ಇಂಡಿಯನ್ ಎಕ್ಸ್ ಪ್ರೆಸ್ ಹಳಿ ತಪ್ಪಿದ್ದು ಹೇಗೆ..? ವೀಕ್ಷಿಸಿ ಬ್ರೇಕ್ ಪಾಯಿಂಟ್ ನಲ್ಲಿ..!

1 min read
Mahesh Bhupathi saaksha tv

ನಿತೇಶ್ ತಿವಾರಿ ಮತ್ತು ಅಶ್ವಿನಿ ಅಯ್ಯರ್ ತಿವಾರಿ ಅವರು ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಅವರ ಆನ್-ಕೋರ್ಟ್ ಪಾಲುದಾರಿಕೆ ಆಫ್-ಕೋರ್ಟ್ ಜೀವನ ಆಧಾರಿತ ಒಂದು ಕುತೂಹಲಕಾರಿ ಕಥೆಯನ್ನು ತರಲು ಸಜ್ಜಾಗಿದ್ದಾರೆ.

ತನ್ನ 23ನೇ ವಯಸ್ಸಿನಲ್ಲೇ ಮಿಶ್ರ ಡಬಲ್ಸ್’ನಲ್ಲಿ ಗ್ರಾಂಡ್’ಸ್ಲಾಂ ಪ್ರಶಸ್ತಿ ಗೆದ್ದು ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಶ್ರೇಯಕ್ಕೆ ಪಾತ್ರರಾಗಿರುವ‌ ಮಹೇಶ್ ಭೂಪತಿ ಪುರುಷರ ಡಬಲ್ಸ್ ನಲ್ಲಿ ಲಿಯಾಂಡರ್ ಪೇಸ್ ಜತೆಗೂಡಿ ಚಾಂಪಿಯನ್ ಪಟ್ಟಕ್ಕೇರಿದವರು.

ಅವರ ತಂದೆ ಸಿ ಜಿ ಕೃಷ್ಣ ಭೂಪತಿ ಸಹ ವೃತ್ತಿಪರ ಟೆನಿಸ್ ಆಟಗಾರರಾಗಿದ್ದು, ಅವರ ಮಗ ಕೂಡ ಟೆನಿಸ್ ಆಟಗಾರನಾಗಬೇಕೆಂದು ನಿರ್ಧರಿಸಿದ್ದರು.

ಮಹೇಶ್ ಅವರ ತಂದೆಯ ಕುಟುಂಬದಲ್ಲಿ ಟೆನಿಸ್‌ ಕಡೆ ಒಲವಿತ್ತು. ಅವರ ಅಜ್ಜ ಸಹ ಟೆನಿಸ್‌ ಆಟಗಾರರಾಗಿದ್ದರು ಮತ್ತು ಅವರು ತನ್ನ ಎಲ್ಲ ಮಕ್ಕಳು ಟೆನಿಸ್‌ ಆಟವಾಡಲು ಪ್ರೋತ್ಸಾಹ ನೀಡಿದ್ದರು.

ಮಹೇಶ್ ಅವರ ತಂದೆ ಟೆನಿಸ್‌ ನಲ್ಲಿ ಬಹಳಷ್ಟು ಉತ್ತಮ ಸಾಧನೆ ಮಾಡಿದ್ದಾರೆ. ಅವರು ರಾಷ್ಟ್ರಮಟ್ಟದಲ್ಲಿ ಭಾರತದಲ್ಲಿ 6 ನೇ ಸ್ಥಾನವನ್ನು ಗಳಿಸಿದ್ದರು.

ಆದರೆ ದುರದೃಷ್ಟವಶಾತ್, ಕೃಷ್ಣ ಭೂಪತಿ ಅವರಿಗೆ ಕಾರು ಅಪಘಾತದಲ್ಲಿ ಕೈ ಮುರಿದು ಅವರ ಟೆನಿಸ್ ಬಗ್ಗೆಗಿನ ಕನಸುಗಳ ಅಂತ್ಯವಾದವು.

ಮಹೇಶ್ 3 ವರ್ಷದವರಾಗಿದ್ದಾಗ ಅವರ ತಂದೆ ಕೃಷ್ಣ ಭೂಪತಿ ಟೆನಿಸ್‌ನಲ್ಲಿ ತರಬೇತಿ ನೀಡಲು ಆರಂಭಿಸಿದರು ಮತ್ತು 11 ನೇ ವಯಸ್ಸಿನಲ್ಲಿ ಮೊದಲ ವಿಂಬಲ್ಡನ್ ಅನ್ನು ಆಡಲು ಅವರನ್ನು ಸಮರ್ಥನನ್ನಾಗಿಸಿದರು .

Mahesh Bhupathi saaksha tv

ನನ್ನ ತಂದೆ ನಾನು 7 ನೇ ವಯಸ್ಸಿನಲ್ಲಿ ಇದ್ದಾಗ ಮಧ್ಯಪ್ರಾಚ್ಯಕ್ಕೆ ವರ್ಗಾವಣೆಗೊಂಡರು. ನಾವು ಐದು ವರ್ಷ ಯುಎಇಯಲ್ಲಿದ್ದೆವು.

ನಂತರ ಅವರಿಗೆ ಒಮಾನ್‌ನಲ್ಲಿ ಇನ್ನೊಂದು ಕೆಲಸ ಸಿಕ್ಕಿತು. ಹಾಗಾಗಿ ನಾವು ಐದು ವರ್ಷಗಳ ನಂತರ ಮಸ್ಕತ್ ಗೆ ಹೋದೆವು.

ಟೆನಿಸ್ ಕೋರ್ಟ್‌ಗಳು ಮತ್ತು ಜಿಮ್‌ಗಳಂತಹ ಸೌಲಭ್ಯಗಳಿಂದ ನಾನು ಟೆನಿಸ್‌ ವೃತ್ತಿಪರ ಆಟಗಾರನಾಗಿ ಬದಲಾಗಲು ಬಯಸಿದೆ.

ಆಗ ನನ್ನ ವಯಸ್ಸಿನ ಯಾರು ನನ್ನ ಜೊತೆಗಿರಲಿಲ್ಲ. ನನ್ನ ತಂದೆ ದಿನಕ್ಕೆ ಎರಡು ಬಾರಿ ನನ್ನೊಂದಿಗೆ ಆಟವಾಡುತ್ತಿದ್ದರು.

ನಾನು ಅವರೊಂದಿಗೆ ಬೆಳಿಗ್ಗೆ 6.30 ರಿಂದ 7.30 ರವರೆಗೆ ಕೋರ್ಟ್ ನಲ್ಲಿರುತ್ತಿದ್ದೆ. ನಂತರ ಅವರು, ಸ್ನಾನ ಮಾಡಿ 8 ರ ಹೊತ್ತಿಗೆ ಕೆಲಸಕ್ಕೆ ಹೋಗುತ್ತಿದ್ದರು.

ಬಳಿಕ ಆಫೀಸ್ ಮುಗಿಸಿ ಇನ್ನೊಂದು ಗಂಟೆ ನನ್ನೊಂದಿಗೆ ಟೆನಿಸ್ ಆಡುತ್ತಿದ್ದರು ಎಂದು ಮಹೇಶ್ ತಮ್ಮ ತಂದೆಯ ಬಗ್ಗೆ ಹೇಳಿದ್ದಾರೆ.

1997 ರಲ್ಲಿ, ಮಹೇಶ್ ಅವರು ಮಿಶ್ರ ಡಬಲ್ಸ್‌ನಲ್ಲಿ ಫ್ರೆಂಚ್ ಓಪನ್ ಕಿರೀಟವನ್ನು ಗೆದ್ದಾಗ ಗ್ರ್ಯಾಂಡ್ ಸ್ಲಾಮ್ ಗೆದ್ದ ಮೊದಲ ಭಾರತೀಯರಾದರು.

1999 ರಲ್ಲಿ, ಅವರು ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್ ಸೇರಿದಂತೆ ತನ್ನ ಟೆನ್ನಿಸ್ ಪಾಲುದಾರ ಲಿಯಾಂಡರ್ ಪೇಸ್ ಜೊತೆ ಮೂರು ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದರು.

ಅವರ ಎರಡು ದಶಕಗಳಿಗೂ ಹೆಚ್ಚು ಅವಧಿಯ ವೃತ್ತಿಜೀವನದಲ್ಲಿ, ಅವರು 12 ಗ್ರ್ಯಾಂಡ್ ಸ್ಲಾಮ್‌ಗಳನ್ನು (ಡಬಲ್ಸ್‌ನಲ್ಲಿ 4 ಮತ್ತು ಮಿಶ್ರ ಡಬಲ್ಸ್‌ನಲ್ಲಿ 8)ಗೆದ್ದಿದ್ದಾರೆ.

ನಿತೇಶ್ ತಿವಾರಿ ಮತ್ತು ಅಶ್ವಿನಿ ಅಯ್ಯರ್ ತಿವಾರಿ ಅವರು ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಅವರ ಆನ್-ಕೋರ್ಟ್ ಪಾಲುದಾರಿಕೆ ಮತ್ತು ಆಫ್-ಕೋರ್ಟ್ ಜೀವನ ಆಧಾರಿತ ಒಂದು ಕುತೂಹಲಕಾರಿ ಕಥೆಯನ್ನು ತರಲು ಸಜ್ಜಾಗಿದ್ದಾರೆ.

‘ಬ್ರೇಕ್ ಪಾಯಿಂಟ್’ ಸರಣಿಯೊಂದಿಗೆ ಬ್ರೊಮೆನ್ಸ್ ಟು ಬ್ರೇಕಪ್ ಭಾರತದ ಅತಿದೊಡ್ಡ ಸ್ವದೇಶಿ ವೀಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ZEE5 ನಲ್ಲಿ ತೆರೆಕಾಣಲಿದೆ.

ಅಶ್ವಿನಿ ಮತ್ತು ನಿತೇಶ್ ಸಹ ನಿರ್ದೇಶನ ಮತ್ತು ನಿರ್ಮಾಣದ ‘ಬ್ರೇಕು ಪಾಯಿಂಟ್’ 7-ಭಾಗಗಳ ಸರಣಿಯಾಗಿದ್ದು, ಇದು ಟೆನಿಸ್ ಆಟಗಾರರಾದ ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಒಳಗೊಂಡ ಟೆನಿಸ್ ಪಂದ್ಯಗಳ ಜೊತೆಗೆ ಆನ್-ಕೋರ್ಟ್ ಮತ್ತು ಆಫ್-ಕೋರ್ಟ್ ನಲ್ಲಿ ಅವರ ಸಂಬಂಧವನ್ನು ತೆರೆದಿಡಲಿದೆ.

ಏಳು ಕಂತುಗಳ ಸರಣಿಯು ಅಕ್ಟೋಬರ್ 1, 2021 ರಂದು ZEE5 ನಲ್ಲಿ ಲಭ್ಯವಿರುತ್ತದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd