ಲೆಟ್ಸ್ ಸೆಲೆಬ್ರೇಟ್ ಸಿನಿಮಾ… ಮತ್ತೆ ಶುರುವಾಗಲಿದೆ ಹಂಗಾಮಾ..2021
ಮತ್ತೆ ಶುರುವಾಗಲಿದೆ ಸಿನಿಮಾ ಹಂಗಾಮಾ
ಥಿಯೇಟರ್ ಮುಂದೆ ಟಪ್ಪಾಂಗುಚಿ ಡ್ಯಾನ್ಸ್… ಬೆಳ್ಲಿ ಪರದೆ ಮುಂದೆ ಶಿಳ್ಳೆ ಚಪ್ಪಾಳೆ ಸೌಂಡ್ಸ್
ಬಾಕ್ಸ್ ಆಫೀಸ್ ಲೆಕ್ಕಾಚಾರ… ದಾಖಲೆಗಳ ಗುಣಾಕಾರ..
2020 ಕೊನೆಯಾಗಿ ಇಂದಿನಿಂದ ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ. ಹೊಸ ಹುರುಪು, ಹೊಸ ಆಶಯ, ಹೊಸ ಹುಮ್ಮಸ್ಸು , ಆಕಾಂಕ್ಷೆಗಳೊಂದಿಗೆ ಹೊಸತನದೊಂದಿಗೆ ವರ್ಷ ಆರಂಭಿಸಿದ್ದೇವೆ. ಈ ವರ್ಷ ಸಿನಿಮಾರಂಗದ ಪಾಲಿಗೂ ಸಿಹಿಮಯವಾಗಿರಲಿದೆ ಎಂಬ ಆಶಯವಿದೆ. ಕಳೆದ ವರ್ಷ ಅಂದ್ರೆ 2020 ರ ವರ್ಷ ಇಡೀ ವಿಶ್ವದ ಹಾಗೂ ವಿಶೇಷವಾಗಿ ಸಿನಿಮಾರಂಗದ ಪಾಲಿಗೆ ಅತ್ಯಂತ ಕರಾಳ ವರ್ಷವೇ ಆಗಿತ್ತು. 8-9 ತಿಂಗಳುಗಳ ಕಾಲ ಥಿಯೇಟರ್ ಗಳು ಬಂದ್ ಆಗಿದ್ದವು. ಲಾಕ್ ಡೌನ್ ಬಳಿಕ ಅಕ್ಟೋಬರ್ 15 ರ ಬಳಿಕ ಥಿಯೇಟರ್ ಗಳ ಪುನರಾಂಭಕ್ಕೆ ಅನುಮತಿ ಸಿಕ್ಕಿದೆಯಾದ್ರೂ ಪೂರ್ಣ ಪ್ರಮಾಣದ ಸೀಟಿಂಗ್ ಅನುಮತಿ ನೀಡಿಲ್ಲ. ಹೀಗಾಗಿ ಯಾವುದೇ ಹೊಸ ಸಿನಿಮಾಗಳನ್ನ ರಿಲೀಸ್ ಮಾಡಲು ನಿರ್ಮಾಪಕರು ಮುಂದಾಗಲಿಲ್ಲ. ಆದ್ರೆ ಇಂದ್ರಿಂದ ಡಿಜಿಟಲ್ ಮೀಡಿಯಾಗೆ ಲಾಭವಾಯ್ತು. ಥಿಯೇಟರ್ ಗಳ ಬದಲಾಗಿ ಅನೇಕ ಹೊಸ ಸಿನಿಮಾಗಳನ್ನ ಒಟಿಟಿಯಲ್ಲಿ ರಿಲಿಸ್ ಮಾಡಲಾಯ್ತು.
ಒಟಿಟಿ
ಹೊಸ ಹೊಸ ಸಿನಿಮಾಗಳು ಒಟಿಟಿಯಲ್ಲಿ ರಿಲೀಸ್ ಆಗಿ ಉತ್ತಮ ರೆಸ್ಪಾನ್ಸ್ ಪಡೆದುಕೊಂಡವು. ‘ ಲಾ’ ಇರಬಹುದು, ‘ಫ್ರೆಂಚ್ ಬಿರಿಯಾನಿ’ , ‘ಭೀಮಸೇನ ನಳಮಹರಾಜ’ ಸಿನಿಮಾಗಳು ಸಖತ್ ಹಿಟ್ ಆದ್ವು. ಒಟಿಟಿ ಥಿಯೇಟರ್ ಗಳು ಎರೆಡರಲ್ಲೂ ಸಖತ್ ಸೌಂಡ್ ಮಾಡಿದ ಸಿನಿಮಾಗಳೆಂದ್ರೆ ಅದು ‘ದಿಯಾ’, ಲವ್ ಮಾಕ್ಟೇಲ್.
2020 ರಲ್ಲಿ ಅಂತ್ಯಗೊಂಡ ಕನ್ನಡ ಸಿನಿತಾರೆಯರ ಬದುಕು : ಕಲಾವಿಧರಿಗೆ ಗೌರವ ನಮನ..!
ಥಿಯೇಟರ್
ಇನ್ನೂ ಲಾಕ್ ಡೌನ್ ಬಳಿಕ ಥಿಯೇಟರ್ ಗಳಲ್ಲಿ ಹೊಸ ಸಿನಿಮಾಗಳು ರಿಲೀಸ್ ಆಗಿ ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿವೆ. ಅದ್ರಲ್ಲಿ ಆಕ್ಟ್ 1978 ಸಹ ಒಂದು. ಈ ಚಿತ್ರ ಸಮಾಜ, ಕಾನೂನು, ಸರ್ಕಾರ , ಪ್ರಜಾಪ್ರಭುತ್ವ ಕಾನೂನು ವ್ಯವಸ್ಥೆಯ ಸುತ್ತಲಿನ ಕಥೆಯಾಗಿದ್ದು ಇನ್ನೂವರೆಗೂ ಯಶಸ್ವಿಯಾಗಿ ಪ್ರದರ್ಶನ ಕಾಣ್ತಿದೆ. ಲಾಕ್ ಡೌನ್ ಬಳಿಕ ರಿಲೀಸ್ ಆದ ಮೊದಲ ಹೊಸ ಸಿನಿಮಾ ಕೂಡ ಹೌದು. ಇದರ ಹೊರತಾಗಿ ಪುರ್ ಸೋತ್ ರಾಮ, ಅರಿಷೆಡ್ವರ್ಗ, ನಾನೊಂಥರ, ಹೀಗೆ ಹಲವು ಸಿನಿಮಾಗಳು ರಿಲೀಸ್ ಆಗಿ ಪ್ರೇಕ್ಷಕರನ್ನ ರಂಜಿಸುತ್ತಿದೆ.
ಆದ್ರೆ ಸ್ಟಾರ್ ನಟರ ಯಾವುದೇ ಸಿನಿಮಾಗಳು ರಿಲೀಸ್ ಆಗದೇ ಇರೋದು ಸಿನಿಪ್ರಿಯರ ಬೇಸರಕ್ಕೆ ಕಾರಣವಾಗಿದೆ. ಸಿನಿಮಾಮಂದಿರಗಳಲ್ಲಿ 100 ಪರ್ಸೆಂಟ್ ಸೀಟಿಂಗ್ ಗೆ ಅನುಮತಿ ಸಿಗೋವರೆಗೂ ಸಿನಿಮಾಗಳನ್ನ ರಿಲೀಸ್ ಮಾಡದೇ ಇರಲು ನಿರ್ಮಾಪಕರು ಗಟ್ಟಿ ನಿರ್ಧಾರ ಮಾಡಿರೋ ಹಾಗೆ ಕಾಣ್ತಿದೆ.
ಆದ್ರೆ 2021 ರಲ್ಲಿ ಸಾಲು ಸಾಲು ಸಿನಿಮಾಗಳು ಅಭಿಮಾನಿಗಳು ತೆರೆಗಪ್ಪಳಿಸೋದ್ರಲ್ಲಿ ನೋ ಡೌಟ್.. ಇನ್ನೂ ಸಿನಿಮಾ ನಿರ್ಮಾಕರ ಸಂಘದ ಮನವಿಗೆ ಸರ್ಕಾರ ಸ್ಪಂದಿಸಿ 100 ಪರ್ಸೆಂಟ್ ಸೀಟಿಂಗ್ ವ್ಯವಸ್ಥೆಗೆ ಅನುಮತಿ ನೀಡಬುದು ಎನ್ನಲಾಗ್ತಿದೆ. ಹೀಗಾಗಿ ಕಳೆದ ವರ್ಷ ಸಿನಿಮಾಗಳಿಲ್ಲದೆ, ಪ್ರೇಕ್ಷಕರ ಕಿರುಚಾಟವಿಲ್ಲದೆ ಬಿಕೋ ಎನ್ನುತ್ತಿದ್ದ ಥಿಯೇಟರ್ ಗಳು ಇದೀಗ ಮತ್ತೆ ರಂಗು ಪಡೆಯಲಿವೆ. ಮತ್ತೊಮ್ಮೆ ಥಿಯೇಟರ್ ಗಳಲ್ಲಿ ಸ್ಟಾರ್ ಗಳ ಅಬ್ಬರ, ಅಭಿಮಾನಿಗಳ ಆರ್ಭಟ, ಚಪ್ಪಾಳೆಗಳ ಸುರಿಮಳೆ, ಪ್ರತಿ ಡೌಲಾಗ್ ಗಳಿಗೆ, ಸ್ಟಾರ್ ಗಳ ಮಾಸ್ ಎಂಟ್ರಿಗೆ ನಾನ್ ಸ್ಟಾಪ್ ಶಿಳ್ಳೆಗಳು ಇವೆಲ್ಲಾ ಕೇಳಿಬರಲಿವೆ.
ಹಾಗಾದ್ರೆ 2021 ರಲ್ಲಿ ಯಾವೆಲ್ಲಾ ಸಿನಿಮಾಗಳು ರಿಲೀಸ್ ಆಗುತ್ವೆ ಗೊತ್ತಾ.. ಬಹುನಿರೀಕ್ಷೆಯ ಸ್ಟಾರ್ ನಟರ ಸಿನಿಮಾಗಳು ಯಾವೆಲ್ಲಾ ತೆರೆಗಪ್ಪಳಿಸಲಿವೆ..
ಪೊಗರು : ಹೈ ವೋಲ್ಟೇಜ್ ಸಿನಿಮಾವಾದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ ಸಂಕ್ರಾಂತಿ ಗೆ ರಿಲೀಸ್ ಆಗಬಹುದು ಎನ್ನಲಾಗ್ತಿದೆ.
2020 ರಲ್ಲಿ ಅಂತ್ಯಗೊಂಡ ಬಾಲಿವುಡ್ ಸಿನಿತಾರೆಯರ ಬದುಕು : ಕಲಾವಿಧರಿಗೆ ಗೌರವ ನಮನ..!
ರಾಬರ್ಟ್ : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ತೆರಕಾಣಲಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ರೆ ಕ್ರಿಸ್ ಮಸ್ ಗೆ ಸಿನಿಮಾ ರಿಲೀಸ್ ಆಗಬೇಕಿತ್ತು. ಕಾರಣಾಂತರಗಳಿಂದ ಸಿನಿಮಾ ರಿಲೀಸ್ ಡೇಟ್ ಪೋಸ್ಟ್ ಪೋನ್ ಆಗಿದೆ.
ಪ್ಯಾಂಟಮ್ : ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷೆಯ ಪ್ಯಾಂಟಮ್ ಸಹ ಇದೇ ವರ್ಷ ರಿಲೀಸ್ ಆಗಲಿದೆ. ಈಗ ಕಡೆಯ ಹಂತದ ಶೂಟಿಂಗ್ ನಲ್ಲಿ ಸಿನಿಮಾತಂಡ ಬ್ಯುಸಿಯಾಗಿದೆ.
ಕೋಟಿಗೊಬ್ಬ 3: ಇನ್ನೂ ಈಗಾಗಲೇ ಶೂಟಿಂಗ್ ಕಂಪ್ಲೀಟ್ ಆಗಿದ್ದು, ರಿಲೀಸ್ ಗೆ ರೆಡಿಯಾಗಿದೆ.
KGF -2 : ಬಾರತೀಯ ಸಿನಿಮಾರಂಗವೇ ಜಾತಕ ಪಕ್ಷಿಗಳಂತೆ ಕಾದು ಕುಳಿತಿರುವ ಸಿನಿಮಾ ಅಂದ್ರೆ ಅದು ರಾಕಿಂಗ್ ಸ್ಟಾರ್ ಯಶ್ ಅಭಿನಯದ KGF ಚಾಪ್ಟರ್ 2. ಈ ಚಿತ್ರದ ಶೂಟಿಂಗ್ ಈಗಾಗಲೇ ಕಂಪ್ಲೀಟ್ ಆಗಿದ್ದು, ಶೀಘ್ರವೇ ರಿಲೀಸ್ ಡೇಟ್ ಅನೌನ್ಸ್ ಆಗಲಿದೆ.
ಯುವರತ್ನ : ಇನ್ನೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಭಿನಯದ ಬಹುನಿರೀಕ್ಷೆಯ ಸಿನಿಮಾವಾಗಿರೋ ಯುವರತ್ನ ಇದೇ ವರ್ಷವೇ ರಿಲೀಸ್ ಆಗಲಿದೆ.
2020 ರಲ್ಲಿ ಅಂತ್ಯಗೊಂಡ ತೆಲುಗು ಸಿನಿತಾರೆಯರ ಬದುಕು: ಕಲಾವಿಧರಿಗೆ ಗೌರವ ನಮನ..!
ಜೇಮ್ಸ್ : ಇನ್ನೂ ಯುವರತ್ನ ಶೂಟಿಂಗ್ ನಂತರ ಸದ್ಯ ಜೇಮ್ಸ್ ಶೂಟಿಂಗ್ ನಲ್ಲಿ ಅಪ್ಪು ಬ್ಯುಸಿಯಾಗಿದ್ದಾರೆ. ಈ ಸಿನಿಮಾವೂ ಸಹ ಬಹುತೇಕ ಇದೇ ವರ್ಷವೇ ರಿಲೀಸ್ ಆಗಲಿದೆ ಎನ್ನಲಾಗಿದೆ.
ಸಲಗ : ಇನ್ನೂ ಮತ್ತೊಂದು ಬಹುನಿರೀಕ್ಷೆಯ ಸಿನಿಮಾವೆಂದ್ರೆ ಅದು ಬ್ಲಾಕ್ ಕೋಬ್ರಾ ದುನಿಯಾ ವಿಜಿ ನಟನೆಯ ಸಲಗ ಸಿನಿಮಾ.
ಭಜರಂಗಿ – 2 : ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಬಹುನಿರೀಕ್ಷೆಯ ಸಿನಿಮಾ ಭಜರಂಗಿ -2
ಗಾಳಿಪಟ -2 : ಗೋಲ್ಡನ್ ಸ್ಟಾರ್ ಗಣೇಶ್ , ದಿಗಂತ್ ನಟನೆಯ ಗಾಳಿಪಟ -2
ಮದಗಜ : ರೋರಿಂಗ್ ಸ್ಟಾರ್ ಶ್ರೀಮುರುಳಿ ನಟನೆಯ ಆಕ್ಷನ್ ಹಿಟ್ ಮಾಸ್ ಸಿನಿಮಾ ಮದಗಜ ಸಹ ಇದೇ ವರ್ಷವೇ ಪ್ರೇಕ್ಷಕರ ಮುಂದೆ ಬರಲಿದೆ. ಇನ್ನೂ ಸಾಲು ಸಾಲು ಸಿನಿಮಾಗಳು ಈ ವರ್ಷ ರಿಲೀಸ್ ಆಗಿ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಲಿವೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel