VIRAT KOHLI | ಡು ಆರ್ ಡೈ ಸ್ಥಿತಿಯಲ್ಲಿ ವಿರಾಟ್..
ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಸಾರಥಿಯಾಗಿ.. ಸ್ಟಾರ್ ಬ್ಯಾಟರ್ ಆಗಿ ತನಗೆ ತಾನೇ ಸರಿಸಾಟಿ ಅಂತಾ ನಿರೂಪಿಸಿದ್ದಾರೆ.
ನಾಯಕನಾಗಿ ಅದೆಷ್ಟೋ ಗೆಲುವುಗಳನ್ನು ಕಂಡಿರುವ ವಿರಾಟ್, ರನ್ ಮಿಷನ್ ಆಗಿ ಬೆಳೆದು ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
ಟೀ ಇಂಡಿಯಾದ ಮುಖಪುಟವಾಗಿ ಅಭಿಮಾನಿಗಳಿಂದ ಕಿಂಗ್ ಕೊಹ್ಲಿ ಎಂದು ಕರೆಸಿಕೊಂಡಿದ್ದಾರೆ. ಆದ್ರೆ ಕೆಲವು ವರ್ಷಗಳಿಂದ ಸೀನ್ ರಿವರ್ಸ್ ಆಗಿದೆ.
ಒಂದು ಕಾಲದಲ್ಲಿ ಆನೆ ನಡೆದಿದ್ದೇ ದಾರಿ ಎಂಬಂತೆ ಸಾಗಿದ ವಿರಾಟ್ ಕೊಹ್ಲಿ, ಈಗ ತಮ್ಮ ಸ್ಥಾನಕ್ಕೆ ತಕ್ಕಂತೆ ಮಿಂಚುತ್ತಿಲ್ಲ.
ಮುಖ್ಯವಾಗಿ ಕ್ಯಾಪ್ಟನ್ಸಿಯಿಂದ ಕೆಳಗಿಳಿದ ಬಳಿಕ ರನ್ ಗಳಿಸೋದನ್ನೇ ಮರೆತಂತೆ ಕಾಣುತ್ತಿದೆ.
ಮತ್ತೊಂದು ಕಡೆ ಯುವ ಬ್ಯಾಟರ್ ಗಳು ರಾಕೆಟ್ ವೇಗದಲ್ಲಿ ಸಾಗುತ್ತಿದ್ದಾರೆ.
ಮುಖ್ಯವಾಗಿ ಚುಟುಕು ಕ್ರಿಕೆಟ್ ನಲ್ಲಿ ತಮ್ಮ ಪ್ರತಿಭೆಯನ್ನು ನಿರೂಪಿಸಿಕೊಳ್ಳುತ್ತಾ ತಂಡದಲ್ಲಿ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ.
ಹೀಗಾಗಿಯೇ ಸೆಲೆಕ್ಟರ್ ಗಳು ಸಹಿತ ತಂಡದ ಆಯ್ಕೆಯಲ್ಲಿ ಗೊಂದಲಕ್ಕೆ ಬೀಳುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಮಿಂಚದೇ ಇದ್ದರೇ ತಂಡದಲ್ಲಿ ಅವರು ಸ್ಥಾನ ಕಳೆದುಕೊಳ್ಳುವ ಅವಕಾಶಗಳಿವೆ ಎಂದು ಅಂದಾಜಿಸಲಾಗುತ್ತಿದೆ.
ಇಂಗ್ಲೆಂಡ್ ಕ್ರಿಕೆಟ್ ತಂಡದ ವಿರುದ್ಧ ನಡೆಯಲಿರುವ ಟಿ 20 ಸರಣಿಯಲ್ಲಿ ವಿರಾಟ್ ಕೊಹ್ಲಿ ಅಬ್ಬರಿಸದೇ ಇದ್ದರೇ ಅವರಿಗೆ ಇದೇ ಕೊನೆಯ ಸರಣಿಯಾಗಲಿದೆ ಎಂದು ಹೇಳಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಬಿಸಿಸಿಐ ಅಧಿಕಾರಿ ಒಬ್ಬರು ಇನ್ ಸೈಡ್ ಸ್ಪೋರ್ಟ್ ಜೊತೆ ಮಾತನಾಡುತ್ತಾ ಆಸಕ್ತಿದಾಯಕ ಕಮೆಂಟ್ ಗಳನ್ನು ಮಾಡಿದ್ದಾರೆ.
ಈ ಸಿರೀಸ್ ನಲ್ಲಿ ವಿರಾಟ್ ಕೊಹ್ಲಿ ಮಿಂಚದೇ ಹೋದಲ್ಲಿ ಟಿ 20 ವಿಶ್ವಕಪ್ 2022 ರ ತಂಡದಲ್ಲಿ ಸ್ಥಾನ ಪಡೆಯೋದು ತೀರಾ ಅನುಮಾನ ಎಂದು ತಿಳಿಸಿದ್ದಾರೆ.
ಭಾರತ ತಂಡಕ್ಕಾಗಿ ವಿರಾಟ್ ಕೊಹ್ಲಿ ಸಾಕಷ್ಟು ಸೇವೆ ಮಾಡಿದ್ದಾರೆ. ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ.
ಆದ್ರೆ ಕಳೆದ ಕೆಲವು ದಿನಗಳಿಂದ ಅವರು ಫಾರ್ಮ್ ನಲ್ಲಿ ಇಲ್ಲ ಅನ್ನೋದನ್ನ ಎಲ್ಲರೂ ಗಮನಿಸಬೇಕು. ಸೆಲೆಕ್ಷರ್ ಗಳೂ ಕೂಡ ಫಾರ್ಮ್ ಆಧಾರವಾಗಿಯೇ ತಂಡವನ್ನು ಸೆಲೆಕ್ಟ್ ಮಾಡುತ್ತಾರೆ. ಅದನ್ನ ಬಿಟ್ಟು ಖ್ಯಾತಿಯಿಂದಲ್ಲ.
ಆದ್ರೆ ನನ್ನ ಅಭಿಪ್ರಾಯದಲ್ಲಿ ಕೊಹ್ಲಿ ಈ ಸಿರೀಸ್ ನಲ್ಲಿ ಮಿಂಚದೇ ಹೋದಲ್ಲಿ ಮುಂದೆ ಸಾಗೋದು ತೀರಾ ಕಷ್ಟ.
ನನಗೆ ತಿಳಿದಂತೆ ಇಂಗ್ಲೆಂಡ್ ಟಿ 20 ಸಿರೀಸ್ ನಲ್ಲಿ ಕೊಹ್ಲಿ ವಿಫಲವಾದರೇ ಟಿ 20 ವಿಶ್ವಕಪ್ ತಂಡದಲ್ಲಿ ಆತನ ಸ್ಥಾನ ಪ್ರಶ್ನಾರ್ಥಕವಾಗಿರುತ್ತದೆ ಎಂದು ಹೇಳಿದ್ದಾರೆ.