ತುಳಸಿ ಪೂಜೆ ವಿಶೇಷ ಪೂಜಾ ಸಮಯ ಮತ್ತು ವಿಧಾನ ತಿಳಿಯಿರಿ..

1 min read
Tulsi pooja saaksha tv

ತುಳಸಿ ಪೂಜೆ.ವಿಶೇಷ ಪೂಜಾ ಸಮಯ ಮತ್ತು ವಿಧಾನ ತಿಳಿಯಿರಿ..

ಇಂದಿನ ಸೋಮವಾರ ( ಕೆಲವರಿಗೆ ಅವರ ಸಂಪ್ರದಾಯದ
ಪ್ರಕಾರ ಮಂಗಳವಾರ ) ತುಳಸಿ ಪೂಜೆ ಅಥವ ಉತ್ಥಾನ
ದ್ವಾದಶಿ. ಕರ್ನಾಟಕದಲ್ಲಿ ಸೋಮವಾರ ಬೆಳಿಗ್ಗೆ 6.40
ರಿಂದ ಮಂಗಳವಾರ ಬೆಳಿಗ್ಗೆ 8.00 ಘಂಟೆಯ ವರೆಗೆ
ದ್ವಾದಶಿ ಇದೆ. ( ಅವರವರ ಊರಿಗೆ ತಕ್ಕಂತೆ ಒಂದೈದು
ನಿಮಿಷಗಳ ವ್ಯತ್ಯಾಸ ಬರಬಹುದು ).

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ತುಳಸಿಯು ವಿಷ್ಣುವಿನ ಪ್ರಿಯಳು. ವಿಷ್ಣುವಿನ ಪೂಜೆ
ತುಳಸಿ ಇಲ್ಲದೇ ಪೂರ್ಣವಾಗುವುದೇ ಇಲ್ಲ. ತುಳಸಿಯ
ಗಿಡವನ್ನು ಎಲ್ಲರ ಮನೆಯಲ್ಲೂ ಬೆಳಸಿ ಸಂರಕ್ಷಿಸಬೇಕು.
ತುಳಸಿ ಗಿಡವಿರುವಲ್ಲಿ ನಕಾರಾತ್ಮಕ ಶಕ್ತಿಗಳ ಕೆಲಸ
ನಡೆಯುವುದಿಲ್ಲ.

ತುಳಸಿ ಗಿಡದಿಂದ ಬೀಸುವ ಗಾಳಿಯಿಂದ ಸುತ್ತಮುತ್ತಲಿನ
ವಾತಾವರಣ ಪವಿತ್ರಗೊಳ್ಳುತ್ತದೆ. ತುಳಸಿ ಗಿಡದ ಮಹತ್ವ
ಅರಿತಿದ್ದ ನಮ್ಮ ಪೂರ್ವಜರು ತುಳಸಿ ಪೂಜೆಯನ್ನು
ನಿತ್ಯಕರ್ಮವನ್ನಾಗಿಸಿದ್ದಾರೆ. ಪ್ರತಿದಿನ ತುಳಸಿ ಪೂಜೆ
ಮಾಡುವುದರಿಂದ ಒಳಿತು ಮತ್ತು ಏಳಿಗೆ ಕಾಣುಬಹುದು.
ತುಳಸಿ ಪೂಜೆಯನ್ನು ಪ್ರತಿದಿನ ತಪ್ಪದೇ ಮಾಡಬೇಕು.

ತುಳಸಿ ಪೂಜೆಯ ವಿಧಾನ

ಪ್ರತಿದಿನ ಬೆಳಗ್ಗೆ ಬೇಗನೆದ್ದು ಸ್ನಾನ ಮುಗಿಸಿ ತುಳಸಿ ಪೂಜೆ
ಮಾಡತಕ್ಕದ್ದು. ಹೆಣ್ಣು ಮಕ್ಕಳು, ಸುಮಂಗಲಿಯರು ಪೂಜೆ
ಮಾಡುವ ಮುನ್ನ ಹಣೆಗೆ ಕುಂಕುಮ ಹಚ್ಚಿಕೊಂಡು ತುಳಸಿ
ಪೂಜೆ ಮಾಡಬೇಕು. ಮನೆಯ ಮುಂದೆ ಇಟ್ಟಿರುವ ತುಳಸಿ
ಕಟ್ಟೆಯನ್ನು ಗೋಮಯದಿಂದ ಸಾರಿಸಿ ಶುಚಿಗೊಳಿಸಬೇಕು.
ನಂತರ ತುಳಸಿ ಕಟ್ಟೆಯ ಮುಂದೆ ರಂಗೋಲಿ ಹಾಕಿ
ಸಿಂಗರಿಸಬೇಕು.

ಪಾಪಾನಿ ಯಾನಿ ರವಿಸೂನು ಪಟಸ್ಥಿತಾನಿ
ಗೋಬ್ರಹ್ಮಬಾಲಾಪಿತೃಮಾತೃ ವಧಾದಿಕಾನಿ |

ನಶ್ಯಂತಿ ತಾನಿ ತುಳಸೀವನದರ್ಶನೇನ ಗೋಕೋಟಿದಾನ
ಸದೃಶಂ ಫಲಮಾಪ್ನುವಂತಿ ||

ಅರ್ಥ: ತುಳಸಿ ವೃಂದಾವನವನ್ನು ನೋಡಿದರೆ ಸಾಕು
ಕೋಟಿ ಗೋದಾನ ಮಾಡಿದ ಫಲ ಲಭಿಸುತ್ತದೆ. ಗೋಹತ್ಯೆ,
ಬ್ರಹ್ಮ ಹತ್ಯೆ, ಬಾಲಹತ್ಯೆ, ಮಾತೃವಧ, ಪಿತೃವಧೆಯಂತಹ
ಪಾಪಗಳು ಸಹ ನಾಶವಾಗುತ್ತದೆ.

ತುಳಸಿಯ ಕಟ್ಟೆಗೆ ನೀರನ್ನು ಹಾಕಿದ ಮೇಲೆ ತಲೆಯ ಮೇಲೆ
ಆ ನೀರನ್ನು ಪ್ರೋಕ್ಷಣೆ ಮಾಡಿಕೊಳ್ಳಬೇಕು. ತುಳಸಿಯ
ಮೃತ್ತಿಕೆ (ಮಣ್ಣನ್ನು) ಹಣೆಗೆ ಹಚ್ಚಿಕೊಳ್ಳಬೇಕು. ಹೀಗೆ
ಮೃತ್ತಿಕೆಯನ್ನು ಧರಿಸುವಾಗ ಈ ಶ್ಲೋಕವನ್ನು ಪಠಿಸಬೇಕು.

ಲಲಾಟೇ ಯಸ್ಯ ದೃಶ್ಯೇತ ತುಳಸೀಮೂಲಮೃತ್ತಿಕಾ |

ಯಮಸ್ತಂ ನೇಕ್ಷಿತುಂ ಶಕ್ತಃ ಕಿಮು ದೂತಾ ಭಯಂಕರಾಃ ||

ಅರ್ಥ: ತುಳಸಿಯ ಮೃತ್ತಿಕೆಯನ್ನು ಧರಿಸಿರುವವರನ್ನು
ಯಮನೇ ಕತ್ತೆತ್ತಿ ನೋಡಲಾರ, ಇನ್ನು ಯಮನ ಕಿಂಕರು
ಹೇಗೆ ತಾನೆ ನೋಡಬಲ್ಲರು.

ಪುಷ್ಕರಾದ್ಯಾನಿ ತೀರ್ಥಾನಿ ಗಂಗಾದ್ಯಾಃ ಸರಿತಸ್ತಥಾ|

ವಾಸುದೇವಾದಯೋ ದೇವಾ: ವಸಂತಿ ತುಳಸೀವನೇ ||

ಅರ್ಥ: ತುಳಸಿಯ ಬೃಂದಾವನದಲ್ಲಿ ಪುಷ್ಕರಾದಿ
ಸರೋವರ ತೀರ್ಥಗಳು, ಗಂಗೆ ಮೊದಲಾದ ನದಿ
ತೀರ್ಥಗಳು ಮತ್ತು ವಾಸುದೇವಾದಿ ದೇವರೆಲ್ಲಾ
ನೆಲೆಸಿರುತ್ತಾರೆ.

ನಂತರ ಅರಿಶಿನ, ಕುಂಕುಮ ಮತ್ತು ನೀರನ್ನು ಹಾಕಬೇಕು.
ಪೂಜಿಸುವಾಗ ಕೆಳಗಿರುವ ಶ್ಲೋಕವನ್ನು ಪಠಿಸಬೇಕು.

ಶ್ರಿಯಃ ಪ್ರಿಯೇ ಶ್ರೀಯಾವಾಸೇ ನಿತ್ಯಂ ಶ್ರೀಧರವಲ್ಲಭೇ |

ಭಕ್ತ್ಯಾದತ್ತಂ ಮಯಾಮರ್ಘ್ಯಂ ಹಿ ತುಲಸಿ ಪ್ರತಿಗೃಹ್ಯತಾಂ ||

ಅರಿಶಿನ, ಕುಂಕುಮ ಮತ್ತು ನೀರನ್ನು ಹಾಕಿ ಪೂಜಿಸಿದ
ನಂತರ ಹೂವುಗಳಿಂದ ತುಲಸಿಯ ಪೂಜೆ ಮಾಡಬೇಕು,
ಪೂಜಿಸುವಾಗ ಕೆಳಗೆ ಕೊಟ್ಟಿರುವ ಶ್ಲೋಕವನ್ನು
ಹೇಳಬೇಕು.

ಯನ್ಮೂಲೇ ಸರ್ವತೀರ್ಥಾನಿ ಯನ್ಮಧ್ಯೇ ಸರ್ವದೇವತಾಃ |

ಯದಗ್ರೇ ಸರ್ವ ವೇದಾಶ್ಚ ತುಲಸೀತ್ವಾಂ ನಮಾಮ್ಯಹಂ ||

ಅರ್ಥ: ಎಲ್ಲಾ ತೀರ್ಥಗಳೂ ತುಳಸಿಯ ಕೆಳಗಿವೆ. ಎಲ್ಲಾ
ದೇವರುಗಳು ತುಳಸಿಯ ಮೇಲಿದ್ದಾರೆ. ತುಳಸಿಯ
ಮಧ್ಯದಲ್ಲಿ ಎಲ್ಲಾ ವೇದಗಳಿವೆ. ಇಂತಹ ತುಳಸಿಯನ್ನು
ನಮಸ್ಕರಿಸುತ್ತೇನೆ.

ತುಳಸಿ ಅರ್ಚನೆ:

ಶ್ರೀ ತುಳಸೈ ನಮಃ

ಶ್ರೀ ವಿಷ್ಣುಪತ್ನಿಯೈ ನಮಃ

ಅಘ ಹಂತಾರ್ಯೈ ನಮಃ

ಲೋಕ ವಂದಿತಾಯೈ ನಮಃ

ಪೀತಾಂಬರ ಧಾರಿಣ್ಯಾಯೈ ನಮಃ

ಕ್ಷೀರಾಬ್ಧಿ ತನಯೈ ನಮಃ

ಲೋಗ ಜನನ್ಯಾಯೈ ನಮಃ

ಸರ್ವಾಭರಣ ಭೂಷಿತಾಯೈ ನಮಃ

ಸುಮುಖಾಯೈ ನಮಃ

ಸುನಸಿಕಾಯೈ ನಮಃ

ಶ್ರೀ ರಾಮಾಯೈ ನಮಃ

ಶ್ರೀ ತುಳಸೈ ನಮಃ

ತುಳಸಿ ಕಟ್ಟೆಯ ಪ್ರದಕ್ಷಿಣೆ ಮಾಡುವಾಗ ಈ ಕೆಳಗಿನ
ಶ್ಲೋಕಗಳನ್ನು ಹೇಳಬೇಕು.

ತುಳಸಿಕಾನನಂ ಯತ್ರ ಯತ್ರ ಪದ್ಮವನಾನಿ ಚ |

ವಸಂತಿ ವೈಷ್ಣವಾ ಯತ್ರ ತತ್ರ ಸನ್ನಿಹಿತೋ ಹರಿಃ ||

ಅರ್ಥ: ತುಳಸಿ ಕಾನನವೇ ಒಂದು ಪುಣ್ಯ ಕ್ಷೇತ್ರ.
ತುಳಸೀವನ, ಪದ್ಮ ಸಮುದಾಯ, ವೈಷ್ಣವ ವಾಸಗಳಿರುವ
ಪ್ರದೇಶದಲ್ಲಿ ಶ್ರೀಹರಿಯು ನಿತ್ಯವೂ ನೆಲೆಸಿರುತ್ತಾನೆ.

ಪುಷ್ಕರಾದ್ಯಾನಿ ತೀರ್ಥಾನಿ ಗಂಗಾದ್ಯಾಃ ಸಂತಸ್ತಥಾ |

ವಾಸುದೇವೋ ದಯೋದೇವಾಃ ವಸಂತಿ ತುಳಸೀನವೇ ||

ಪ್ರಸೀದ ತುಲಸೀ ದೇವಿ | ಪ್ರಸೀದ ಹರಿವಲ್ಲಭೇ |

ಕ್ಷೀರೋದ ಮಥನೋದ್ಬೂತೇ ತುಲಸೀತ್ವಾಂ ನಮಾಮ್ಯಹಂ
||

ಅರ್ಥ: ಹಾಲಿನ ಕಡಲನ್ನು ಕಡೆದಾಗ ಧನ್ವಂತ್ರಿಯ
ಆನಂದಾಶ್ರುವಿನಿಂದ ಅಮೃತ ಕಳಶದಲ್ಲಿ ಹುಟ್ಟಿದ
ಹರಿಪ್ರಿಯಳಾದ ಲಕ್ಷ್ಮಿಗೆ ನಾನು ನಮಸ್ಕರಿಸುತ್ತೇನೆ.

ನಂತರ ತುಳಸಿ ಮಾತೆಗೆ ನಮಸ್ಕರಿಸಬೇಕು.
ನಮಸ್ಕರಿಸುವಾಗ ಈ ಶ್ಲೋಕವನ್ನು ಪಠಿಸಿ.

ತುಲಸಿ ಶ್ರೀಸಖಿ ಶುಭೇ ಪಾಪಹಾರಿಣಿ ಪುಣ್ಯದೇ|

ನಮಸ್ತೇ ನಾರದನುತೇ ನಾರಾಯಣಮನಃ ಪ್ರಿಯೇ||

ಅರ್ಥ: ಶ್ರೀ ಲಕ್ಷ್ಮಿಯ ಸಖಿ, ಪಾಪ ಪರಿಹರಿಸುವವಳೇ,
ಪೂಣ್ಯವನ್ನು ನೀಡುವ ನಾರದ ಮಹರ್ಷಿಯ ಸುತೆ,
ಶ್ರೀಮನ್ನಾರಯಣನ ಮನಸ್ಸಿಗೆ ಹತ್ತಿರವಾದವಳೇ, ನಿನ್ನನ್ನು
ನಮಸ್ಕರಿಸುತ್ತೇನೆ.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.
ಕಟೀಲು ದುರ್ಗಾಪರಮೇಶ್ವರಿ ದೇವಿ ತಾಯಿ ಆರಾಧನೆ ಮಾಡುತ್ತಾ ಕಟೀಲು ರಕ್ತೇಶ್ವರೀ ದೇವಿಯ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ಮೊಬೈಲ್ ನಂ 8548998564.

ತುಳಸಿ ಪೂಜೆಯ ಮಹತ್ವ

ತುಳಸಿ ಗಿಡದ ಮಹತ್ವವನ್ನು ಪದ್ಮ ಪುರಾಣದಲ್ಲಿ ಹೀಗೆ
ವಿವರಿಸಲಾಗಿದೆ.

ಯಾ ದೃಷ್ಟ್ವಾ ನಿಖಿಲಾಘಸಂಘಶಮನೀ ಸ್ಪೃಷ್ಟಾ
ವಪುಃಪಾವನೀ

ರೋಗಾಣಾಮಭಿವಂದಿತಾ ನಿರಸನೀ ಸಿಕ್ತಾsoತಕತ್ರಾಸಿನೀ
|

ಪ್ರತ್ಯಾಸತ್ತಿವಿಧಾಯಿನೀ ಭಗವತಃ ಕೃಷ್ಣಸ್ಯ ಸಂರೋಪಿತಾ

ನ್ಯಸ್ತಾ ತಶ್ಚರಣೇ ವಿಮುಕ್ತಿಫಲದಾ ತಸ್ಯೈ ತುಳಸ್ಯೈ ನಮಃ ||

ತುಳಸಿ ಗಿಡವನ್ನು ನೋಡುವುದರಿಂದ ನಮ್ಮ ದೇಹ
ಪವಿತ್ರಗೊಳ್ಳುತ್ತದೆ ಮತ್ತು ಪಾಪಗಳು ಕಳೆಯುತ್ತವೆ.

ತುಳಸಿ ಗಿಡವನ್ನು ಸ್ಪರ್ಶಿಸುವುದರಿಂದ ನಮ್ಮ ದೇಹ
ಸ್ವಚ್ಛಗೊಂಡು ಭಗವಂತನ ಚಿಂತನೆಗೆ ತಯಾರಾಗುತ್ತೇವೆ.

ಪ್ರತಿದಿನ ತುಳಸಿ ಗಿಡಕ್ಕೆ ನಮಸ್ಕರಿಸುವುದರಿಂದ ರೋಗ-
ರುಜಿನಗಳು ದೂರವಾಗುತ್ತವೆ.

ಪ್ರತಿದಿನ ತುಳಸಿಯನ್ನು ನೀರೆರೆದು ಸಂರಕ್ಷಿಸುವವರ ಮನೆಗೆ
ಯಮ ಧರ್ಮರಾಯ ಪ್ರವೇಶಿಸಲು ಹೆದರಿಕೊಳ್ಳುತ್ತಾನೆ.

ತುಳಸಿ ಗಿಡವನ್ನು ನೆಟ್ಟು ಪೋಷಿಸುವವರು ಕೃಷ್ಣ
ಪರಮಾತ್ಮನಿಗೆ ಹತ್ತಿರವಾಗುತ್ತಾರೆ.

ಭಕ್ತಿಯಿಂದ ಕೃಷ್ಣನಿಗೆ ತುಳಸಿ ಅರ್ಪಿಸಿ ಮೋಕ್ಷವನ್ನೂ
ಪಡೆಯಬಹುದು.
ತುಳಸಿಯ ಬಳಕೆ ಮತ್ತು ಮಹತ್ವ

ತುಳಸಿಯು ರೋಗನಿರೋಧಕ ಶಕ್ತಿ ನೀಡುವುದರಿಂದ
ತುಳಸಿಯನ್ನು ಆಯುರ್ವೇದ ಚಿಕೆತ್ಸೆಯಲ್ಲಿ ಬಳಕೆ
ಮಾಡಲಾಗುತ್ತದೆ.

ದೇವರ ಪೂಜೆಯ ನಂತರ ಮಾಡುವ ತೀರ್ಥಕ್ಕೆ ತುಳಸಿಯ
ಕಾಷ್ಠವನ್ನು ತೇದು ಹಾಕುಲಾಗುತ್ತದೆ.

ತುಳಸಿ ಗಿಡ ಹೆಚ್ಚು ಆಮ್ಲಜನಕ ನೀಡುವ ಸಸ್ಯವಾಗಿದ್ದು,
ತನ್ನ ಸುತ್ತಮುತ್ತಲಿನ ವಾತಾವರಣವನ್ನು
ಶುಚಿಗೊಳಿಸುತ್ತದೆ. ಆದ್ದರಿಂದ ತುಳಸಿಯ ಸುತ್ತ ಪ್ರದಕ್ಷಿಣೆ
ಹಾಕಬೇಕು.

Tulsi pooja saaksha tv

ತುಳಸಿ ಗಿಡ ವಾಸ್ತು ದೋಷವನ್ನು ನಿವಾರಣೆ ಮಾಡುತ್ತದೆ.

ಗೋಪಿ ಚಂದನದ ಬದಲು ತುಳಸಿಯ ಮೃತ್ತಿಕೆ (ಮಣ್ಣು)
ಯನ್ನು ಹಚ್ಚಿಕೊಳ್ಳಬಹುದು.

ತುಳಸಿ ಮಾಲೆ ಧರಿಸುವುದರಿಂದ ಭಯವಿರುವುದಿಲ್ಲ.

ತುಳಸಿ ಮಾಲೆಯನ್ನು ಧರಿಸುವುದರಿಂದ ಹೃದಯ ಮತ್ತು
ಶ್ವಾಸಕೋಶದ ತೊಂದರೆಗಳು ಬರುವುದಿಲ್ಲ.

ತುಳಸಿ ಮಾಲೆಯನ್ನು ಧರಿಸುವುದರಿಂದ ಸಾತ್ವಿಕ ಭಾವ
ನಮ್ಮಲ್ಲಿ ಮೂಡುತ್ತದೆ.

ಮಣಿಕಟ್ಟಿನಲ್ಲಿ ತುಳಸಿ ಮಾಲೆ ಧರಿಸುವುದರಿಂದ
ನಾಡಿಬಡಿತ ಸರಿಯಾಗಿರುತ್ತದೆ ಮತ್ತು ಭುಜದ ನೋವು
ಬರುವುದಿಲ್ಲ.

ಗರ್ಭಿಣಿಯರ ಸೊಂಟಕ್ಕೆ ತುಳಸಿಯ ಬೇರನ್ನು
ಕಟ್ಟುವುದರಿಂದ ಪ್ರಸವ ವೇದನೆ ಕಡಿಮೆಯಾಗುತ್ತದೆ.

ತುಳಸಿ ಗಿಡದ ಪೋಷಣೆಯ ನಿಯಮಗಳು

ಪುರುಷರು ಮಾತ್ರ ತುಳಸಿಯನ್ನು ಕೀಳುವ ಪದ್ಧತಿ ಇದೆ.

ತುಳಸಿ ಗಿಡವನ್ನು ಬಹಳ ಎಚ್ಚರಿಕೆಯಿಂದ ಎಡಗೈಲಿ ಹಿಡಿದು
ಬಲಗೈಯಿಂದ ಎಲೆಯನ್ನು ಕೀಳಬೇಕು. ತುಳಸಿ ಎಲೆಯನ್ನು
ತೆಗೆದುಕೊಳ್ಳುವಾಗ ಈ ಶ್ಲೋಕವನ್ನು ಹೇಳಬೇಕು.

ತುಲಸ್ಯಮೃತನಾಮಾಸಿ ಸದಾತ್ವಂ ಕೇಶವಪ್ರಿಯೆ |

ಕೇಶವಾರ್ಥ ವಿಚಿನ್ವಾಮಿ ವರದಾಭವ ಶೋಭನೆ ||

ಅರ್ಥ: ಓ ತುಳಸಿ, ನೀನು ಅಮೃತದಿಂದ ಜನಿಸಿದವಳು.
ನೀನು ಸದಾ ಕೇಶವನ ಪ್ರಿಯಳು. ಈಗ, ಕೇಶವನ
ಪೂಜೆಗೆಂದು ನಾನು ನಿನ್ನ ದಳಗಳನ್ನು
ತೆಗೆದುಕೊಳ್ಳುತ್ತಿದ್ದೇನೆ. ನನ್ನನ್ನು ರಕ್ಷಿಸಮ್ಮ.

ದ್ವಾದಶಿಯಂದು, ರಾತ್ರಿ ಹೊತ್ತು, ಗ್ರಹಣ ದಿನಗಳಂದು
ತುಳಸಿಯನ್ನು ಕೀಳಬಾರದು.

ತುಳಸಿ ಗಿಡವನ್ನು ಒಣಗಿಹೋಗದಂತೆ ಕಾಪಾಡಬೇಕು.

ಬೇರೆ ಗಿಡಗಳನ್ನು ಎಸೆಯುವಂತೆ ತುಳಸಿ ಗಿಡವನ್ನು
ಎಸೆಯಬಾರದು, ಅವಕಾಶವಿದ್ದರೆ ನದಿಯಲ್ಲಿ
ವಿಸರ್ಜಿಸಬೇಕು.

ತುಳಸಿ ಗಿಡವನ್ನು ಉತ್ತರ ಹಾಗೂ ಈಶಾನ್ಯ ದಿಕ್ಕಿನಲ್ಲಿ
ಇಡಬೇಕು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.
ಕಟೀಲು ದುರ್ಗಾಪರಮೇಶ್ವರಿ ದೇವಿ ತಾಯಿ ಆರಾಧನೆ ಮಾಡುತ್ತಾ ಕಟೀಲು ರಕ್ತೇಶ್ವರೀ ದೇವಿಯ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ಮೊಬೈಲ್ ನಂ 8548998564.

ದಕ್ಷಿಣ ದಿಕ್ಕಿನಲ್ಲಿ ತುಳಸಿ ಗಿಡವನ್ನು ಇಡಬಾರದು.

ಸಂಜೆ ಹೊತ್ತು ತುಳಸಿಯ ಮುಂದೆ ತಪ್ಪದೆ ದೀಪ
ಹಚ್ಚಿಡಬೇಕು.

ಎಲ್ಲರಿಗೂ ಉತ್ಥಾನ ದ್ವಾದಶಿ / ಕಾರ್ತಿಕ ಮಾಸದ ತುಳಸಿ
ಪೂಜೆ / ತುಳಸಿ ವಿವಾಹ ಹಬ್ಬದ ಶುಭಾಶಯಗಳು…..

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd