ಕುಮಾರಸ್ವಾಮಿ ಆರೋಪಕ್ಕೆ ಲಾಯರ್ ಸಿದ್ದರಾಮಯ್ಯ ಲಾ ಪಾಯಿಂಟ್
ಮೈಸೂರು : ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ – ಹೆಚ್ ಡಿ ಕುಮಾರಸ್ವಾಮಿ ಮಧ್ಯೆ ವಾಕ್ಸಮರ ಮುಂದುವರಿದೆ. ನಿನ್ನೆ ಚಾಮುಂಡೇಶ್ವರಿಯಲ್ಲಿ ಕುಮಾರಸ್ವಾಮಿ ವಿರುದ್ಧ ಘರ್ಜಿಸಿದ್ದ ಸಿದ್ದರಾಮಯ್ಯಗೆ ಇಂದು ಟ್ವಿಟ್ಟರ್ ನಲ್ಲಿ ಕುಮಾರಸ್ವಾಮಿ ತಿರುಗೇಟು ನೀಡಿದ್ದರು.
ಇದೀಗ ಕುಮಾರಸ್ವಾಮಿ ಅವರು ಟ್ವೀಟ್ ಗಳಿಗೆ ಸಿದ್ದರಾಮಯ್ಯ ಲಾ ಪಾಯಿಂಟ್ ಹಾಕಿದ್ದಾರೆ.
“ಸಿದ್ದರಾಮಯ್ಯನವರೇ ಎಂದೂ ರಾಜಕೀಯ ಒಳಒಪ್ಪಂದದ ಬಗ್ಗೆ ಮಾತಾಡಬೇಡಿ. ತಾವು ರಾಜಕೀಯ ಒಳಒಪ್ಪಂದಗಳ ಜನಕ. ಅದು ಯಾವಾಗಲೂ ಸಾಬೀತಾಗಿದೆ ಎಂಬ ಹೆಚ್ ಡಿಕೆ ಆರೋಪಕ್ಕೆ ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಯಾರು ಒಳ ಒಪ್ಪಂದ ಮಾಡಿಕೊಂಡಿದ್ರು? ಗೊಪಾಲಯ್ಯನಿಗೆ ಯಾರು ಟಿಕೆಟ್ ಕೊಟ್ಟವರು ಎಂದು ಪ್ರಶ್ನಿಸಿ, ಕುಮಾರಸ್ವಾಮಿ ಹೇಳಿದ್ದಕ್ಕೆಲ್ಲಾ ಉತ್ತರ ಕೊಡೋಕೆ ನಾನಿಲ್ಲ ಎಂದು ಸಿಟ್ಟಾದ್ರು.
ತಾಕತ್ತಿದ್ದರೇ ಸ್ವಂತ ಪಕ್ಷ ಕಟ್ಟಿ, 10 ಸೀಟು ಗೆಲ್ಲಿ : ಸಿದ್ದರಾಮಯ್ಯಗೆ ಹೆಚ್ ಡಿಕೆ ಸವಾಲ್
ಜೆಡಿಎಸ್ ಬಿಜೆಪಿಯವರು 29 ಕ್ಷೇತ್ರಗಳಲ್ಲಿ ಒಳ ಒಪ್ಪಂದ ಮಾಡಿಕೊಂಡಿದ್ರು. ಎಲ್ಲಾ ಕ್ಷೇತ್ರಗಳಲ್ಲು ಅವರು ಮಾಡಿಕೊಂಡಿರಲಿಲ್ಲ. ನಿನ್ನೆ ನಾನು ಅದನ್ನೆ ಹೇಳಿದ್ದು ಎಂದ ಸಿದ್ದರಾಮಯ್ಯ ನಾನು ಮನೆ ಬಿಟ್ಟುಕೊಟ್ಟಿಲ್ಲ ಎಂಬುದು ಸುಳ್ಳು. ಕುಮಾರಸ್ವಾಮಿ ಮೊದಲೇ ಹೋಟೆಲ್‍ನಲ್ಲಿ ರೂಂ ಮಾಡಿಕೊಂಡಿದ್ದ. ಕುಮಾರಸ್ವಾಮಿ ಹೋಟೆಲ್‍ನಲ್ಲಿ ಉಳಿದಿದ್ದು ನಿಜವೋ, ಅಲ್ಲವೋ? ಅದು ನಿಜವಾದ ಮೇಲೆ ಚರ್ಚೆ ಮಾಡುವುದಕ್ಕೆ ಏನೂ ಇಲ್ಲ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel