lalbagh flower show : ಬೆಂಗಳೂರು ಇತಿಹಾಸ ಸಾರಲಿದೆ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನ…
ಇಂದಿನಿಂದ ಬೆಂಗಳೂರಿನ ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಲಾಗಿದೆ. ಬೆಂಗಳೂರು ಇತಿಹಾಸ ವಿಷಯವನ್ನ ಆಧಾರವಾಗಿಟ್ಟುಕೊಂಡು ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ-2023 ವನ್ನ ನಡೆಸಲಾಗುತ್ತಿದೆ.
ಈ ಬಾರಿಯ ಫಲಪುಷ್ಪ ಪ್ರದರ್ಶನ ಬೆಂಗಳೂರಿನ ಇತಿಹಾಸದ ವೈಭವವನ್ನ ಸಾರಲಿದೆ. ಕೆಂಪೇಗೌಡ, ಟಿಪ್ಪು ಸುಲ್ತಾನ್, ನಾಲ್ವಡಿ ಕೃಷ್ಣರಾಜ ಒಡೆಯರ್ ಬೆಂಗಳೂರಿಗೆ ನೀಡಿದ ಕೊಡುಗೆಯನ್ನು ಪ್ರದರ್ಶಿಸಲಾಗುತ್ತದೆ ಎಂದು ಶಾಸಕ ಮುನಿರತ್ನ ಹೇಳಿದ್ದಾರೆ.
ಇಂದಿನ ಆಧುನಿಕ ಬೆಂಗಳೂರು ನಗರ ಇತಿಹಾಸದ ಭದ್ರ ಬುನಾದಿಯ ಮೇಲೆ ನಿಂತಿದೆ. ಬೆಂಗಳೂರು ನಗರ ಇತಿಹಾಸದ ಹಲವಾರು ಪ್ರಮುಖ ಘಟ್ಟಗಳು, ತಂತ್ರಜ್ಞಾನದ ಕಲಾಕೃತಿಗಳು ಕೇಂದ್ರ ಸ್ಥಾನದಲ್ಲಿರುವ ಗ್ಲಾಸ್ ಹೌಸ್ ನಲ್ಲಿ ಪ್ರದರ್ಶನಗೊಳ್ಳಲಿದೆ. ಅಷ್ಟೇ ಅಲ್ಲದೆ, 30 ಸಾವಿರಕ್ಕೂ ಅಧಿಕ ಹೂಗಳಿಂದ ಬೆಂಗಳೂರು ನಗರದ 1500 ವರ್ಷದ ಇತಿಹಾಸವನ್ನು ಬಿಂಬಿಸಲಿದ್ದೇವೆ ಎಂದು ಅವರು ಹೇಳಿದ್ದಾರೆ.
ಕೊಲಂಬಿಯಾ, ಕೀನ್ಯಾ, ನೆದರ್ಲ್ಯಾಂಡ್ಸ್, ಇಸ್ರೇಲ್, ಆಸ್ಟ್ರೇಲಿಯಾ ಸೇರಿದಂತೆ 11 ದೇಶಗಳ ಹೂವುಗಳು ಪ್ರದರ್ಶನದಲ್ಲಿ ಜನರ ಮನಸೂರೆಗೊಳ್ಳಲಿವೆ. ತಮಿಳುನಾಡು, ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಸಿಕ್ಕಿಂ ಸೇರಿದಂತೆ ಐದು ರಾಜ್ಯಗಳ ಹೂವುಗಳು ಕೂಡ ಪ್ರದರ್ಶನಗೊಳ್ಳಲಿವೆ ಎಂದು ಮುನಿರತ್ನ ಅವರು ತಿಳಿಸಿದ್ದಾರೆ.
lalbagh flower show : Bangalore history will be made by Lalbagh flower show…







