ಚೆನ್ನೈ : ಕೊರೊನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾನ ಸಾಮ್ರಾಟ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರು ಶೀಘ್ರ ಗುಣಮುಖರಾಗಲಿ ಎಂದು ಸೋಶಿಯಲ್ ಮೀಡಿಯಾದಲ್ಲಿ #LetsPrayForSPB ಎಂಬ ಅಭಿಯಾನ ಶುರುವಾಗಿದ್ದು, ಸಿನಿ ತಾರೆಯರೂ ಸೇರಿದಂತೆ ಎಲ್ಲ ವರ್ಗದವರು ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಕೊರೊನಾ ಸೋಂಕು ಹಾಗೂ ಶ್ವಾಸಕೋಶ ತೊಂದರೆಯಿಂದ ಗಂಭೀರ ಸ್ಥಿತಿಗೆ ತಲುಪಿರುವ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಇದೀಗ ಅಂತರಾಷ್ಟ್ರೀಯ ವೈದ್ಯರ ತಂಡದಿಂದ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.
ಕಳೆದ ಕೆಲ ದಿನಗಳಿಂದ ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡುಬರುತ್ತಿಲ್ಲ. ಈ ಹಿನ್ನಲೆಯಲ್ಲಿ ನಿನ್ನೆ ರಾತ್ರಿ ಅಂತರಾಷ್ಟ್ರೀಯ ವೈದ್ಯರ ತಂಡವನ್ನು ಕರೆಸಲಾಗಿದ್ದು, ಇಂದಿನಿಂದ ಈ ವೈದ್ಯರ ತಂಡ ಎಸ್.ಪಿ.ಬಿ.ಗೆ ಚಿಕಿತ್ಸೆ ನೀಡಲಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.