ADVERTISEMENT
Saturday, May 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಪರಿಷತ್ ನಲ್ಲಿ ಗದ್ದಲ : ಯಾರದ್ದು ತಪ್ಪು..? ಯಾರದ್ದು ಸರಿ..?

Mahesh M Dhandu by Mahesh M Dhandu
December 15, 2020
in Newsbeat, Politics, ರಾಜಕೀಯ
couclil
Share on FacebookShare on TwitterShare on WhatsappShare on Telegram

ಪರಿಷತ್ ನಲ್ಲಿ ಗದ್ದಲ : ಯಾರದ್ದು ತಪ್ಪು..? ಯಾರದ್ದು ಸರಿ..?

ಬೆಂಗಳೂರು : ದೇಶದ ಮುಂದೆ ರಾಜ್ಯದ ಮರ್ಯಾದೆಯನ್ನು ಬುದ್ಧಿವಂತರ ಸದನ ಎನಿಸಿಕೊಂಡಿರುವ ವಿಧಾನಪರಿಷತ್ ಸದಸ್ಯರು ಹರಾಜು ಹಾಕಿದ್ದಾರೆ. ಇತಿಹಾಸದಲ್ಲೇ ಮೊದಲ ಬಾರಿಗೆ ಪರಿಷತ್ ನಲ್ಲಿ ಸದಸ್ಯರು ಪರಸ್ಪರ ಕಿತ್ತಾಡಿದ್ದಾರೆ.

Related posts

ಎಸ್‌ಎಸ್‌ಎಲ್‌ಸಿ ಹಿಂದಿ ಪರೀಕ್ಷೆ: ಗ್ರೇಡ್ ಪದ್ಧತಿ ಕೈಬಿಟ್ಟು ಅಂಕ ನೀಡಲು ತೀರ್ಮಾನ – ಸಚಿವ ಮಧು ಬಂಗಾರಪ್ಪ ಅಧಿಕೃತ ಘೋಷಣೆ

ಪರೀಕ್ಷಾ ವ್ಯವಸ್ಥೆ ಹಾಳು ಮಾಡಿದ BJP: ಮಧು ಬಂಗಾರಪ್ಪ ವಾಗ್ದಾಳಿ

May 16, 2026
ಕಿಂಗ್ ಫಿಶರ್ ಮತ್ತು ಬ್ಲ್ಯಾಕ್ ಲೇಬಲ್ ಇನ್ನು ಅಗ್ಗ ರಾಜ್ಯದಲ್ಲಿ ಜಾರಿಯಾದ ಹೊಸ ಅಬಕಾರಿ ನೀತಿ

ಕಿಂಗ್ ಫಿಶರ್ ಮತ್ತು ಬ್ಲ್ಯಾಕ್ ಲೇಬಲ್ ಇನ್ನು ಅಗ್ಗ ರಾಜ್ಯದಲ್ಲಿ ಜಾರಿಯಾದ ಹೊಸ ಅಬಕಾರಿ ನೀತಿ

May 16, 2026

ಇದಲ್ಲದೇ ಈ ಘಟನೆಗೂ ಮುನ್ನ ಅನಿರ್ದಿಷ್ಟಾವಧಿಗೆ ಮುಂದೂಡಿದ್ದ ಕಲಾಪವನ್ನು ಇದೇ ಮೊದಲ ಬಾರಿಗೆ ಮತ್ತೆ ನಡೆಸುವ ಮೂಲಕ ರಾಜ್ಯ ವಿಧಾನ ಪರಿಷತ್ ಇತಿಹಾಸ ಸೃಷ್ಠಿಸುವ ಜೊತೆಗೆ ಕಪ್ಪು ಚುಕ್ಕೆಯನ್ನು ಅಂಟಿಸಿಕೊಂಡಿದೆ.

ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡಿಸಿತ್ತು. ಇದನ್ನ ಸಭಾಪತಿಗಳು ತಿರಸ್ಕರಿಸಿದ್ದರು. ಇದು ಬಿಜೆಪಿಗರನ್ನು ಕೆರಳಿಸಿತ್ತು.

ಈ ಮಧ್ಯೆ ಇಂದು ಬಿಜೆಪಿಯ ಅವಿಶ್ವಾಸ ನಿರ್ಣಯಕ್ಕೆ ಜೆಡಿಎಸ್ ಬೆಂಬಲ ಸೂಚಿಸಿತ್ತು. ಇದರ ಪರಿಣಾಮ ಸಭಾಪತಿ ಸ್ಥಾನಕ್ಕೆ ಪ್ರತಾಪ್ ಚಂದ್ರ ಶೆಟ್ಟಿ ರಾಜೀನಾಮೆ ನೀಡದೇ ಇದ್ದರೂ ಸಭಾಪತಿ ಸ್ಥಾನಕ್ಕೆ ಬಿಜೆಪಿ ಧರ್ಮೇಗೌಡರನ್ನು ಕೂರಿಸಿತ್ತು.

ಇದರಿಂದ ರೊಚ್ಚಿಗೆದ್ದ ಕಾಂಗ್ರೆಸ್ ಸದಸ್ಯರು ಸಭಾಪತಿ ಸ್ಥಾನದಿಂದ ಧರ್ಮೇಗೌಡರನ್ನು ಕೆಳಗಿಸಲು ಮುಂದಾಗಿ ದೊಡ್ಡ ಹೈಡ್ರಾಮವೇ ನಡೆಯಿತು.

ಸಭಾಪತಿ ಕುರ್ಚಿಗಾಗಿ ಫೈಟ್ ತಾರಕ್ಕೇರುತ್ತಿರುದ್ದಂತೆ ಮತ್ತೊಮ್ಮೆ ಅನಿರ್ಧಿಷ್ಟಾವಧಿಗೆ ಕಲಾಪವನ್ನು ಮುಂದೂಡಿಕೆ ಮಾಡಲಾಯಿತು.

legislative council

ಯಾರದ್ದು ಸರಿ..? ಯಾರದ್ದು ತಪ್ಪು..?
ಸಾಮಾನ್ಯವಾಗಿ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯದ ಮೇಲೆ ಅರ್ಜಿ ಸಲ್ಲಿಸಿದರೇ ಕಲಾಪ ಆರಂಭಿಸುವುದು ಸಭಾಪತಿಗಳೇ ಆಗಿದ್ದಾರೆ. ಕಲಾಪ ಆರಂಭವಾಗುತ್ತಿದ್ದಂತೆ ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿದೆ. ಹೀಗಾಗಿ ಕಲಾಪ ಮುಂದುವರೆಸುವಂತೆ ಉಪಸಭಾಪತಿಗಳನ್ನು ಕರೆದು ಸ್ಪೀಕರ್ ಸ್ಥಾನ ಅಲಂಕರಿಸುವಂತೆ ಸಭಾಪತಿಗಳು ಸೂಚಿಸಲಾಗುತ್ತದೆ. ಆನಂತರ ಉಪಸಭಾಪತಿಗಳು ಕಲಾಪವನ್ನು ಮುನ್ನಡೆಸುವುದು ನಿಯಮ. ಆದ್ರೆ ಇಂದು ಆಗಿದ್ದೇ ಬೇರೆ ವಿಧಾನಪರಿಷತ್ ಕಲಾಪ ಆರಂಭಕ್ಕೂ ಮುನ್ನ ಬೆಲ್ ಹಾಕಲಾಗಿತ್ತು.

ಸದನ ಆರಂಭವಾಗುತ್ತದೆ ಎಂಬ ಕಾರಣಕ್ಕೆ ಎಲ್ಲಾ ಪಕ್ಷಗಳ ಸದಸ್ಯರು ಬಂದು ತಮ್ಮ ಆಸನಗಳಲ್ಲಿ ಕುಳಿತಿದ್ದರು. ಉಪಸಭಾಪತಿ ಧರ್ಮೇಗೌಡ ಕೂಡ ತಮ್ಮ ಸ್ಥಾನದಲ್ಲಿ ಕುಳಿತಿದ್ದರು. ಆದರೆ, ಬೆಲ್ ನಿಲ್ಲುವ ಮೊದಲೇ, ಮಾರ್ಷಲ್‍ಗಳು ಬಂದು ಸಭಾಪತಿಗಳು ಬರುತ್ತಾರೆಂದು ಹೇಳುವ ಮೊದಲೇ ಬಿಜೆಪಿ ಸದಸ್ಯರು ಸಭಾಪತಿ ಬರುವ ಬಾಗಿಲು ಬಂದ್ ಮಾಡಿ, ಸಭಾಪತಿ ಸ್ಥಾನಕ್ಕೆ ಉಪಸಭಾಪತಿ ಧರ್ಮೇಗೌಡರನ್ನು ತಂದು ಕೂರಿಸಿದರು. ಜತೆಗೆ ಸಭಾಪತಿ ಕೊಠಡಿಯಿಂದ ಪ್ರತಾಪ್ ಚಂದ್ರ ಶೆಟ್ಟಿ ಸದನ ಪ್ರವೇಶಿಸದಂತೆಯೂ ಬಿಜೆಪಿ ಸದಸ್ಯರು ಬಾಗಿಲು ಬಂದ್ ಮಾಡಿ ತಡೆದಿದ್ದರು. ಇಲ್ಲಿ ಬೆಲ್ ಹೊಡೆಯುವ ಸಮಯದಲ್ಲಿ ಉಪ ಸಭಾಪತಿ ಧರ್ಮೇಗೌಡ ಪೀಠಕ್ಕೆ ಬಂದ ಕುಳಿತದ್ದು ನಿಯಮವಲ್ಲ, ಇದು ಉಪಸಭಾಪತಿ ಮಾಡಿದ ತಪ್ಪು..

ಇದನ್ನೂ ಓದಿ : ವಿಧಾನ ಪರಿಷತ್ ನಲ್ಲಿ ಗದ್ದಲ : ತನಿಖೆಗೆ ತೇಜಸ್ವಿನಿ ಗೌಡ ಆಗ್ರಹ

ಬಿಜೆಪಿ ಸದಸ್ಯರು ಸಭಾಪತಿ ಬರುವ ಬಾಗಿಲನ್ನು ಮುಚ್ಚಿದ್ದರು. ಇದು ನಿಯಮಬಾಹಿರವಾಗಿದೆ.
ಇನ್ನು ಮುಚ್ಚಿದ ಬಾಗಿಲನ್ನು ತೆರೆಯುವ ಮತ್ತು ಮುಚ್ಚುವ ಕೆಲಸವನ್ನು ಮಾರ್ಷಲ್ ಗಳು ಮಾಡಬೇಕು. ಆದ್ರೆ ಬಾಗಿಲು ಮುಚ್ಚಿದ್ದಾರೆ ಎಂದು ಕಾಂಗ್ರೆಸ್ ಸದಸ್ಯರು ಬಾಗಿಲನ್ನು ಕಾಲಿನಲ್ಲಿ ಒದ್ದಿದ್ದು ಕೂಡ ತಪ್ಪು.

ಸಭಾಪತಿಗಳ ಸೂಚನೆಗೂ ಮುನ್ನ ಪೀಠದ ಮೇಲೆ ಕುಳಿತ ಉಪಸಭಾಪತಿಯನ್ನು ಎಬ್ಬಿಸುವ ಅಧಿಕಾರ ಮಾರ್ಷಲ್ ಗಳಿಗೆ ಮಾತ್ರ ಇದೆ. ಮಾರ್ಷಲ್ ಗಳು ಸಭಾಪತಿಯ ಸೂಚನೆ ಮೇರೆಗೆ ಇದನ್ನ ಮಾಡಬೇಕು. ಆದ್ರೆ ಕಾಂಗ್ರೆಸ್ ನ ಸದಸ್ಯರು ಯಾವುದೇ ಅನುಮತಿ ಸೂಚನೆ ಇಲ್ಲದೇ ಪೀಠದ ಮೇಲಿದ್ದ ಉಪಸಭಾಪತಿಗಳನ್ನು ಎಳೆದಾಡಿದ್ದು ನಿಯಮ ಬಾಹಿರವಾಗಿದೆ.

ಉಪಸಭಾಪತಿಗಳನ್ನು ಎಳೆದಾಡಿದ್ದೂ ಅಲ್ಲದೇ ಪೀಠದಿಂದ ಅವರನ್ನು ಎಬ್ಬಿಸಿ ಚಂದ್ರಶೇಖರ್ ಪಾಟೀಲ್ ಅವರನ್ನು ಕೂರಿಸಿದ ಕಾಂಗ್ರೆಸ್ ಸದಸ್ಯರ ನಡೆಯೂ ತಪ್ಪು.

ಇನ್ನ ಅತೀ ಮುಖ್ಯವಾಗಿ ಸಭಾಪತಿಗಳ ಪೀಠಕ್ಕೆ ತನ್ನದೇಯಾದ ಘನತೆ, ಗೌರವ, ಇತಿಹಾಸ ಇದೆ. ಅಂತಹ ಪೀಠದ ಮುಂದೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸದಸ್ಯರು ನಡೆದುಕೊಂಡ ರೀತಿ ಪೀಠಕ್ಕೆ ಮಾಡಿದ ಅವಮಾನ ಎಂಬ‌ ಮಾತುಗಳನ್ನು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: BJPCongresslegislative council
ShareTweetSendShare
Join us on:

Related Posts

ಎಸ್‌ಎಸ್‌ಎಲ್‌ಸಿ ಹಿಂದಿ ಪರೀಕ್ಷೆ: ಗ್ರೇಡ್ ಪದ್ಧತಿ ಕೈಬಿಟ್ಟು ಅಂಕ ನೀಡಲು ತೀರ್ಮಾನ – ಸಚಿವ ಮಧು ಬಂಗಾರಪ್ಪ ಅಧಿಕೃತ ಘೋಷಣೆ

ಪರೀಕ್ಷಾ ವ್ಯವಸ್ಥೆ ಹಾಳು ಮಾಡಿದ BJP: ಮಧು ಬಂಗಾರಪ್ಪ ವಾಗ್ದಾಳಿ

by Shwetha
May 16, 2026
0

ಮಧು ಬಂಗಾರಪ್ಪ ಅವರು BJP ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಹಿಜಾಬ್ ವಿಚಾರವನ್ನು ಮುಂದಿಟ್ಟುಕೊಂಡು ಅನಗತ್ಯ ಗಲಾಟೆ ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ ಪಾರದರ್ಶಕ ಹಾಗೂ...

ಕಿಂಗ್ ಫಿಶರ್ ಮತ್ತು ಬ್ಲ್ಯಾಕ್ ಲೇಬಲ್ ಇನ್ನು ಅಗ್ಗ ರಾಜ್ಯದಲ್ಲಿ ಜಾರಿಯಾದ ಹೊಸ ಅಬಕಾರಿ ನೀತಿ

ಕಿಂಗ್ ಫಿಶರ್ ಮತ್ತು ಬ್ಲ್ಯಾಕ್ ಲೇಬಲ್ ಇನ್ನು ಅಗ್ಗ ರಾಜ್ಯದಲ್ಲಿ ಜಾರಿಯಾದ ಹೊಸ ಅಬಕಾರಿ ನೀತಿ

by Shwetha
May 16, 2026
0

ರಾಜ್ಯದ ಮದ್ಯಪ್ರಿಯರಿಗೆ ಕರ್ನಾಟಕ ಅಬಕಾರಿ ಇಲಾಖೆಯು ಅತ್ಯಂತ ಪ್ರಮುಖ ಸುದ್ದಿಯೊಂದನ್ನು ನೀಡಿದೆ. ರಾಜ್ಯದಲ್ಲಿ ನೂತನ ಅಬಕಾರಿ ನೀತಿಯು ಜಾರಿಗೆ ಬಂದಿದ್ದು ಇದರ ಪರಿಣಾಮವಾಗಿ ಮದ್ಯದ ಮಾರುಕಟ್ಟೆಯಲ್ಲಿ ದೊಡ್ಡ...

ಐಐಟಿ–ಎನ್‌ಐಟಿ ವಿದ್ಯಾರ್ಥಿಗಳಿಗೆ ಶಾಕ್..! ಒರಾಕಲ್ ಕ್ಯಾಂಪಸ್ ಆಫರ್‌ ರದ್ದು

ಐಐಟಿ–ಎನ್‌ಐಟಿ ವಿದ್ಯಾರ್ಥಿಗಳಿಗೆ ಶಾಕ್..! ಒರಾಕಲ್ ಕ್ಯಾಂಪಸ್ ಆಫರ್‌ ರದ್ದು

by Shwetha
May 16, 2026
0

ಅಮೆರಿಕ ಮೂಲದ ಟೆಕ್ ದಿಗ್ಗಜ ಒರಾಕಲ್ ಕಾರ್ಪೊರೇಷನ್ ಸಂಸ್ಥೆ ಮತ್ತೊಮ್ಮೆ ದೊಡ್ಡ ಸುದ್ದಿಗೆ ಕಾರಣವಾಗಿದೆ. ಇತ್ತೀಚೆಗಷ್ಟೇ 30,000ಕ್ಕೂ ಅಧಿಕ ಉದ್ಯೋಗಿಗಳನ್ನು ಲೇಆಫ್ ಮಾಡಿದ್ದ ಕಂಪನಿ, ಇದೀಗ ಭಾರತದ...

ದಳಪತಿ ಮನೆಗೆ ಜಿಟಿಡಿ ದಿಢೀರ್ ಭೇಟಿ: ಕೈ ಸೇರ್ಪಡೆ ವದಂತಿಗೆ ಬ್ರೇಕ್ ಹಾಕಿದ ಚಾಮುಂಡೇಶ್ವರಿ ಹುಲಿ!

ದಳಪತಿ ಮನೆಗೆ ಜಿಟಿಡಿ ದಿಢೀರ್ ಭೇಟಿ: ಕೈ ಸೇರ್ಪಡೆ ವದಂತಿಗೆ ಬ್ರೇಕ್ ಹಾಕಿದ ಚಾಮುಂಡೇಶ್ವರಿ ಹುಲಿ!

by Shwetha
May 16, 2026
0

ಬೆಂಗಳೂರು: ಕಳೆದ ಹಲವು ದಿನಗಳಿಂದ ಜೆಡಿಎಸ್ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದು, ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿಗಳಿಗೆ ಗುರಿಯಾಗಿದ್ದ ಹಿರಿಯ ನಾಯಕ ಜಿ.ಟಿ.ದೇವೇಗೌಡ ಅವರು ನಿನ್ನೆ ಮಹತ್ವದ...

ಯೋಗಿ ದಾರಿಯಲ್ಲಿ ಸುವೆಂದು ಅಧಿಕಾರಿ : ಅಕ್ರಮ ಅತಿಕ್ರಮಣಕಾರರ ಎಡೆಮುರಿ ಕಟ್ಟಲು ಸನ್ನದ್ಧವಾದ ಬುಲ್ಡೋಜರ್ ಪಡೆ

ಯೋಗಿ ದಾರಿಯಲ್ಲಿ ಸುವೆಂದು ಅಧಿಕಾರಿ : ಅಕ್ರಮ ಅತಿಕ್ರಮಣಕಾರರ ಎಡೆಮುರಿ ಕಟ್ಟಲು ಸನ್ನದ್ಧವಾದ ಬುಲ್ಡೋಜರ್ ಪಡೆ

by Shwetha
May 16, 2026
0

ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದು ಆರಂಭವಾಗಿದೆ. ದಶಕಗಳ ಕಾಲ ಆಡಳಿತ ನಡೆಸಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ಪತನಗೊಂಡಿದ್ದು, ಬಿಜೆಪಿ ಐತಿಹಾಸಿಕ ಜಯಭೇರಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram