ಕ್ರಿಸ್ತರ ಉದಾತ್ತ ಸಂದೇಶಗಳನ್ನು ಸ್ಮರಿಸೋಣ : ಮೋದಿ Modi saaksha tv
ನವದೆಹಲಿ : ಇಂದು ಕ್ರಿಸ್ ಮನ್ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಶುಭಕೋರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ನರೇಂದ್ರ ಮೋದಿ, ಎಲ್ಲರಿಗೂ ಕ್ರಿಸ್‌ಮಸ್ ಶುಭಾಶಯಗಳು!
ಏಸು ಕ್ರಿಸ್ತರ ಜೀವನ, ಉದಾತ್ತ ಸಂದೇಶಗಳನ್ನು ನಾವು ನೆನೆಯೋಣ.
ಸೇವೆ, ದಯೆ, ನಮ್ರತೆಯನ್ನು ಯೇಸು ಕ್ರಿಸ್ತರ ಸಂದೇಶಗಳು ಪ್ರತಿಪಾದಿಸಿವೆ.
ಎಲ್ಲರೂ ಆರೋಗ್ಯ, ಸಾಮರಸ್ಯದಿಂದಿರಿ ಎಂದು ಪ್ರಾರ್ಥಿಸಿದ್ದಾರೆ.
ಇನ್ನು ಎಲ್ಲರಿಗೂ ಕ್ರಿಸ್‌ಮಸ್ ಶುಭಾಶಯಗಳು. ಎಲ್ಲ ಆರೋಗ್ಯ, ಸಂತೋಷ ಮತ್ತು ಸಾಮರಸ್ಯವನ್ನು ಬಯಸುತ್ತೇನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.









