ಪ್ರಮುಖ ರಾಷ್ಟ್ರೀಯ ಅಂತರಾಷ್ಟ್ರೀಯ ಸುದ್ದಿಗಳು : LATEST UPDATES
ಪೂರ್ಣ ಸುದ್ದಿ ಓದಲು ಲಿಂಕ್ ಗಳನ್ನ ಕ್ಲಿಕ್ ಮಾಡಿ
ಕೇಂದ್ರ ಅತಿಯಾದ ಆತ್ಮವಿಶ್ವಾಸದಲ್ಲಿದೆ – ಕೊರೋನಾ ಸಂಪೂರ್ಣವಾಗಿ ತೊಲಗಿಲ್ಲ: ರಾಹುಲ್ ಗಾಂಧಿ ಎಚ್ಚರಿಕೆ..!
ಕೇಂದ್ರ ಅತಿಯಾದ ಆತ್ಮವಿಶ್ವಾಸದಲ್ಲಿದೆ – ಕೊರೋನಾ ಸಂಪೂರ್ಣವಾಗಿ ತೊಲಗಿಲ್ಲ: ರಾಹುಲ್ ಗಾಂಧಿ ಎಚ್ಚರಿಕೆ..!
ನವದೆಹಲಿ: ದೇಶದಲ್ಲಿ ಮತ್ತೆ ಬ್ರಿಟನ್ ಕೊರೋನಾ ಸೋಂಕು ತಳಿ ಕಾಣಿಸಿಕೊಂಡು ಜನರನ್ನ ಆತಂಕಕ್ಕೆ ಈಡು ಮಾಡಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಟ್ವೀಟ್ ಮಾಡಿ ವಾಗ್ದಾಳಿ ನಡೆಸಿರುವ ರಾಹುಲ್ ಗಾಂಧಿ ಕೊರೋನಾ ವೈರಸ್ ಪರಿಸ್ಥಿತಿಯನ್ನು ನಿಭಾಯಿಸುವ ಬಗ್ಗೆ ಕೇಂದ್ರ ಸರ್ಕಾರವು ಅತ್ಯಂತ ನಿರ್ಲಕ್ಷ್ಯ ವಹಿಸಿದೆ. ಅತಿಯಾದ ಆತ್ಮವಿಶ್ವಾಸದಲ್ಲಿದೆ. ಆದರೆ ಕೋವಿಡ್ ಸಾಂಕ್ರಾಮಿಕ ರೋಗ ಇನ್ನೂ ಮುಗಿದಿಲ್ಲ ಎಂದು ಹೇಳಿದ್ದಾರೆ.
‘ತಾಕತ್ತಿದ್ರೆ ಗುಜರಾತ್ ನಿಂದ ಗೆದ್ದು ತೋರಿಸಿ – ಆಮೇಲೆ ಚಹಾದ ಮಾಲೀಕರ ಬಗ್ಗೆ ಮಾತನಾಡಿ’ – ಸ್ಮೃತಿ ಇರಾನಿ..!
‘ತಾಕತ್ತಿದ್ರೆ ಗುಜರಾತ್ ನಿಂದ ಗೆದ್ದು ತೋರಿಸಿ – ಆಮೇಲೆ ಚಹಾದ ಮಾಲೀಕರ ಬಗ್ಗೆ ಮಾತನಾಡಿ’ – ಸ್ಮೃತಿ ಇರಾನಿ..!
ಗುಜರಾತ್: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಚಹಾ ಕಾರ್ಮಿಕರ ದಿನಗೂಲಿಯನ್ನು ಹೆಚ್ಚಿಸುತ್ತೇನೆ. ಚಹಾ ತೋಟದ ಮಾಲೀಕರು ಆ ಹಣವನ್ನು ನೀಡುವಂತೆ ಮಾಡುತ್ತೇನೆ ಎಂದು ಹೇಳಿದ್ದ ರಾಹುಲ್ ಗಾಂಧಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಭಾರೀ ಸವಾಲೊಂದನ್ನ ಎಸೆದಿದ್ದಾರೆ. ಹೌದು ಗುಜರಾತ್ ನ ನವಸಾರಿ ಜಿಲ್ಲೆಯ ವನ್ಸದಾ ನಗರದಲ್ಲಿ ಪ್ರಚಾರ ಮೆರವಣಿಗೆ ಸಂದರ್ಭದಲ್ಲಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಈ ಹಿಂದೆ ಕಾಂಗ್ರೆಸ್ ನವರಿಗೆ ಟೀ ಮಾರುವವರ ಬಗ್ಗೆ (ನರೇಂದ್ರ ಮೋದಿ) ಆಕ್ಷೇಪವಿತ್ತು. ಇದೀಗ ಚಹಾ ಕುಡಿಯುವವರ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು.
ನಿಮಗೆ ತಾಕತ್ತಿದ್ದರೆ ಗುಜರಾತ್ನಿಂದ ಸ್ಪರ್ಧೆ ಮಾಡಿ. ಆಗ ನಿಮ್ಮ ಎಲ್ಲಾ ತಪ್ಪು ತಿಳಿವಳಿಕೆಗಳೂ ಕೊನೆಯಾಗುತ್ತವೆ ಎಂದು ಸ್ಮೃತಿ ಹೇಳಿದ್ದಾರೆ. ಗುಜರಾತ್ ಹಾಗೂ ಗುಜರಾತ್ ಜನರ ಮೇಲೆ ಕಾಂಗ್ರೆಸ್ ದ್ವೇಷ ಹಾಗೂ ಪೂರ್ವಗ್ರಹ ಪೀಡಿತವಾಗಿದೆ. ಇದೇನೂ ಹೊಸ ವಿಷಯವಲ್ಲ. ರಾಹುಲ್ ಗಾಂಧಿ ಹಾಗೂ ಅವರ ಪಕ್ಷ ಗುಜರಾತ್ ನಲ್ಲಿ ಸರ್ದಾರ್ ವಲ್ಲಭಬಾಯ್ ಪಟೇಲ್ ಪ್ರತಿಮೆ ನಿರ್ಮಾಣಕ್ಕೂ ಆಕ್ಷೇಪ ವ್ಯಕ್ತಪಡಿಸಿದ್ದರಲ್ಲವೇ ಎಂದು ಪ್ರಶ್ನಿಸಿ ಟಾಂಗ್ ಕೊಟ್ಟಿದ್ದಾರೆ.
ಜೀವನವಿಡೀ ಕಷ್ಟ ಪಟ್ಟು ಸಂಪಾದಿಸಿದ ಹಣ ಗೆದ್ದಲಹುಳುಗಳ ಪಾಲಾಯ್ತು ಮನೆಕಟ್ಟುವ ಕನಸು ಭಗ್ನವಾಯ್ತು..!
ಜೀವನವಿಡೀ ಕಷ್ಟ ಪಟ್ಟು ಸಂಪಾದಿಸಿದ ಹಣ ಗೆದ್ದಲಹುಳುಗಳ ಪಾಲಾಯ್ತು ಮನೆಕಟ್ಟುವ ಕನಸು ಭಗ್ನವಾಯ್ತು..!
ಹೈದರಾಬಾದ್: ನಾವು ಸಾಮನ್ಯವಾಗಿ ಹಣವನ್ನ ಕೂಡಿಡೋದಕ್ಕೆ ಬ್ಯಾಂಕ್ ಖಾತೆಗಳು, ಅವಶ್ಯ ಬಿದ್ದರೆ ಬ್ಯಾಂಕ್ ನ ಲಾಕರ್ ಗಳು ಇನ್ನೂ ಹಲವು ಸುರಕ್ಷತಾ ಮಾರ್ಗಗಳನ್ನ ಅನುಸರಿಸುತ್ತೇವೆ. ಹಣವನ್ನ ಮನೆಯಲ್ಲಿ ಕೂಡಿಡುವವರು ತುಂಬಾನೆ ಕಡಿಮೆ. ಇದು ಕಳ್ಳತನ ಆಗೋ ಸಾಧ್ಯತೆ ಇರಬಹುದು ಅನ್ನೋ ಯೋಚನೆಯೂ ಇರುತ್ತೆ. ಆದ್ರೆ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಉದ್ಯಮಿಯೊಬ್ಬರು ತಾನು ಜೀವಮಾನವಿಡಿ ಶ್ರಮಪಟ್ಟು ದುಡಿದ ಹಣವನ್ನು ಬ್ಯಾಂಕ್ ನಲ್ಲಿ ಠೇವಣಿ ಇಡದೇ ಪೆಟ್ಟಿಗೆಯೊಂದರಲ್ಲಿ ಕೂಡಿ ಇಟ್ಟಿದ್ದರು. ಇತ್ತೀಚೆಗೆ ತಾನು ಸಂಗ್ರಹಿಸಿಟ್ಟ ಹಣವನ್ನು ತೆರೆದು ನೋಡಿದ ಉದ್ಯಮಿಗೆ ಆಘಾತವಾಗಿತ್ತು. ಪೆಟ್ಟಿಗೆ ಸುರಕ್ಷಿತವಾಗಿಲ್ಲದ ಪರಿಣಾಮ 500 ರೂ ಹಾಗೂ 200 ರೂಪಾಯಿ ನೋಟಿನ ಕಂತೆಗಳನ್ನು ಗೆದ್ದಲ ಹುಳ ತಿಂದು ಹಣವನ್ನು ಚೂರುಪಾರು ಮಾಡಿ ಹಾಕಿರುವುದಾಗಿ ವರದಿ ತಿಳಿಸಿದೆ.
ಸ್ವತಂತ್ರ್ಯ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳಾ ಖೈದಿಗೆ ಗಲ್ಲು ಶಿಕ್ಷೆ..!
ಸ್ವತಂತ್ರ್ಯ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳಾ ಖೈದಿಗೆ ಗಲ್ಲು ಶಿಕ್ಷೆ..!
ಶಬನಮ್ ಎಂಬ ಮಹಿಳಾ ಖೈದಿಗೆ ಸುಪ್ರೀಂಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದೆ. ಡೆತ್ ನೋಟ್ ಜಾರಿಯಾಗುವುದು ಬಾಕಿಯಿದೆ. ಆದ್ರೆ ಇಲ್ಲಿ ಗಮನಿಸಬೇಕಾದ ವಿಚಾರವೆಂದ್ರೆ ಸ್ವಾತಂತ್ರ್ಯ ಬಾರತದಲ್ಲಿ ಪ್ರಪ್ರಥಮ ಬಾರಿಗೆ ಮಹಿಳಾ ಖೈದಿಯನ್ನ ಗಲ್ಲಿಗೇರಿಸಲಾಗುತ್ತಿದೆ.
ಹೌದು 2008ರಲ್ಲಿ ಶಬನಮ್ ತನ್ನದೇ ಕುಟುಂಬದ 7 ಜನರನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಳು. ಈಕೆ ಮದುವೆಗೂ ಮುಂಚೆಯೇ ಬೇರೊಬ್ಬನನ್ನ ಪ್ರೀತಿಸುತ್ತಿದ್ದಳು.
ಆದ್ರೆ ಮನೆಯವರು ಬಲವಂತವಾಗಿ ಈಕೆಯನ್ನ ಬೇರೊಬ್ಬನಿಗೆ ಕೊಟ್ಟು ಮದುವೆ ಮಾಡಿಸಿದ್ದರು. ಮದುವೆಯಾದ ಮೇಲೂ ಆತನನ್ನ ಪ್ರೀತಿಸುತ್ತಿದ್ದ ಶಬನಮ್ ತನ್ನ ಪ್ರಿಯಕರನ ಜೊತೆ ಸೇರಿ ತನ್ನ ಗಂಡನ ಮನೆಯ 7 ಜನರನ್ನು ಕೊಚ್ಚಿ ಕ್ರೂರವಾಗಿ ಹತ್ಯೆ ಮಾಡಿದ್ದಳು. ಬಳಿಕ ನ್ಯಾಯಾಲಯವು ಆಕೆಗೆ ಗಲ್ಲು ಶಿಕ್ಷೆಯನ್ನ ವಿಧಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಆಕೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಳು.
ಆದರೆ, ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಆಕೆಯ ಗಲ್ಲು ಶಿಕ್ಷೆಯನ್ನು ಎತ್ತಿಹಿಡಿದಿತ್ತು. ಬಳಿಕ ಕೊನೆಯದಾಗಿ ಕ್ಷಮಾದಾನ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದ್ದಳು. ಆದ್ರೆ ಆಕೆಯ ಅರ್ಜಿ ಕೂಡ ತಿರಸ್ಕೃತಗೊಂಡಿತ್ತು. ಹೀಗಾಗಿ, ಆಕೆಯನ್ನು ನೇಣಿಗೇರಿಸಲು ಎಲ್ಲ ರೀತಿಯ ಸಿದ್ಧತೆಗಳು ಈಗಾಗಲೇ ನಡೆದಿವೆ.
ಉತ್ತರಾಖಂಡದಲ್ಲಿ ಹಿಮಕುಸಿತ – ಸಾವಿನ ಸಂಖ್ಯೆ 58ಕ್ಕೆ ಏರಿಕೆ..!
ಉತ್ತರಾಖಂಡದಲ್ಲಿ ಹಿಮಕುಸಿತ – ಸಾವಿನ ಸಂಖ್ಯೆ 58ಕ್ಕೆ ಏರಿಕೆ..!
ಉತ್ತರಖಂಡ: ಉತ್ತರಾಖಂಡದ ಚಮೋಲಿಯಲ್ಲಿ ಸಂಭವಿಸಿದ ಹಿಮಕುಸಿತದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಲೇ ಇದೆ. ಹಿಮ ಸ್ಫೋಟದ ಪರಿಣಾಮವಾಗಿ ಉಂಟಾದ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ ಇಂದು ಮತ್ತೆ ಏರಿಕೆಯಾಗಿದೆ. ಇಂದು ಮತ್ತೆ 9 ಮಂದಿಯ ಮೃತ ದೇಹವನ್ನ ಹೊರತೆಗೆಯಲಾಗಿದೆ. ಈ ಮೂಲಕ ಚಮೋಲಿಯ ಸುರಂಗದಲ್ಲಿ ಸಂಭವಿಸಿದ ಹಿಮ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 58ಕ್ಕೇ ಏರಿಕೆಯಾಗಿದೆ.
ಸುರಂಗದಿಂದ ಮೃತದೇಹಗಳನ್ನು ಇದೀಗ ಹೊರತೆಗೆಯಲಾಗಿದ್ದು, ರಕ್ಷಣಾ ಪಡೆಗಳು ಕಾರ್ಯಾಚರಣೆಯನ್ನ ಮುಂದುವರೆಸಿವಬೆ. ಫೆಬ್ರವರಿ 7 ರಂದು ಉತ್ತರಾಖಂಡ್ ನ ಚಮೋಲಿ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿತ್ತು. ಇದವುರೆಗೂ 58 ಮೃದೇಹಗಳನ್ನ ಹೊರತೆಗಗೆಯಾಲಗಿದ್ದು, ಸುಮಾರು 146 ಮಂದಿ ಈವರೆಗೂ ನಾಪತ್ತೆಯಠಾಗಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಮಧ್ಯಪ್ರದೇಶದಲ್ಲಿ ಕಾಲುವೆಗೆ ಬಸ್ ಉರುಳಿದ ದುರಂತ : 49 ಮಂದಿ ಬಲಿ
ಮಧ್ಯಪ್ರದೇಶದಲ್ಲಿ ಕಾಲುವೆಗೆ ಬಸ್ ಉರುಳಿದ ದುರಂತ : 49 ಮಂದಿ ಬಲಿ
ಮಧ್ಯಪ್ರದೇಶ : ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಬಸ್ ಕಾಲುವೆಗೆ ಬಿದ್ದ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ 49ಕ್ಕೆ ಏರಿಕೆಯಾಗಿದೆ.
ಇಂದು ಬೆಳಗ್ಗೆ ಮತ್ತೆರೆಡು ಮೃತದೇಹಗಳನ್ನ ಹೊರತೆಗೆಯಲಾಗಿದೆ. ರಕ್ಷಣಾ ಕಾರ್ಯ ಮುಕ್ತಾಯಗೊಂಡಿದ್ದು, ಎಲ್ಲಾ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪೂರ್ಣ ಸುದ್ದಿ ಓದಲು ಲಿಂಕ್ ಗಳನ್ನ ಕ್ಲಿಕ್ ಮಾಡಿ








