Lava Blaze NXT:
ಭಾರತದ ಪ್ರಮುಖ ಸ್ಮಾರ್ಟ್ಫೋನ್ ತಯಾರಕ ಕಂಪನಿ ಲಾವಾ ಇತ್ತೀಚೆಗೆ ತನ್ನ ಹೊಸ ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ಫೋನ್ ಅನ್ನು ಕಡಿಮೆ ಬೆಲೆಯಲ್ಲಿ ಆಕರ್ಷಕ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಬಿಡಲಾಗಿದೆ .
ಈ ಪೋನನಲ್ಲಿ 4GB RAM + 64GB ಸಂಗ್ರಹಣೆ ಇದ್ದು MediaTek Helio G37 SoC ಚಿಪ್ಸೆಟ್ನಿಂದ ಅನ್ಇನು ಅಳವಡಿಸಲಾಗಿದೆ, 6.5 ಇಂಚಿನ HD+ IPS ಡಿಸ್ಪ್ಲೇ ಹೊಂದಿದೆ. ಫೋನ್ ಆಂಡ್ರಾಯ್ಡ್ 12 ಆಪರೇಟಿಂಗ್ ಸಿಸ್ಟಮ್ನಲ್ಲಿ ಕಾರ್ಯನಿರ್ವಹಿಸಲಿದ್ದು 3.5 ಎಂಎಂ ಹೆಡ್ಫೋನ್ ಜ್ಯಾಕ್ ಹೊಂದಿದೆ.
ಬ್ಯಾಟರಿಗೆ ಸಂಬಂಧಿಸಿದಂತೆ, ಇದು 5000 mAh ಸಾಮರ್ಥ್ಯದ ಶಕ್ತಿಯುತ ಬ್ಯಾಟರಿಯನ್ನು ಹೊಂದಿದೆ. ವರ್ಚುವಲ್ RAM ವೈಶಿಷ್ಟ್ಯದೊಂದಿಗೆ ಫೋನ್ನ RAM ಅನ್ನು 3GB ವರೆಗೆ ಹೆಚ್ಚಿಸಬಹುದು.
ಈ ಫೋನನಲ್ಲಿ ಕ್ಯಾಮೆರಾಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು . ಇದು ಟ್ರಿಪಲ್ ಸೆಟಪ್ ನಲ್ಲಿ ಹಿಂಬದಿಯ ಕ್ಯಾಮೆರಾವನ್ನು ಹೋಂದಿದು . ಎರಡು ಸೆಕೆಂಡರಿ ಸೆನ್ಸಾರ ಹೊಂದಿದ್ದು 13-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ . ಈ ಪೋನ ಕ್ಯಾಮಾದಲ್ಲಿ 1080p ಪೂರ್ಣ HD ವೀಡಿಯೊಗಳನ್ನು ರೆಕಾರ್ಡ್ ಮಾಡಬಹುದು.
Lava Blaze NXT ಬೆಲೆ ರೂ. 9,299. ಫೋನ್ ಆಗಿದ್ದು ನೀಲಿ ಮತ್ತು ಕೆಂಪು ಬಣ್ಣಗಳಲ್ಲಿ ಈ ಪೋನ ಲಭ್ಯವಿದೆ. ಈ ಫೋನ್ನ ಮೊದಲ ಮಾರಾಟ ಯಾವಾಗ ಪ್ರಾರಂಭವಾಗುತ್ತದೆ ಎಂಬುದು ಇನ್ನೂ ತಿಲಿದು ಬಂದಿಲ್ಲ.