LG ಕಂಪನಿಯಿಂದ ವಿಶ್ವಾದ್ಯಂತೆ ಸ್ಮಾರ್ಟ್ ಫೋನ್ ಗಳ ವ್ಯವಹಾರ ಬಂದ್ …!
ಜನಪ್ರಿಯ ಮೊಬೈಲ್ ಕಂಪನಿಯಾಗಿರುವ LG ಎಲೆಕ್ಟ್ರಾನಿಕ್ಸ್ ತನ್ನ ಸ್ಮಾರ್ಟ್‌ಫೋನ್ ವ್ಯವಹಾರವನ್ನು ವಿಶ್ವದಾದ್ಯಂತ ಬಂದ್ ಮಾಡುವುಎದಕ್ಕೆ ಮುಂದಾಗಿದೆ. ಭಾರೀ ನಷ್ಟದಿಂದಾಗಿ ಸ್ಮಾರ್ಟ್ ಫೋನ್ ಉತ್ಪಾದನೆಯನ್ನು ನಿಲ್ಲಿಸುವುದಾಗಿ ದಕ್ಷಿಣ ಕೊರಿಯಾದ ಎಲೆಕ್ಟ್ರಾನಿಕ್ಸ್ ದೈತ್ಯ ಎಲ್ ಜಿ ಕಂಪನಿ ನಿರ್ಧರಿಸಿದೆ.
ತೀವ್ರ ಮಾರುಕಟ್ಟೆ ಸ್ಪರ್ಧೆ ಮತ್ತು ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳ ಆಗಮನದಿಂದಾಗಿ ಎಲ್ ಜಿ ಮಾರುಕಟ್ಟೆ ನಿಧಾನವಾಗಿದೆ. ಕಳೆದ 6 ವರ್ಷಗಳಲ್ಲಿ ಇದು 4.5 ಬಿಲಿಯನ್ ಡಾಲರ್ ನಷ್ಟವನ್ನು ಅನುಭವಿಸಿದೆ. ಇದರಿಂದಾಗಿ ಈ ನಿರ್ಧಾರವನ್ನ ಕಂಪನಿ ತೆಗೆದುಕೊಂಡಿದೆ.
ಎಲೆಕ್ಟ್ರಿಕ್ ವಾಹನಗಳ ಬಿಡಿಭಾಗ, ಗೃಹಪಯೋಗಿ ವಸ್ತುಗಳು ಹಾಗೂ ರೊಬೋಟಿಕ್ಸ್ ವಲಯ ಸೇರಿದಂತೆ ಇನ್ನಿತರ ಕಡೆಗಳಲ್ಲಿ ನಾವು ಗಣನೀಯ ಸಾಧನೆ ಮಾಡಿದ್ದು ಇನ್ನು ಮುಂದೆ ನಮ್ಮ ನೂತನ ಪ್ರಯೋಗಗಳು ಅಲ್ಲಿಯೇ ನಡೆಯಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.