“ಯಥಾ ರಾಜ ತಥಾ ಪ್ರಜಾ ಎಂಬಂತಾಗಿದೆ ಕಾಂಗ್ರೆಸ್”
ಬೆಂಗಳೂರು : ವಿಧಾನ ಪರಿಷತ್ ನಲ್ಲಿ ನಡೆದ ಭಾರಿ ಹೈಡ್ರಾಮದ ಕುರಿತು ಸಚಿವ ಡಾ.ಕೆ.ಸುಧಾಕರ್ ಪ್ರತಿಕ್ರಿಯೆ ನೀಡಿದ್ದು, `ಯಥಾ ರಾಜ ತಥಾ ಪ್ರಜಾ’ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಅವರು, ಚಿಂತಕರ ಚಾವಡಿ ಎಂದು ಕರೆಸಿಕೊಳ್ಳುವ ಸದನದ ಮೇಲ್ಮನೆಯಲ್ಲಿ ಇಂದು ನಡೆದ ಘಟನೆ ಅತ್ಯಂತ ದುರದೃಷ್ಟಕರವಾಗಿದ್ದು ಇದನ್ನು ತೀವ್ರವಾಗಿ ಖಂಡಿಸುತ್ತೇನೆ.
ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಭಾಷಣ ಮಾಡುವ, ಇತರರಿಗೆ ಪಾಠ ಹೇಳುವ ಕಾಂಗ್ರೆಸ್ ಪಕ್ಷದ ನಾಯಕರ ನೈಜ ಬಣ್ಣ ಇಂದು ಬಯಲಾಗಿದೆ.
ಇದನ್ನೂ ಓದಿ : ಸಹೋದ್ಯೋಗಿಗಳ ಸ್ನಾನದ ಧೃಶ್ಯ ಸೆರೆ.. ಪ್ರಿಯಕರನಿಗೆ ರವಾನೆ… ಕಾರಣವೇ ವಿಚಿತ್ರ…!
`ಯಥಾ ರಾಜ ತಥಾ ಪ್ರಜಾ’ ಎಂಬಂತೆ, ಕೆಪಿಸಿಸಿಗೆ ನೂತನ ಅಧ್ಯಕ್ಷರು ನೇಮಕಗೊಂಡಾಗಿನಿಂದ ಕಾಂಗ್ರೆಸ್ ಪಕ್ಷದವರ ನಡವಳಿಕೆ ಹಾಗೂ ನೈತಿಕತೆ ಪಾತಾಳಕ್ಕೆ ಕುಸಿದಿದೆ.
ರಾಜ್ಯದ ಜನರು ಸಜ್ಜನಿಕೆಗೆ ಹೆಸರಾಗಿದ್ದು, ಈ ರೀತಿಯ ಅಸಭ್ಯ ನಡವಳಿಕೆಯನ್ನು ಎಂದೂ ಕ್ಷಮಿಸುವುದಿಲ್ಲ ಎಂದು ಸಚಿವರು ಹೇಳಿದ್ದಾರೆ.
2017 ರಲ್ಲಿ ಅಂದಿನ ವಿಧಾನಪರಿಷತ್?ನ ಸಭಾಪತಿಗಳಾಗಿದ್ದ ಡಿ.ಎಚ್.ಶಂಕರಮೂರ್ತಿ ಅವರ ವಿರುದ್ಧ ಕಾಂಗ್ರೆಸ್ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಿದಾಗ, ಚರ್ಚೆಗೆ ಅವಕಾಶ ನೀಡಿದ್ದರು.
ಅಲ್ಲದೇ, ಸಭಾಪತಿ ಪೀಠದಲ್ಲಿ ಅವರು ಕೂರದೇ ಉಪ ಸಭಾಪತಿ ಮೂಲಕ ಕಲಾಪ ನಡೆಸಲಾಗಿತ್ತು. ತಮ್ಮ ವಿರುದ್ಧ ಬಂದ ಎಲ್ಲ ಆರೋಪಗಳಿಗೂ ಶಂಕರಮೂರ್ತಿಯವರು ಉತ್ತರ ನೀಡಿದ್ದರು. ಇದನ್ನು ನೆನಪಿಸಿಕೊಳ್ಳಬೇಕು ಎಂದು ಸುಧಾಕರ್ ಟೀಕಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel