ಗಾನಕೋಗಿಲೆ & ಕ್ರಿಕೆಟ್.. ಓದಿ ಇಂದಿನ ಪ್ರಮುಖ ಸುದ್ದಿ
ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ ಕೊನೆಗೂ ಫಲಿಸಲೇ ಇಲ್ಲ. ಭಾರತದ ಗಾನ ಕೋಗಿಲೆ ಇಂದು ಹಾಡು ಇಲ್ಲಿಸಿದೆ. ಭಾರತೀಯ ಸಂಗೀತ ಜಗತ್ತಿಗೆ ಇಂದು ಕರಾಳ ದಿನ.lata mangeshkar no more WIvsIND ODI Match
ಹೌದು..! ಭಾರತ ರತ್ನ, ಗಾನ ಕೋಗಿಲೆ, ಲತಾ ಮಂಗೇಶ್ಕರ್ ಅವರು ಇಂದು ನಮ್ಮ ನಿಮ್ಮೆಲ್ಲರನ್ನ ಅಗಲಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಲತಾ ಮಂಗೇಶ್ಕರ್, ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ :Lata Mangeshkar : ಮೌನವಾಯ್ತು ಗಾನ ಕೋಗಿಲೆ..
ವೆಸ್ಟ್ ಇಂಡೀಸ್ ನಾಡಿನಲ್ಲಿ ಭಾರತದ ಅಂಡರ್ 19 ತಂಡ ಚರಿತ್ರೆ ಸೃಷ್ಠಿಸಿದೆ. ಇಂಗ್ಲೆಂಡ್ ವಿರುದ್ಧ ನಾಲ್ಕು ವಿಕೆಟ್ ಗಳ ಜಯದೊಂದಿಗೆ ಐದನೇ ಬಾರಿಗೆ ಅಂಡರ್ 19 ವಿಶ್ವಕಪ್ ಗೆದ್ದು ದಾಖಲೆ ಬರೆದಿದೆ. ಈ ಪಂದ್ಯದಲ್ಲಿ ಭಾರತದ ಪರ ರಾಜ್ ಬಾವಾ ಅಪರೂಪದ ದಾಖಲೆ ಪಡೆದಿದ್ದಾರೆ. ಅಂಡರ್-19 ವಿಶ್ವಕಪ್ ಫೈನಲ್ ನಲ್ಲಿ ಟೀಂ ಇಂಡಿಯಾ ಪರ ಐದು ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಇತಿಹಾಸ ನಿರ್ಮಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ :Under-19 World Cup Final : ಧೂಳೆಬ್ಬಿಸಿದ ರಾಜ್ ಬಾವಾ, ಹೊಸ ದಾಖಲೆ
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿವೊಂದು ಹರಿದಾಡುತ್ತಿದೆ. ಈಗಾಗಲೇ ಮೆಗಾ ಹರಾಜಿಗಾಗಿ ಧೋನಿ ಅಂಡ್ ಟೀಂ ಸಿದ್ದತೆಗಳನ್ನು ನಡೆಸಿದೆ. ಬೆಂಗಳೂರಿನಲ್ಲಿ ನಡೆಯುವ ಹರಾಜಿನಲ್ಲಿ ಚೆನ್ನೈ ತಂಡ ಡುಪ್ಲೆಸಿಸ್, ದೀಪಕ್ ಚಹಾರ್, ಮತ್ತು ಶಾರ್ದೂಲ್ ಠಾಕೂರ್ ಅವರನ್ನ ಖರೀದಿಸಲು ಪ್ಲಾನ್ ಮಾಡಿಕೊಂಡಿದೆಯಂತೆ.
ಹೆಚ್ಚಿನ ಮಾಹಿತಿಗಾಗಿ :IPL 2022 Mega Auction : ಆ ಮೂವರ ಮೇಲೆ ಡಿ ಬಾಸ್ ಕಣ್ಣು..
ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಮನೆಯಲ್ಲಿ ತೀವ್ರ ವಿಷಾದ ನೆಲಸಿದೆ. ರೈನಾ ಅವರ ತಂದೆ ತ್ರಿಲೋಕಚಂದ್ರ ರೈನಾ ಭಾನುವಾರ ಕಣ್ಣು ಮುಚ್ಚಿದ್ದಾರೆ. ಕೆಲ ದಿನಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಗಾಜಿಯಾಬಾದ್ ನಲ್ಲಿರುವ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ :Suresh raina | ಸುರೇಶ್ ರೈನಾ ಮನೆಯಲ್ಲಿ ತೀವ್ರ ವಿಷಾದ
ಟೀಂ ಇಂಡಿಯಾದ 1000ನೇ ಪಂದ್ಯದಲ್ಲಿ ಸ್ಪಿನ್ನರ್ ಯಜುವೇಂದ್ರ ಚಹಾಲ್ ಅವರು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಭಾರತದ ಪರ ಏಕದಿನ ಕ್ರಿಕೆಟ್ ನಲ್ಲಿ ಚಹಾಲ್ 100 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಅಹ್ಮದಾಬಾದ್ ನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ನಿಕೊಲಸ್ ಪೂರನ್ ವಿಕೆಟ್ ಪಡೆಯುವ ಮೂಲಕ ಏಕದಿನ ಕ್ರಿಕೆಟ್ ನಲ್ಲಿ 100 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ :Yuzvendra Chahal : ಐತಿಹಾಸಿಕ ಪಂದ್ಯದಲ್ಲಿ ಚಹಾಲ್ ದಾಖಲೆ