ನಟ ‘ನೀನಾಸಂ ಅಶ್ವತ್ಥ್ʼ ವಿರುದ್ಧ ಕಿರುಕುಳ ಆರೋಪ..!
ಮಂಡ್ಯ: ಸ್ಯಾಂಡಲ್ ವುಡ್ ನಟ ನೀನಾಸಂ ಅಶ್ವತ್ಥ್ ವಿರುದ್ಧ ಫಾರ್ಮ್ಹೌಸ್ನಲ್ಲಿ ಕೆಲಸ ಮಾಡ್ತಿರೋ ಕೆಲಸಗಾರರು ಕಿರುಕುಳದ ಆರೋಪ ಮಾಡಿದ್ದಾರೆ. ನಮಗೆ ಸರಿಯಾಗಿ ಸಂಬಳ ಕೊಡುತ್ತಿಲ್ಲ ಹಾಗೂ ನಮ್ಮ ಊರುಗಳಿಗೆ ಹೋಗಲು ಬಿಡ್ತಿಲ್ಲ ಎಂದು ಕೆಲಸಗಾರರು ಆರೋಪ ಮಾಡಿದ್ದಾರೆ.
15 ದಿನದಲ್ಲೇ ಗಂಡನ ಬಿಟ್ಟು ಪ್ರಿಯಕರನ ಮದುವೆಯಾದಳು : ಆಕೆಯ ಮನೆಯವರು ಮಾಡಿದ್ದು ಘೋರ ಕೃತ್ಯ..!
ಮಂಡ್ಯ ಜಿಲ್ಲೆಯ ಯಾಚನಹಳ್ಳಿ ಫಾರ್ಮ್ ಹೌಸ್ನಲ್ಲಿ ಕೆಲಸಕ್ಕೆ ಸೇರಿರುವ 2 ಕುಟುಂಬಗಳು ಅಶ್ವತ್ಥ್ ವಿರುದ್ಧ ಈ ರೀತಿಯಾದ ಆರೋಪ ಮಾಡಿದ್ದು, ಕಳೆದ 3 ತಿಂಗಳಿಂದ ಫಾರ್ಮ್ ಹೌಸ್ನಲ್ಲಿ ಕೆಲಸ ಮಾಡ್ತಿದ್ದೇವೆ. ಸರಿಯಾಗಿ ಸಂಬಳ ಕೊಡ್ತಿಲ್ಲ, ಊರಿಗೆ ಹೋಗಲು ಬಿಡ್ತಿಲ್ಲ ಎಂದು ಆರೋಪಿಸಿದ್ದಾರೆ.
ಕೋಚಿಂಗ್ ಕ್ಲಾಸ್ ಗೆ ಹೋಗುತ್ತಿದ್ದ ಯುವತಿಯ ಮೇಲೆ ಅತ್ಯಾಚಾರ
ಆದ್ರೆ, ಈ ಆರೋಪದ ಕುರಿತು ಪ್ರತಿಕ್ರಿಯಿಸಿದ ನಟ ನೀನಾಸಂ ಅಶ್ವತ್ಥ್, ನಾನು ಕೆಲಸಗಾರರಿಗೆ ಸರಿಯಾಗಿ ಸಂಬಳ ನೀಡುತ್ತಿದ್ದೇನೆ. ಸದ್ಯ ಫಾರ್ಮ್ಹೌಸ್ ನಲ್ಲಿ ಬೇರೆ ಕೆಲಸಗಾರರು ಇಲ್ಲ. ಹೀಗಾಗಿ ಬೇರೆ ಕೆಲಸಗಾರರು ಬರುವವರೆಗೆ ಇರಿ ಎಂದಿದ್ದೆ. ಅವರನ್ನ ಊರಿಗೆ ಹೋಗ್ಬೇಡಿ ಎಂದು ನಾನು ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.








