ಇದ್ದ ಎಂಎಲ್ಎ ಪಧವಿನೂ ಕಳೆದುಕೊಂಡು, ಕ್ಷೇತ್ರದಲ್ಲಿ ರಾಜಕೀಯ ಹಿಡಿತವನ್ನೂ ಕಳೆದುಕೊಂಡು ಪೇಚಿಗೆ ಸಿಲುಕಿದ್ದಾರೆ ಬೈ ಎಲೆಕ್ಷನ್ ನಲ್ಲಿ ಸೋತ ಶಾಸಕರು. ಸೋತರೂ ಸಹ ಏನಾದ್ರೂ ಮಾಡಿ ಅಧಿಕಾರ ಹಿಡಿಯಲೇಬೇಕೆಂದು ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ ಸೋತ ಶಾಸಕರು.
ಸದ್ಯ ಸೋತವರು ಅಧಿಕಾರ ಹಿಡಿಯಲು ಕೆಲವು ಕಾನೂನು ತೊಡುಕುಗಳಿವೆ ಎಂಬುದನ್ನು ಕಂಡುರುವ ಹೊಸಕೋಟೆ ಮಾಜಿ ಶಾಸಕ ಎಂಟಿಬಿ ನಾಗರಾಜ್ ಕಾನೂನಿನಲ್ಲಿರೋ ಅವಕಾಶಗಳನ್ನು ಹುಡುಕುತ್ತಿದ್ದಾರೆ ಎನ್ನಲಾಗಿದೆ. ನಿವೃತ್ತ ನ್ಯಾಯಮೂರ್ತಿಗಳೊಬ್ಬರಿಂದ ಮಾಹಿತಿ ಪಡೆದಿದ್ದು, ಉಪಚುನಾವಣೆಯಲ್ಲಿ ಸೋತ ಶಾಸಕರಿಂದ ಹೊಸ ಲೆಕ್ಕಾಚಾರ ಶುರುವಾಗಿದೆ. ಈಗಾಗಲೇ ಸಚಿವ ಸಂಪುಟ ಸ್ಥಾನದ ಮೇಲೆ ಆಸೆ ಬಿಟ್ಟಿರೋ ಎಂಟಿಬಿ, ಬಿಡಿಎ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣು ಹಾಕಿದ್ದಾರೆ ಎನ್ನಲಾಗ್ತಿದೆ. ಮತ್ತೊಂದೆಡೆ ಹಳ್ಳಿ ಹಕ್ಕಿ ವಿಶ್ವನಾಥ್ ಸಹ ಕಾನೂನು ನಿಪುಣರ ಮೊರೆ ಹೋಗಿದ್ದು, ದಾಖಲೆ ಸಹಿತ ಸಿಎಂ ಯಡಿಯೂರಪ್ಪರ ಮೇಲೆ ಒತ್ತಡ ತಂದು ಅಧಿಕಾರ ಪಡೆಯಲು ಪ್ಲಾನ್ ಮಾಡಲಾಗ್ತಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಸಂಪಟ ರಚನೆಗೆ ನಾನಾ ಕಷ್ಟಗಳಿಗೆ ಒಳಾಗಾಗಿರೋ ಸಿಎಂ, ಮುಂದೆ ಈ ಸಮಸ್ಯೆಯನ್ನು ಹೇಗೆ ನಿಭಾಯಿಸ್ತರಾರೋ ಕಾದು ನೋಡಬೇಕಿದೆ.
Karnataka PUC Result : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಉಡುಪಿ ಜಿಲ್ಲೆ ಪ್ರಥಮ
ಕರ್ನಾಟಕದ ದ್ವಿತೀಯ ಪಿಯುಸಿ (PUC) ಫಲಿತಾಂಶ 2025 ಇಂದು ಪ್ರಕಟವಾಗಿದೆ. ಈ ಬಾರಿ ಉಡುಪಿ ಜಿಲ್ಲೆ ಶೇ. 93.90 ಫಲಿತಾಂಶದೊಂದಿಗೆ ಪ್ರಥಮ ಸ್ಥಾನವನ್ನು ಪಡೆದಿದೆ. ಒಟ್ಟು ಫಲಿತಾಂಶ:....