ADVERTISEMENT
Monday, June 29, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಪ್ರಮುಖ ರಾಜಕೀಯ ಸುದ್ದಿಗಳು – LATEST UPDATES..!

Namratha Rao by Namratha Rao
February 18, 2021
in Newsbeat, Politics, ರಾಜಕೀಯ
Share on FacebookShare on TwitterShare on WhatsappShare on Telegram

ಪ್ರಮುಖ ರಾಜಕೀಯ ಸುದ್ದಿಗಳು – LATEST UPDATES..!

ಪೂರ್ಣ ಸುದ್ದಿ ಓದಲು ಲಿಂಕ್ ಗಳನ್ನ ಕ್ಲಿಕ್ ಮಾಡಿ

Related posts

ಬಸ್ ಪ್ರಯಾಣಿಕರಿಗೆ ದರ ಏರಿಕೆ ಬಿಸಿ: ಸಾರಿಗೆ ಸಂಸ್ಥೆಗಳ ಉಳಿವಿಗೆ ದರ ಏರಿಕೆ ಅನಿವಾರ್ಯ – ಡಿಕೆ ಶಿವಕುಮಾರ್

ತೆರಿಗೆ ಹಣಕ್ಕಿಂತ ಜನರ ಆರೋಗ್ಯವೇ ಮುಖ್ಯ: ಕರ್ನಾಟಕದಲ್ಲಿ ಗುಟ್ಕಾ ಮತ್ತು ಪಾನ್ ಮಸಾಲ ನಿಷೇಧ- ಮುಕ್ತ ಕರ್ನಾಟಕಕ್ಕೆ ಡಿ.ಕೆ. ಶಿವಕುಮಾರ್ ಖಡಕ್ ನಿರ್ಧಾರ

June 29, 2026
ಮೋದಿ ಸರ್ಕಾರದ ವಿದೇಶಾಂಗ ನೀತಿಗೆ ಸಕ್ಸಸ್ : ಶತ್ರುಗಳಿಗೆ ಹಾರ್ಮುಜ್ ಬಂದ್ ಮಿತ್ರ ಭಾರತಕ್ಕೆ ಮುಕ್ತ ಅವಕಾಶ ಟ್ರಂಪ್ ಬೆದರಿಕೆಗಳಿಗೆ ಕವಡೆ ಕಾಸಿನ ಬೆಲೆ ನೀಡದ ಇರಾನ್

ಸಿಎಂ ಸಿಂಹಾಸನ ನಶ್ವರ ಜನರ ಹೃದಯ ಸಿಂಹಾಸನ ಶಾಶ್ವತ: ಅಧಿಕಾರ ಹೋದರೂ ಕುಗ್ಗದ ವರ್ಚಸ್ಸು ಮಾಜಿ CM ಸಿದ್ದರಾಮಯ್ಯ ಭಾವನಾತ್ಮಕ ಪೋಸ್ಟ್

June 29, 2026

ನಮ್ಮದು ವಿಷಯಾಧಾರಿತ ರಾಜಕೀಯ ಮಾಡುವ ಪಕ್ಷ : ಹೆಚ್ ಡಿಕೆ

ನಮ್ಮದು ವಿಷಯಾಧಾರಿತ ರಾಜಕೀಯ ಮಾಡುವ ಪಕ್ಷ : ಹೆಚ್ ಡಿಕೆ

ಬೆಂಗಳೂರು : ನಮ್ಮದು ವಿಷಯಾಧಾರಿತ ರಾಜಕೀಯ ಮಾಡುವ ಪಕ್ಷ. ಯಾವುದೊ ಒಂದು ಸಮಾಜವನ್ನು ಚುನಾವಣೆಯಲ್ಲಿ ಸೆಳೆಯುವ ಪ್ರಯತ್ನವೂ ನನ್ನದಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ರಾಮಮಂದಿರಕ್ಕೆ ಹಣ ಕೊಡದಿರುವ ಮನೆ ಮಾರ್ಕ್ ಯಾಕೆ ಎಂಬ ಕುಮಾರಸ್ವಾಮಿ ಹೇಳಿಕೆ ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಬಿಜೆಪಿ ನಾಯಕರು ಹೆಚ್ ಡಿಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ರಾಮಮಂದಿರ ನಿರ್ಮಾಣಕ್ಕೆ ನನ್ನ ವಿರೋಧವಿಲ್ಲ.

ಆದರೆ ಬೀದಿ ಬೀದಿಗಳಲ್ಲಿಕೆಲವು ಪೋಲಿಪುಂಡರು ಹಣ ಸಂಗ್ರಹ ಮಾಡುತ್ತಿದ್ದಾರಲ್ಲ ಅದಕ್ಕೆ ನನ್ನ ವಿರೋಧವಿದೆ.

ಸ್ಟಿಕ್ಕರ್ ಅಂಟಿಸುವ ಚಿಲ್ಲರೆ ರಾಜಕಾರಣ ನಾವು ಮಾಡಿಲ್ಲ. ಮಂತ್ರಿ ಅಶ್ವತ್ ನಾರಾಯಣ ಇಲ್ಲಿ ಮಲ್ಲೇಶ್ವರದಲ್ಲಿ ಕೊಟ್ಯಂತರ ರೂಪಾಯಿಯ ಜಾಗ ಹೊಡೆದುಕೊಂಡು ಬಂದರಲ್ಲ ಹಾಗಲ್ಲ ದೇವೇಗೌಡರ ಕುಟುಂಬದವರು.

ದ್ಯಾಬಲಾಪುರ ಘಟನೆಗೆ ದೇವೇಗೌಡರ ಕುಟುಂಬ ಕಾರಣರಲ್ಲ. ನಾವು ಬೆಂಕಿಹಚ್ಚುವವರಲ್ಲ. ಬೆಂಕಿ ಆರಿಸುವ ಕುಟುಂಬದವರು ದ್ಯಾಬಲಾಪುರ ಘಟನೆ ಸಂತ್ರಸ್ತರಿಗೆ ಪರಿಹಾರ ಕೊಟ್ಟವರು ನಾವು.

ಹಿಟ್ಲರನ ನಾಜಿ ಸಿದ್ದಾಂತದ ಬಗ್ಗೆ ನಾನು ಓದಿಕೊಂಡೇ ಮಾತನಾಡಿರೋದು.ಈಗ ಸ್ವಾತಂತ್ರ್ಯ ಹೋರಾಟಕ್ಕೆ ನಿಮ್ಮ ಕೊಡುಗೆ ಏನು ಎಂದು ಹೇಳಿ ನೋಡೋಣ ಎಂದು ಪ್ರಶ್ನಿಸಿದರು.

ರಾಮಮಂದಿರ | ಮಾಜಿ ಮುಖ್ಯಮಂತ್ರಿಗಳಿಗೆ ಗುಮ್ಮಿದ ಬಿಜೆಪಿ ರಾಜ್ಯಾಧ್ಯಕ್ಷ

ರಾಮಮಂದಿರ | ಮಾಜಿ ಮುಖ್ಯಮಂತ್ರಿಗಳಿಗೆ ಗುಮ್ಮಿದ ಬಿಜೆಪಿ ರಾಜ್ಯಾಧ್ಯಕ್ಷ

ವಿಜಯಪುರ : ರಾಮ ಮಂದಿರಕ್ಕೆ ದೇಣಿಗೆ ವಸೂಲಿ ವಿಚಾರವಾಗಿ ಮಾಜಿ ಸಿಎಂಗಳಾದ ಹೆಚ್ ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ನಳಿನ್ ಕುಮಾರ್ ಕಟೀಲ್, ದೊಡ್ಡವರಾಗಿ ಇಂಥಹ ಸಣ್ಣತನದ ಮಾಡು ಆಡಬಾರದು. ಅಂತ ವ್ಯಕ್ತಿ ಬಾಯಿಂದ ನಾನು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ರಾಮ ಏನು? ರಾಮ ಮಂದಿರ ಏನು? ಗೌರವ ಇದ್ರೆ ಕೊಡಿ ಎಂದರು. ಇನ್ನು ವಿವಾದಾತ್ಮಕ ಸ್ಥಳದಲ್ಲಿ ಕಟ್ಟುತ್ತಿರುವ ರಾಮ ಮಂದಿರಕ್ಕೆ ಹಣ ನೀಡಲ್ಲ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಕಟೀಲ್, ರಾಮನ ಮೇಲೆ ಗೌರವ ಉಂಟು, ಸುಪ್ರೀಂ ಕೋರ್ಟ್ ಮೇಲೆ ಇಲ್ವಾ..? ಸುಪ್ರೀಂ ಕೋರ್ಟ್ ಹೇಳಿರೋದು, ಮೋದಿ ಹೇಳಿಲ್ಲ. ವಿಶ್ವಹಿಂದೂ ಪರಿಷತ್ ಕೂಡ ಹೇಳಿದ್ದಲ್ಲ, ಸುಪ್ರೀಂ ಕೋರ್ಟೇ ಟ್ರಸ್ಟ್ ರಚನೆ ಮಾಡಿರೋದು. ಸುಪ್ರೀಂ ಕೋರ್ಟ್ ಹಾಗೂ ಸಂವಿಧಾನದ ಮೇಲೆ ಯಾರಿಗೆ ಗೌರವ ಇಲ್ಲವೋ ಅವರು ಇಂಥ ಮಾತು ಹೇಳ್ತಾರೆ ಎಂದರು.

ಪೋಲಿಪುಂಡರಿಂದ ಮಂದಿರ ನಿರ್ಮಾಣಕ್ಕೆ ಹಣ ಸಂಗ್ರಹ : ಹೆಚ್.ಕೆ.ಕುಮಾರಸ್ವಾಮಿ

ಪೋಲಿಪುಂಡರಿಂದ ಮಂದಿರ ನಿರ್ಮಾಣಕ್ಕೆ ಹಣ ಸಂಗ್ರಹ : ಹೆಚ್.ಕೆ.ಕುಮಾರಸ್ವಾಮಿ

ಬೆಂಗಳೂರು : ರಾಮಮಂದಿರ ನಿರ್ಮಾಣಕ್ಕೆ ನನ್ನ ವಿರೋಧವಿಲ್ಲ. ಆದರೆ ಬೀದಿ ಬೀದಿಗಳಲ್ಲಿಕೆಲವು ಪೋಲಿಪುಂಡರು ಹಣ ಸಂಗ್ರಹ ಮಾಡುತ್ತಿದ್ದಾರಲ್ಲ ಅದಕ್ಜೆ ನನ್ನ ವಿರೋಧವಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮದ ಹೆಸರಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ.

ರಾಮನ ಹೆಸರಲ್ಲಿ ,ಧರ್ಮದ ಹೆಸರಲ್ಲಿ ದೇವೇಗೌಡರ ಕುಟುಂಬ ಎಂದೂ ರಾಜಕಾರಣ ಮಾಡಿಲ್ಲ.

ಮೊಳೆ ಹೊಡೆಯುವ ಕೆಲಸ ಜೆಡಿಎಸ್ ಮಾಡುತ್ತಿಲ್ಲ. ಈಗ ದೇಶ ರಕ್ಷಣೆ ಹೆಸರೇಳಿಕೊಂಡು ಹೊರಟಿದ್ದಾರಲ್ಲ.ಇವರು ಮೊಳೆ ಹೊಡೆಯುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.

ಇದೇ ವೇಳೆ ರಾಮಮಂದಿರ ನಿರ್ಮಾಣಕ್ಕೆ ಹಣ ಸಂಗ್ರಹದ ಅಧಿಕಾರ ಇವರಿಗೆ ಕೊಟ್ಟವರು ಯಾರು ಎಂದು ಪ್ರಶ್ನಿಸಿದ ಕುಮಾರಸ್ವಾಮಿ,

ಪಾರದರ್ಶಕತೆ ಎಲ್ಲಿದೆ.ಲೆಕ್ಕಕೊಡಿ ರಾಮನ ಹೆಸರಲ್ಲಿ ಹಣ ದುರ್ಬಳಕೆ ಆಗಬಾರದು ಎಂದು ಹೇಳಿದ್ದೇನೆ.ನಾನು ಎಲ್ಲೂ ರಾಮನಿಗೆ ಅವಮಾನ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ದೇಣಿಗೆ ನೀಡಿ ಶ್ರೀರಾಮನನ್ನು ಕುರುಡಾಗಿ ಆರಾಧಿಸುವ ಭಕ್ತ ನಾನಲ್ಲ : ಹೆಚ್ ಡಿಕೆ

ದೇಣಿಗೆ ನೀಡಿ ಶ್ರೀರಾಮನನ್ನು ಕುರುಡಾಗಿ ಆರಾಧಿಸುವ ಭಕ್ತ ನಾನಲ್ಲ : ಹೆಚ್ ಡಿಕೆ

ಬೆಂಗಳೂರು : ಹಣ, ದೇಣಿಗೆ ನೀಡಿ ಶ್ರೀರಾಮನನ್ನು ಕುರುಡು ಕುರುಡಾಗಿ ಆರಾಧಿಸುವ ಭಕ್ತ ನಾನಲ್ಲ. ಹಣ ನೀಡಿ ನನ್ನ ಭಕ್ತಿ ಸಾಬೀತು ಮಾಡಬೇಕಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಅವರು, ಆಗಾಗ್ಗೆ ಈ ಮಾತು ಹೇಳುತ್ತಿರುತ್ತೇನೆ. ನಮ್ಮ ನಡುವಿನ ನಿಷ್ಕಪಟ, ಕಳಂಕವಿಲ್ಲದ ಜಾತ್ಯತೀತವಾದಿ ದೇವೇಗೌಡರು. ತಮ್ಮ ಧರ್ಮದ ಬಗ್ಗೆ ಆಳವಾದ ನಂಬಿಕೆ ಇದ್ದೂ, ಪರಧರ್ಮದ ಬಗ್ಗೆ ಅಪಾರ ಗೌರವ ಉಳ್ಳವರವರು. ಅವರಷ್ಟು ದೈವತ್ವ ನಂಬಿದವರು, ದೇಗುಲ ನೋಡಿದವರು ಇನ್ನೊಬ್ಬರಿಲ್ಲ. ದೈವದ ಮೇಲೆ ನಮ್ಮ ಕುಟುಂಬಕ್ಕಿರುವ ನಂಬಿಕೆ ಪ್ರಶ್ನಿಸುವವರು ಮೂರ್ಖರು.

“ಪ್ರಧಾನಿ ಸ್ಥಾನ ಕೊಟ್ಟಿದ್ದೂ ದೇವರೇ, ಆ ಸ್ಥಾನದಲ್ಲಿ ಮುಂದುವರಿಯುವ ಅಥವಾ ಸ್ಥಾನ ತೊರೆಯುವ ಅವಕಾಶಗಳಿದ್ದರೂ ಸ್ಥಾನ ತೊರೆಯಬೇಕೆಂಬ ನಿರ್ಣಯ ಕೊಟ್ಟಿದ್ದೂ ದೇವರೇ,” ಇದು ಶೃಂಗೇರಿ ಜಗದ್ಗುರುಗಳ ಎದುರು ದೇವೇಗೌಡರು ಪ್ರಮಾಣಿಕವಾಗಿ, ಬಹಿರಂಗವಾಗಿ ಹೇಳಿದ್ದ ಮಾತು. ಇದು ನಮ್ಮ ದೈವ ಬದ್ಧತೆಗೆ ಸಾಕ್ಷಿ. ಇದು ನಮಗಿರುವ ದೈವ ಕೃಪೆಗೂ ಸಾಕ್ಷಿ!

ಇಚ್ಛೆಗಳನ್ನಿಟ್ಟುಕೊಂಡು ದೇವರನ್ನು ಆರಾಧಿಸುವುದೇ ತಪ್ಪು. ಅಂಥದ್ದರಲ್ಲಿ ದೇವರನ್ನು ಅಧಿಕಾರಕ್ಕಾಗಿ, ರಾಜಕೀಯಕ್ಕಾಗಿ, ಹಣಕ್ಕಾಗಿ ಬಳಸಿಕೊಳ್ಳುವುದು ಧಾರ್ಮಿಕ ಭ್ರಷ್ಟಾಚಾರ. ರಾಮನ ಹೆಸರಲ್ಲಿ ಧಾರ್ಮಿಕ ಭ್ರಷ್ಟಾಚಾರದಲ್ಲಿ ತೊಡಗಿರುವವರಿಗೆಲ್ಲ ಮುಂದೆ ತಕ್ಕ ಫಲ ಸಿಗಲಿಕ್ಕಿದೆ.ಈಗ ಅರಚುವವರೆಲ್ಲರೂ ಅದಕ್ಕಾಗಿ ಕಾಯಲಿ.ಅದರ ಫಲವನ್ನೂ ಉಣ್ಣಲಿ.

ಪೂರ್ಣ ಸುದ್ದಿ ಓದಲು ಲಿಂಕ್ ಗಳನ್ನ ಕ್ಲಿಕ್ ಮಾಡಿ

Tags: BJPCongressJDSpoliticspolitics newsState Government
ShareTweetSendShare
Join us on:

Related Posts

ಬಸ್ ಪ್ರಯಾಣಿಕರಿಗೆ ದರ ಏರಿಕೆ ಬಿಸಿ: ಸಾರಿಗೆ ಸಂಸ್ಥೆಗಳ ಉಳಿವಿಗೆ ದರ ಏರಿಕೆ ಅನಿವಾರ್ಯ – ಡಿಕೆ ಶಿವಕುಮಾರ್

ತೆರಿಗೆ ಹಣಕ್ಕಿಂತ ಜನರ ಆರೋಗ್ಯವೇ ಮುಖ್ಯ: ಕರ್ನಾಟಕದಲ್ಲಿ ಗುಟ್ಕಾ ಮತ್ತು ಪಾನ್ ಮಸಾಲ ನಿಷೇಧ- ಮುಕ್ತ ಕರ್ನಾಟಕಕ್ಕೆ ಡಿ.ಕೆ. ಶಿವಕುಮಾರ್ ಖಡಕ್ ನಿರ್ಧಾರ

by Shwetha
June 29, 2026
0

ಬೆಂಗಳೂರು: ರಾಜ್ಯದ ಜನರ ಆರೋಗ್ಯದ ಹಿತದೃಷ್ಟಿಯಿಂದ ಪಾನ್ ಮಸಾಲ ಹಾಗೂ ಗುಟ್ಕಾವನ್ನು ಸಂಪೂರ್ಣವಾಗಿ ನಿಷೇಧಿಸಲು ಕರ್ನಾಟಕ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ರಾಜ್ಯದ ಬೊಕ್ಕಸಕ್ಕೆ ನೂರು ಕೋಟಿ...

ಮೋದಿ ಸರ್ಕಾರದ ವಿದೇಶಾಂಗ ನೀತಿಗೆ ಸಕ್ಸಸ್ : ಶತ್ರುಗಳಿಗೆ ಹಾರ್ಮುಜ್ ಬಂದ್ ಮಿತ್ರ ಭಾರತಕ್ಕೆ ಮುಕ್ತ ಅವಕಾಶ ಟ್ರಂಪ್ ಬೆದರಿಕೆಗಳಿಗೆ ಕವಡೆ ಕಾಸಿನ ಬೆಲೆ ನೀಡದ ಇರಾನ್

ಸಿಎಂ ಸಿಂಹಾಸನ ನಶ್ವರ ಜನರ ಹೃದಯ ಸಿಂಹಾಸನ ಶಾಶ್ವತ: ಅಧಿಕಾರ ಹೋದರೂ ಕುಗ್ಗದ ವರ್ಚಸ್ಸು ಮಾಜಿ CM ಸಿದ್ದರಾಮಯ್ಯ ಭಾವನಾತ್ಮಕ ಪೋಸ್ಟ್

by Shwetha
June 29, 2026
0

ಮೈಸೂರು: ಮುಖ್ಯಮಂತ್ರಿ ಸ್ಥಾನ ಎಂಬುದು ಶಾಶ್ವತವಲ್ಲ, ಅದು ಬಂದು ಹೋಗುವಂತದ್ದು. ಆದರೆ ಜನರ ಹೃದಯದಲ್ಲಿ ಪಡೆಯುವ ಸ್ಥಾನ ಎಂದಿಗೂ ಅಳಿಯದ ಶಾಶ್ವತ ಆಸ್ತಿ ಎಂದು ಮಾಜಿ ಮುಖ್ಯಮಂತ್ರಿ...

ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ನಾವು ಕೇಂದ್ರದ ಪರ: ಕರ್ನಾಟಕವನ್ನು ಸ್ಲೀಪರ್ ಸೆಲ್ ಆಗಲು ಬಿಡುವುದಿಲ್ಲ ಎಂದ ಸಚಿವ ಪ್ರಿಯಾಂಕ್ ಖರ್ಗೆ

ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ನಾವು ಕೇಂದ್ರದ ಪರ: ಕರ್ನಾಟಕವನ್ನು ಸ್ಲೀಪರ್ ಸೆಲ್ ಆಗಲು ಬಿಡುವುದಿಲ್ಲ ಎಂದ ಸಚಿವ ಪ್ರಿಯಾಂಕ್ ಖರ್ಗೆ

by Shwetha
June 29, 2026
0

ಬೆಂಗಳೂರು: ರಾಷ್ಟ್ರೀಯ ಭದ್ರತೆ ಮತ್ತು ದೇಶದ ಹಿತಾಸಕ್ತಿಯ ವಿಷಯ ಬಂದಾಗ ರಾಜ್ಯ ಸರ್ಕಾರವು ಯಾವಾಗಲೂ ಕೇಂದ್ರದ ಒಕ್ಕೂಟ ಸರ್ಕಾರದ ಪರವಾಗಿ ಇರುತ್ತದೆ. ಯಾವುದೇ ಕಾರಣಕ್ಕೂ ಕರ್ನಾಟಕವನ್ನು ದೇಶದ್ರೋಹಿಗಳ...

ಚಪ್ಪಲಿ ಎಸೆದವರೇ ಒಂದು ದಿನ ಪ್ರದೀಪ್ ಈಶ್ವರ್ ಗೆ ಹಾರ ಹಾಕ್ತಾರೆ: ಯುಟಿ ಖಾದರ್ ಭವಿಷ್ಯ

ಚಪ್ಪಲಿ ಎಸೆದವರೇ ಒಂದು ದಿನ ಪ್ರದೀಪ್ ಈಶ್ವರ್ ಗೆ ಹಾರ ಹಾಕ್ತಾರೆ: ಯುಟಿ ಖಾದರ್ ಭವಿಷ್ಯ

by Shwetha
June 29, 2026
0

ಮಂಗಳೂರು: ಕೆಂಪೇಗೌಡ ದಿನಾಚರಣೆಯ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರ ಕಾರಿನ ಮೇಲೆ ಕಿಡಿಗೇಡಿಗಳು ಚಪ್ಪಲಿ ಎಸೆದ ಪ್ರಕರಣ ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ....

ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದು ನನ್ನ ಬೆಂಬಲದಿಂದಲೇ: ಎಚ್ಡಿಕೆ ಕಾಲೆಳೆದ ಶಾಸಕ ಜಿಟಿ ದೇವೇಗೌಡ

ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದು ನನ್ನ ಬೆಂಬಲದಿಂದಲೇ: ಎಚ್ಡಿಕೆ ಕಾಲೆಳೆದ ಶಾಸಕ ಜಿಟಿ ದೇವೇಗೌಡ

by Shwetha
June 29, 2026
0

ಮೈಸೂರು: ಜೆಡಿಎಸ್ ಹಿರಿಯ ನಾಯಕ ಹಾಗೂ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ ಟಿ ದೇವೇಗೌಡ ಅವರು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ನೇರ ವಾಗ್ದಾಳಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram