Yuzvendra Chahal : ಐತಿಹಾಸಿಕ ಪಂದ್ಯದಲ್ಲಿ ಚಹಾಲ್ ದಾಖಲೆ yuzvendra-chahal-reach-100-wickets-milestone in odi
ಟೀಂ ಇಂಡಿಯಾದನ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಾಲ್, ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್ ನಲ್ಲಿ ಅಪರೂಪದ ಮೈಲುಗಲ್ಲು ಮುಟ್ಟಿದ್ದಾರೆ.
ಅಹ್ಮದಾಬಾದ್ ನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ನಿಕೊಲಸ್ ಪೂರನ್ ವಿಕೆಟ್ ಪಡೆಯುವ ಮೂಲಕ ಏಕದಿನ ಕ್ರಿಕೆಟ್ ನಲ್ಲಿ 100 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ಇದರೊಂದಿಗೆ ಚಾಹಲ್ ಭಾರತದ ಪರ ನೂರು ವಿಕೆಟ್ ಪಡೆದ 23ನೇ ಬೌಲರ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
ಇಲ್ಲಿಯವರೆಗೂ ಏಕದಿನ ಕ್ರಿಕೆಟ್ ನಲ್ಲಿ 60ನೇ ಪಂದ್ಯವಾಡುತ್ತಿರುವ ಚಹಾಲ್, 5.19 ಸರಾಸರಿಯಲ್ಲಿ 101 ವಿಕೆಟ್ ಪಡೆದಿದ್ದಾರೆ.
ಈ ಪಟ್ಟಿಯಲ್ಲಿ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ 269 ಮ್ಯಾಚ್ ಗಳಲ್ಲಿ 334 ವಿಕೆಟ್ ಪಡೆಯುವುದರೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.
ಚಹಾಲ್ ಏಕದಿನ ಕ್ರಿಕೆಟ್ ನಲ್ಲಿ 2 ಬಾರಿ 5 ವಿಕೆಟ್ ಗೊಚ್ಚಲು ಪಡೆದಿದ್ದಾರೆ. 2 ಬಾರಿ ನಾಲ್ಕು ವಿಕೆಟ್ ಪಡೆದಿರುವ ಘನತೆಯೊಂದಿದ್ದಾರೆ. 42 ರನ್ ಕೊಟ್ಟು 6 ವಿಕೆಟ್ ಪಡೆದಿರುವುದು ಚಹಾಲ್ ಅವರ ಉತ್ತಮ ಸಾಧನೆಯಾಗಿದೆ.
ಅಂದಹಾಗೆ ಬ್ಯಾಡ್ ಫಾರ್ಮ್ ಗೆ ಸಿಲುಕಿದ್ದ ಚಹಾಲ್, ತಂಡಕ್ಕೆ ಬಂದೋಗುವ ಕೆಲಸ ಮಾಡುತ್ತಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಚಹಾಲ್ ಗೆ ಚಾನ್ಸ್ ಸಿಕ್ಕಿದ್ರೂ, ಮೂರು ಪಂದ್ಯಗಳಲ್ಲಿ 2 ವಿಕೆಟ್ ಮಾತ್ರ ಪಡೆದರು. ಆದ್ರೂ ಅವರನ್ನು ವೆಸ್ಟ್ ಇಂಡೀಸ್ ವಿರುದ್ದದ ಸರಣಿಗೆ ಆಯ್ಕೆ ಮಾಡಲಾಗಿದೆ.