ಮೈಸೂರು : ಟಿಪ್ಪುಸುಲ್ತಾನ್ ಸ್ವತಂತ್ರ ಹೊರಾಟಗಾರ, ಈ ನೆಲದ ಮಗ ಎಂಬ ವಿಶ್ವನಾಥ್ ಹೇಳಿಕೆ ಬಿಜೆಪಿಗೆ ಬಿಸಿತುಪ್ಪವಾಗಿದೆ. ಹಳ್ಳಿಹಕ್ಕಿಗೆ ಹೇಳಿಕೆ ಪಕ್ಷಕ್ಕೆ ಮುಜುಗರ ಉಂಟು ಮಾಡಿದೆ. ಏತನ್ಮಧ್ಯೆ ವಿಶ್ವನಾಥ್ ಹೇಳಿಕೆ ಬಗ್ಗೆ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿ, ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಜ್ಞಾನ ಹೊಂದಿದ್ದೇನೆ ಎನ್ನುವವರು ಕನಿಷ್ಠ ಜ್ಞಾನ ಇಟ್ಟುಕೊಂಡು ಮಾತನಾಡಬೇಕು ಎಂದು ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವನಾಥ್ ಅವರು ಬಿಜೆಪಿ ಸೇರಿದ್ದಾರೆ ಆದರೆ ಅವರಿಗಿನ್ನು ಪೂರ್ವಾಶ್ರಮದ ಪ್ರಭಾವ ಇನ್ನೂ ಕಡಿಮೆಯಾದಂತಿಲ್ಲ. ಸಾಹಿತ್ಯ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ಕಾಲಿರಿಸಿದ್ದಾರೆ. ಹಾಗಾಗಿ ಮೈಸೂರಿನ ಇತಿಹಾಸವನ್ನು ಸರಿಯಾಗಿ ತಿಳಿದುಕೊಂಡು ಮಾತನಾಡಬೇಕು. ಮೈಸೂರಿನ ಯದು ವಂಶವನ್ನು ನಿರ್ನಾಮ ಮಾಡಲು ಹೊರಟವರು ಯಾರು, ಕನ್ನಡ ಭಾಷೆ ಮೇಲೆ ಪ್ರಹಾರ ನಡೆಸಿದ್ದು ಟಿಪ್ಪು. ಹಾಗಾಗಿ ಟಿಪ್ಪುವನ್ನು ವೀರ, ಶೂರ ಎಂದು ಹೇಳಲಾಗದು. ಟಿಪ್ಪು ಸತ್ತಾಗ ಸ್ವಾತಂತ್ರ್ಯ ಹೋರಾಟವೇ ಶುರುವಾಗಿರಲಿಲ್ಲ ಎಂದು ತಿರುಗೇಟು ನೀಡಿದರು. ಹಾಗೇ ವಿಶ್ವನಾಥ್ ಮುಂದಾದರು ಕನಿಷ್ಠ ಜ್ಞಾನ ಇಟ್ಟುಕೊಂಡು ಮಾತನಾಡಲಿ ಎಂದು ಸಂಸದ ಪ್ರತಾಪ್ ಸ್ವೀಟ್ ವಾರ್ನಿಂಗ್ ನೀಡಿದ್ದಾರೆ.