ಬೆಂಗಳೂರು : ಇಂದು ಕಾರ್ಮಿಕರ ದಿನಾಚರಣೆ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಟ್ವೀಟ್ ಮಾಡಿ, ಶುಭಾಶಯ ತಿಳಿಸಿದ್ದಾರೆ.
ಕೊರೊನಾದಿಂದ ದೇಶದ ಕಾರ್ಮಿಕರು ಕಂಗಾಲಾಗಿದ್ದಾರೆ. ಕೆಲಸವಲ್ಲದೆ, ಹಣವಿಲ್ಲದೆ, ಅನೇಕ ಕಾರ್ಮಿಕರು ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವ ಪರಿಸ್ಥಿತಿ ಬಂದಿದೆ. ಇಂತಹ ಕೆಟ್ಟ ಪರಿಸ್ಥಿತಿ ಆದಷ್ಟು ಬೇಗ ದೂರಗಲಿ ಎಂದು ಕುಮಾರಸ್ವಾಮಿ ಟ್ವಿಟ್ಟರ್ ಮೂಲಕ ಪ್ರಾರ್ಥನೆ ಮಾಡಿದ್ದಾರೆ.
”ಕೊರೊನಾ ಗಂಡಾಂತರಕಾರಿ ಪರಿಸ್ಥಿತಿಯಲ್ಲಿ ಕಾರ್ಮಿಕ ಬಂಧುಗಳ ಮೊಗದಲ್ಲಿ ನಗೆ ಮಾಸಿರುವುದು ವಾಸ್ತವ ಸತ್ಯ. ಕಂಡರಿಯದ ಈ ವಿಪತ್ತಿನ ಕಾಲವನ್ನು ಗೆದ್ದು ಬರುವ ದೃಢಸಂಕಲ್ಪ ಕಾರ್ಮಿಕರಲ್ಲಿ ಮನೆ ಮಾಡಲಿ.”
ಸೋತಿರುವ ದುಡಿಯುವ ಕೈಗಳಿಗೆ ಹೊಸ ಚೈತನ್ಯ ಬರಲಿ. ಒಳ್ಳೆಯ ದಿನಗಳ ನಿರೀಕ್ಷೆಯಲ್ಲಿ ಈ ಬಾರಿಯ ಕಾರ್ಮಿಕ ದಿನಾಚರಣೆ ಎದುರುಗೊಳ್ಳೋಣ. ಕಾರ್ಮಿಕರ ಭವಿಷ್ಯದ ಆತಂಕ ದೂರವಾಗಲಿ. ಎಲ್ಲರಿಗೂ ಕಾರ್ಮಿಕ ದಿನಾಚರಣೆಯ ಶುಭಾಶಯಗಳು.
2/2— H D Kumaraswamy (@hd_kumaraswamy) May 1, 2020
”ಸೋತಿರುವ ದುಡಿಯುವ ಕೈಗಳಿಗೆ ಹೊಸ ಚೈತನ್ಯ ಬರಲಿ. ಒಳ್ಳೆಯ ದಿನಗಳ ನಿರೀಕ್ಷೆಯಲ್ಲಿ ಈ ಬಾರಿಯ ಕಾರ್ಮಿಕ ದಿನಾಚರಣೆ ಎದುರುಗೊಳ್ಳೋಣ. ಕಾರ್ಮಿಕರ ಭವಿಷ್ಯದ ಆತಂಕ ದೂರವಾಗಲಿ. ಎಲ್ಲರಿಗೂ ಕಾರ್ಮಿಕ ದಿನಾಚರಣೆಯ ಶುಭಾಶಯಗಳು ” ಎಂದು ಕುಮಾರಸ್ವಾಮಿ ಶುಭ ಹಾರೈಸಿದ್ದಾರೆ.