಮಾಣಿಕ ವಾಹನ ಸವಾರರಿಗೆ ಸರ್ಕಾರದ ಉಂಡೆ ನಾಮ ಗ್ಯಾರಂಟಿ ಆಯ್ತು!

by Shwetha
April 4, 2026
0

ರಾಜ್ಯಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಹಾಗೂ ವಾಹನ ಸವಾರರಿಗೆ ತಲೆನೋವಾಗಿ ಪರಿಣಮಿಸಿದ್ದ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಕಡ್ಡಾಯ ಆದೇಶವನ್ನು ರಾಜ್ಯ ಸರ್ಕಾರ ಅಂತಿಮವಾಗಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram