ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಬೆಟ್ಟದಲ್ಲಿ ಕಳೆದ ಒಂದು ತಿಂಗಳಿನಿಂದ ಚಿರತೆ ಹಾವಳಿ ಹೆಚ್ಚಾಗಿರುವ ಹಿನ್ನೆಲೆ ಆ ಭಾಗದ ಜನರನ್ನು ನಿದ್ದೆಗೆಡುವಂತೆ ಮಾಡಿದೆ.
ಆನೆಗೊಂದಿ ಭಾಗದಲ್ಲಿ ಜನರು ಹೊರಗಡೆ ಓಡಾಡುವಾಗ ಒಬ್ಬರೇ ಹೋಗಬೇಡಿ, ಗುಂಪಾಗಿ ಇರಿ. ಚಿರತೆಗಳಿಂದ ಆತ್ಮರಕ್ಷಣೆಗೆ ಸಾಧ್ಯವಾದಷ್ಟು ಆಯುಧಗಳ ಜೊತೆಗೆ ಓಡಾಟ ಮಾಡಿ ಎಂದು ಕೊಪ್ಪಳ ಜಿಲ್ಲಾಧಿಕಾರಿ ವಿಕಾಶ್ ಕಿಶೋರ್ ಸುರಾಳ್ಕರ್ ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.
ಯಾವುದೇ ಕಾರಣಕ್ಕೂ ಜನರು ಒಂಟಿಯಾಗಿ ಮತ್ತು ಅನಗತ್ಯವಾಗಿ ಓಡಾಡಬಾರದು. ಹಾಗೊಂದು ಸಂದರ್ಭ ಎದುರಾದರೆ ಆಯುಧಗಳ ಜತೆಗೆ ಓಡಾಡಿ. ಈ ಒಂದು ಉಪಾಯ ಬಿಟ್ಟರೆ ಸದ್ಯಕ್ಕೆ ಜಿಲ್ಲಾಡಳಿತದ ಹತ್ತಿರ ಯಾವುದೇ ಉಪಾಯಗಳು ಇಲ್ಲ ಎಂದು ವಿಕಾಶ್ ಕಿಶೋರ್ ಸುರಾಳ್ಕರ್ ಹೇಳಿದ್ದಾರೆ.
ಈ ಸಮಸ್ಯೆ ಇತ್ಯರ್ಥ ಆಗುವವರೆಗೆ ಸದ್ಯಕ್ಕೆ ಒಂಟಿಯಾಗಿ ಓಡಾಡಬೇಡಿ. ಸಾಧ್ಯವಾದಷ್ಟು ಆಯುಧಗಳ ಜೊತೆಗೆ ಓಡಾಟ ಮಾಡಿ. ಸ್ವಲ್ಪ ದಿನದ ಮಟ್ಟಿಗೆ ಬೆಟ್ಟದ ಪರಿಸರದಲ್ಲಿರುವ ಎಲ್ಲಾ ದೇಗುಲಗಳಿಗೆ ಭಕ್ತರ ಪ್ರವೇಶ ನಿಬರ್ಂಧಿಸುವಂತೆ ಗಂಗಾವತಿಯ ತಹಶೀಲ್ದಾರ್ ರೇಣುಕಾ ಅವರಿಗೆ ಜಿಲ್ಲಾಧಿಕಾರಿಗಳು ಸೂಚನೆ ಕೊಟ್ಟಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel