ಕಲಬುರಗಿ: ಕಳೆದ ತಿಂಗಳು ವಿಧಾನ ಪರಿಷತ್ತಿನಲ್ಲಿ ಗದ್ದಲ ವಿಚಾರಕ್ಕೆ ಸಂಬಂಧಿಸಿದಂತೆ ಸಭಾಪತಿ ಆದೇಶಿಸಿರುವ ತನಿಖೆ ಅಧಿಕಾರಿಗಳ ಕರ್ತವ್ಯ ಲೋಪಕ್ಕೆ ಮಾತ್ರ ಸೀಮಿತವಾಗಿದೆ ಎಂದು ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಸಚಿವರು, ಗದ್ದಲ ಬಗ್ಗೆ ಪರಿಷತ್ ಸದಸ್ಯರ ನಡವಳಿಕೆಗಳ ಬಗ್ಗೆ ತನಿಖೆಗೆ ಸಭಾಪತಿ ಆದೇಶ ನೀಡಿಲ್ಲ. ಈ ರೀತಿಯ ಗದ್ದಲ, ಗಲಾಟೆ ಯಾರೂ ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ.

ಸಭಾಪತಿ ಪ್ರತಾಪಚಂದ್ರ ಶೆಟ್ಟಿ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿ 14 ದಿನ ಕಳೆದಿತ್ತು. ಹೀಗಾಗಿ ಅವರಾಗಿಯೇ ಸಭಾಪತಿ ಕುರ್ಚಿ ಬಿಟ್ಟು ಕೊಡುತ್ತಾರೆ ಎನ್ನುವ ವಿಶ್ವಾಸ ಇತ್ತು. ಸದನ ಆರಂಭಕ್ಕೆ ಹಾಕಿದ್ದ ಬೆಲ್ ಆದ ಐದಾರು ಮಿನಿಮಿಷದ ನಂತರವೂ ಸಭಾಪತಿ ಬಾರದಿರುವ ಕಾರಣ ಉಪಸಭಾಪತಿಯವರನ್ನು ಕೂರಿಸಲಾಯಿತು. ಇದಾದ ನಂತರ ಅನಿರೀಕ್ಷಿತ ರೀತಿಯಲ್ಲಿ ಗಲಾಟೆ ಗದ್ದಲ ನಡೆಯಿತು. ಇದು ಪೂರ್ವನಿಯೋಜಿತ ಅಲ್ಲ. ಪ್ಲಾನ್ ಮಾಡಿ ಮಾಡುವ ಅನಿವಾರ್ಯತೆ ನಮಗೆ ಇರಲಿಲ್ಲ. ಅವಿಶ್ವಾಸ ನಿರ್ಣಯ ಮಂಡಿಸಿದ ಮೇಲೆ ಸಭಾಪತಿಗಳು ಗೌರವಯುತವಾಗಿ ನಡೆದುಕೊಳ್ಳಬೇಕಿತ್ತು. ಅವಿಶ್ವಾಸ ನಿರ್ಣಯದ ಬಗ್ಗೆ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ನೀಡಬೇಕಿತ್ತು ಎಂದಿರುವ ಕಾನೂನು ಸಚಿವರು, ಈ ಕುರಿತು ನಡೆಯುತ್ತಿರುವ ತನಿಖೆ ಕೇವಲ ಅಧಿಕಾರಿಗಳ ಕರ್ತವ್ಯ ಲೋಪಕ್ಕೆ ಮಾತ್ರ ಸೀಮಿತವಾಗಿದೆ ಎಂದು ತಿಳಿಸಿದ್ದಾರೆ.

ಲೋಕಸಭೆ ಸ್ಪೀಕರ್ ಪತ್ರ ಬರೆದಿರುವುದು ಉಪಸಭಾಪತಿ ಧರ್ಮೆಗೌಡರ ಸಾವಿಒನ ಕುರಿತು ಉನ್ನತಮಟ್ಟದ ತನಿಖೆ ನಡೆಸಿ ಎಂಬ ಕುರಿತೇ ಹೊರತು ಪರಿಷತ್ ಗಲಾಟೆ ವಿಚಾರಕ್ಕಲ್ಲ ಎಂದ ಮಾಧುಸ್ವಾಮಿ, ವಿಲೀನದ ಹೆಸರಲ್ಲಿ ಜೆಡಿಎಸ್ ಇಬ್ಬಾಗ ಮಾಡಲು ಬಿಜೆಪಿ ತಂತ್ರ ನಡೆಸಿದೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಮಾಧುಸ್ವಾಮಿ, ಕುಮಾರಸ್ವಾಮಿ ಅವರೇ ವಿಧಾನ ಪರುಷತ್ತಿನಲ್ಲಿ ನಮಗೆ ಬೆಂಬಲಿಸಿದ್ದಾರಲ್ಲವೇ ಎಂದಷ್ಟೇ ಹೇಳಿ ಸುಮ್ಮನಾದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








