ಬೆಂಗಳೂರು: ಹನುಮ ಧ್ವಜ ತೆರವು ಮಾಡುತ್ತಿದ್ದ ಸಂದರ್ಭದಲ್ಲಿ ನಡೆದ ಲಾಠಿ ಚಾರ್ಜ್ ವಿರೋಧಿಸಿ ಗ್ರಾಮಸ್ಥರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
ಮಂಡ್ಯ (Mandya) ಜಿಲ್ಲೆಯ ಕೆರಗೋಡು(Keragodu) ಗ್ರಾಮದಲ್ಲಿ ಹನುಮ ಧ್ವಜ ತೆರವಿಗೆ ಮುಂದಾದಾಗ ಗಲಾಟೆ ನಡೆದು ಪೊಲೀರು ಪ್ರತಿಭಟನಕಾರರ ಮೇಲೆ ಲಾಠಿ ಚಾರ್ಜ್ ನಡೆಸಿದ್ದರು. ಈ ಕುರಿತು ಹೋರಾಟ ನಡೆಸಲು ಗ್ರಾಮಸ್ಥರು ಹೈಕೋರ್ಟ್ ವಕೀಲ ವಿವೇಕ್ ರೆಡ್ಡಿ ಅವರನ್ನು ಸಂಪರ್ಕಿಸಿದ್ದಾರೆ.
ಕೆರಗೋಡು ಗ್ರಾಮದ ಮುಖಂಡ ಮಹೇಶ್ ಅವರ ಜೊತೆ ಗ್ರಾಮಸ್ಥರು ವಕೀಲರನ್ನು ಭೇಟಿಯಾಗಿ ವಿವರಣೆ ನೀಡಿದ್ದಾರೆ ಎನ್ನಲಾಗಿದೆ. ಈ ಮೂಲಕ ಕಾನೂನು ಮೂಲಕ ಪೊಲೀಸರಿಗೆ ಶಾಕ್ ನೀಡಲು ಮುಂದಾಗಿದ್ದಾರೆ.