ಇತ್ತೀಚೆಗಿನ ಸಿನಿಮಾ ಸುದ್ದಿಗಳು – LATEST UPDATES
ಪೂರ್ಣ ಸುದ್ದಿಗಳನ್ನ ಓದಲು ಲಿಂಕ್ ಗಳನ್ನ ಕ್ಲಿಕ್ ಮಾಡಿ
ನಟ ‘ನೀನಾಸಂ ಅಶ್ವತ್ಥ್ʼ ವಿರುದ್ಧ ಕಿರುಕುಳ ಆರೋಪ..!
ನಟ ‘ನೀನಾಸಂ ಅಶ್ವತ್ಥ್ʼ ವಿರುದ್ಧ ಕಿರುಕುಳ ಆರೋಪ..!
ಮಂಡ್ಯ: ಸ್ಯಾಂಡಲ್ ವುಡ್ ನಟ ನೀನಾಸಂ ಅಶ್ವತ್ಥ್ ವಿರುದ್ಧ ಫಾರ್ಮ್ಹೌಸ್ನಲ್ಲಿ ಕೆಲಸ ಮಾಡ್ತಿರೋ ಕೆಲಸಗಾರರು ಕಿರುಕುಳದ ಆರೋಪ ಮಾಡಿದ್ದಾರೆ. ನಮಗೆ ಸರಿಯಾಗಿ ಸಂಬಳ ಕೊಡುತ್ತಿಲ್ಲ ಹಾಗೂ ನಮ್ಮ ಊರುಗಳಿಗೆ ಹೋಗಲು ಬಿಡ್ತಿಲ್ಲ ಎಂದು ಕೆಲಸಗಾರರು ಆರೋಪ ಮಾಡಿದ್ದಾರೆ.ಮಂಡ್ಯ ಜಿಲ್ಲೆಯ ಯಾಚನಹಳ್ಳಿ ಫಾರ್ಮ್ ಹೌಸ್ನಲ್ಲಿ ಕೆಲಸಕ್ಕೆ ಸೇರಿರುವ 2 ಕುಟುಂಬಗಳು ಅಶ್ವತ್ಥ್ ವಿರುದ್ಧ ಈ ರೀತಿಯಾದ ಆರೋಪ ಮಾಡಿದ್ದು, ಕಳೆದ 3 ತಿಂಗಳಿಂದ ಫಾರ್ಮ್ ಹೌಸ್ನಲ್ಲಿ ಕೆಲಸ ಮಾಡ್ತಿದ್ದೇವೆ. ಸರಿಯಾಗಿ ಸಂಬಳ ಕೊಡ್ತಿಲ್ಲ, ಊರಿಗೆ ಹೋಗಲು ಬಿಡ್ತಿಲ್ಲ ಎಂದು ಆರೋಪಿಸಿದ್ದಾರೆ.
ಆದ್ರೆ, ಈ ಆರೋಪದ ಕುರಿತು ಪ್ರತಿಕ್ರಿಯಿಸಿದ ನಟ ನೀನಾಸಂ ಅಶ್ವತ್ಥ್, ನಾನು ಕೆಲಸಗಾರರಿಗೆ ಸರಿಯಾಗಿ ಸಂಬಳ ನೀಡುತ್ತಿದ್ದೇನೆ. ಸದ್ಯ ಫಾರ್ಮ್ಹೌಸ್ ನಲ್ಲಿ ಬೇರೆ ಕೆಲಸಗಾರರು ಇಲ್ಲ. ಹೀಗಾಗಿ ಬೇರೆ ಕೆಲಸಗಾರರು ಬರುವವರೆಗೆ ಇರಿ ಎಂದಿದ್ದೆ. ಅವರನ್ನ ಊರಿಗೆ ಹೋಗ್ಬೇಡಿ ಎಂದು ನಾನು ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ದಿಶಾ ರವಿ ಅರೆಸ್ಟ್ ಕೇಸ್: ಆಕೆ ಮುಗ್ಧೆ ಎಂದ ನಟಿ ರಮ್ಯಾ..!
ದಿಶಾ ರವಿ ಅರೆಸ್ಟ್ ಕೇಸ್: ಆಕೆ ಮುಗ್ಧೆ ಎಂದ ನಟಿ ರಮ್ಯಾ..!
ದೆಹಲಿಯಲ್ಲಿ ರೈತ ಹೋರಾಟದ ವೇಳೆ ಟೂಲ್ ಕಿಟ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಬೆಂಗಳೂರಿನ ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರನ್ನು ಬಂಧಿಸಿದ್ದಾರೆ. ಈ ಪ್ರಕರಣ ತೀವ್ರ ಆಕ್ರೋಶಕ್ಕೆ , ಪರ ವಿರೋಧಗಳಿಗೆ ಕಾರಣವಾಗಿದೆ. ದಿಶಾ ರವಿ ಬಂಧನ ಖಂಡಿಸಿ ಅನೇಕರು, ರಾಜಕೀಯ ಮುಖಂಡರು ವಿಪಕ್ಷ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದುಯ, ಟ್ವೀಟ್ ಮಾಡಿದ್ದಾರೆ. ಅಲ್ದೇ ದಿಶಾ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗಿದೆ. ಇದೀಗ ಸ್ಯಾಂಡಲ್ ವುಡ್ ನ ಮೋಹಕತಾರೆ ಮಾಜಿ ಸಂಸದೆ ರಮ್ಯಾ ಕೂಡ ದಿಶಾ ರವಿ ಬಂಧನಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
21 ವರ್ಷದ ದಿಶಾ ರವಿ ಬೆಂಗಳೂರು ಹುಡುಗಿ, ಕನ್ನಡತಿ, ಪರಿಸರ ಹೋರಾಟಗಾರ್ತಿ, ಆಕೆ ಮುಗ್ಧೆ, ರೈತರ ಬೆಂಬಲಕ್ಕೆ ನಿಲ್ಲುವುದು ಕ್ರೈಂ ಅಲ್ಲ. ಪ್ರಜಾಪ್ರಭುತ್ವ, ಸ್ವತಂತ್ರ್ಯ, ನಮ್ಮ ಹಕ್ಕು ಯಾವುದು ಇಲ್ಲ. ನಾವೆಲ್ಲರು ಜೈಲಿನಲ್ಲಿ ಇದ್ದೀವಿ ಎಂದು ಭಾಸವಾಗುತ್ತಿದೆ. ರೈತರ ಪರ ಹೋರಾಟ ಮಾಡುವುದು ತಪ್ಪೇ ಎಂದಿದ್ದಾರೆ. ಇನ್ನೂ ಯಾವುದೇ ಪ್ರತಿಭಟನೆ ಮತ್ತು ಆಂದೋಲನ ದೊಡ್ಡ ಮಟ್ಟದಲ್ಲಿ ಮಾಡುವ ಸಂದರ್ಭದಲ್ಲಿ ಟೂಲ್ ಕಿಟ್ ತಯಾರು ಮಾಡಲಾಗುತ್ತದೆ. ಇದರಲ್ಲಿ ಯಾವುದೇ ಅಂತರಾಷ್ಟ್ರೀಯ ಷಡ್ಯಂತರವಿಲ್ಲ ಎಂದು ರಮ್ಯಾ ದಿಶಾ ರವಿ ಪರ ಮಾತನಾಡಿದ್ದಾರೆ.
#GOBackModi ಟ್ವೀಟ್ ಮಾಡಿ ಸಂಕಷ್ಟಕ್ಕೆ ಸಿಲುಕಿದ ‘ಕಿರಾತಕ ಬೆಡಗಿ’ ಓವಿಯ್ಯಾ!
#GOBackModi ಟ್ವೀಟ್ ಮಾಡಿ ಸಂಕಷ್ಟಕ್ಕೆ ಸಿಲುಕಿದ ‘ಕಿರಾತಕ ಬೆಡಗಿ’ ಓವಿಯ್ಯಾ!
ಚೆನ್ನೈ: ಭಾರತದ ವಿರುದ್ಧ ರೈತರ ಪ್ರಚೋದನೆಗಾಗಿ ವಿದೇಶದದ ಯುವತಿ ಗ್ರೇಟಾ ಶೇರ್ ಮಾಡಿಕೊಂಡಿದ್ದ ಟೂಲ್ ಕಿಟ್ ನ ಷಡ್ಯಂತ್ರ ಹಗರಣ ಬಯಲಾಗುತ್ತಿದ್ದಂತೆಯೇ, ಇತ್ತ ಟ್ವಿಟ್ಟರ್ , ಸಮಾಜಿಕ ಜಾಲತಾಣಗಳಲ್ಲಿ #ಮೋದಿಗೋಬ್ಯಾಕ್ ಟ್ರೆಂಡ್ ಮತ್ತೆ ಶುರುವಾಗಿದೆ.
#ಮೋದಿಗೋಬ್ಯಾಕ್ ಎಂದು ಹಲವರು ಟ್ವೀಟ್ ಟ್ರೆಂಡ್ ಶುರು ಮಾಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮಿಳುನಾಡಿಗೆ ಬರುತ್ತಿರುವ ಹಿನ್ನೆಲೆಯಲ್ಲಿ, ಈ ಹ್ಯಾಷ್‌ಟ್ಯಾಗ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನಟಿ ಓವಿಯ್ಯಾ ಇದೇ ಹ್ಯಾಷ್‌ಟ್ಯಾಗ್ ಟ್ವೀಟ್ ಮಾಡಿದ್ದಾರೆ.
ಸದಾ ವಿವಾದಗಳಿಂದಲೇ ಸುದ್ದಿಯಲ್ಲಿರುವ ‘ಕಿರಾತಕ’ ಬೆಡಗಿ ಇದೀಗ #GOBackModi ಎಂದು ಟ್ವೀಟ್ ಮಾಡೋ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಈ ಟ್ವೀಟ್ ಮಾಡಿದ್ದು ಮೋದಿ ಅಭಿಮಾನಿಗಳನ್ನು ಹಾಗೂ ಬಿಜೆಪಿ ಕಾರ್ಯಕರ್ತರನ್ನು ಕೆರಳಿಸಿದೆ. ಅಲ್ಲದೇ ಈ ಟ್ವೀಟ್ ಪ್ರಚೋದನಕಾರಿಯಾಗಿದ್ದು, ಇದರಿಂದ ಸಾರ್ವಜನಿಕವಾಗಿ ಕಲಹ ಉಂಟಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಅಲ್ಲದೇ ಕ್ಷಮೆ ಕೇಳುವಂತೆ ಚೆನ್ನೈ ಬಿಜೆಪಿ ಘಟಕ ಒತ್ತಾಯಿಸಿದೆ.
ಹೊಸ ಗೆಟಪ್ ನಲ್ಲಿ ಲವ್ಲಿ ಸ್ಟಾರ್ ಪ್ರೇಮ್..! ‘ಪ್ರೇಮಂ ಪೂಜಂ’ ಟೀಸರ್…!
ಹೊಸ ಗೆಟಪ್ ನಲ್ಲಿ ಲವ್ಲಿ ಸ್ಟಾರ್ ಪ್ರೇಮ್..! ‘ಪ್ರೇಮಂ ಪೂಜಂ’ ಟೀಸರ್…!
ಬೆಂಗಳೂರು : ಪ್ರೇಮಿಗಳ ದಿನದಂದು ಲವ್ಲಿ ಸ್ಟಾರ್ ಪ್ರೇಮ್ ನಟನೆಯ ಬಹುನಿರೀಕ್ಷಿತ ‘ಪ್ರೇಮಂ ಪೂಜ್ಯ’ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಈ ಟೀಸರ್ ಗೆ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಪಡೆದುಕೊಳ್ತಾಯಿದೆ. ಈ ಸಿನಿಮಾದಲ್ಲಿ ಲವ್ಲಿ ಸ್ಟಾರ್ ಒಂದು ಡಿಫರೆಂಟ್ ಲುಕ್ ನಲ್ಲಿ ಸಿನಿಪ್ರೇಕ್ಷರಿಗೆ ದರ್ಶನ ನೀಡಿದ್ದಾರೆ. ಈ ಹಿಂದೆ ರಿಲೀಸ್ ಆಗಿದ್ದ ಸಿನಿಮಾದ ಪೋಸ್ಟರ್ ನಲ್ಲಿ ಪ್ರೇಮ್ ಲುಕ್ ಎಲ್ಲರನ್ನ ಅಟ್ರ್ಯಾಟ್ ಮಾಡಿತ್ತು. ಇದೀಗ ಟೀಸರ್ ನಲ್ಲಿ ಪ್ರೇಮ್ ಹೊಸ ಅವತಾರ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಯಂಗ್ ಲುಕ್ ನಲ್ಲಿ ಲವರ್ ಬಾಯ್ ಗೆಟಪ್ ನಲ್ಲಿ ಲವ್ಲಿ ಸ್ಟಾರ್ ಮಿಂಚಿದ್ದಾರೆ.
‘ಶಿವ’ನ ‘ಪೊಗರ್ದಸ್ತ್ ಎಂಟ್ರಿಗೆ ‘ಖರಾಬು’ ಎಂದ ಅಭಿಮಾನಿಗಳು ..!
‘ಶಿವ’ನ ‘ಪೊಗರ್ದಸ್ತ್ ಎಂಟ್ರಿಗೆ ‘ಖರಾಬು’ ಎಂದ ಅಭಿಮಾನಿಗಳು ..!
ಪ್ರೇಮಿಗಳ ದಿನದಂದು ಪೊಗರು ಚಿತ್ರತಂಡ ಸಖತ್ ಮಾಸ್ ಆಗಿರುವ ಟೈಟಲ್ ಸಾಂಗ್ ರಿಲೀಸ್ ಮಾಡಿದ್ದು, ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದೆ. ಪೊಗರು ಚಿತ್ರದ ಟೈಟಲ್ ಟ್ರ್ಯಾಕ್ ಗೆ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗ್ತಿದೆ. ಪೊಗರು ಅಣ್ಣನಿಗೆ ಪೊಗರು ಪೊಗರು… ವಿಡಿಯೋ ಸಾಂಗ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಖರಾಬ್ ಲುಕ್ ಅಭಿಮಾನಿಗಳಲ್ಲಿ ಕಿಕ್ಕೇರಿಸಿದೆ. ಹಾಡಿನ ಬೀಟ್ಸ್ಗಳು ಸೂಪರ್ ಡೂಪರ್ ಆಗಿದ್ದು, ಸಿನಿಪ್ರಿಯರು ಹುಚ್ಚೆದು ಕುಣಿಯುವಂತೆ ಮಾಡಿದೆ. ಚಂದನ್ ಶೆಟ್ಟಿ ಸಂಗೀತ ಟೈಟಲ್ ಟ್ರ್ಯಾಕ್ ಗೆ ಚಂದನ್ ಶೆಟ್ಟಿ, ಶಶಾಂಕ್ ಶೇಷಗಿರಿ ಹಾಗೂ ಅನಿರುದ್ಧ ಶಾಸ್ತ್ರಿ ದನಿಯಾಗಿದ್ದಾರೆ. ಈ ಹಾಡು ಯೂಟ್ಯೂಬ್ನಲ್ಲಿ ಟ್ರೆಂಡಿಂಗ್ನಲ್ಲಿದ್ದು, 40 ಲಕ್ಷಕ್ಕೂ ಅಧಿಕ ವೀಕ್ಷಣೆ ಸಿಕ್ಕಿದೆ.
ಪೂರ್ಣ ಸುದ್ದಿಗಳನ್ನ ಓದಲು ಲಿಂಕ್ ಗಳನ್ನ ಕ್ಲಿಕ್ ಮಾಡಿ








