ಮೊಬೈಲ್ ವ್ಯವಹಾರಕ್ಕೆ ಎಲ್ ಜಿ ಗುಡ್ ಬೈ : ಎಲ್ ಜಿ ಬಳಕೆದಾರರು ಓದಲೇಬೇಕಾದ ಸುದ್ದಿ
ನವದೆಹಲಿ : ದಕ್ಷಿಣ ಕೊರಿಯಾದ ಎಲೆಕ್ಟ್ರಾನಿಕ್ಸ್ ದೈತ್ಯ ಎಲ್ ಜಿ ಸಂಚಲನ ನಿರ್ಧಾರ ತೆಗೆದುಕೊಂಡಿದೆ.
ಮೊಬೈಲ್ ಫೋನ್ ವ್ಯವಹಾರವನ್ನು ಕೊನೆಗೊಳಿಸಲು ಎಲ್ ಜಿ ನಿರ್ಧರಿಸಿದೆ. ದೊಡ್ಡ ನಷ್ಟದಿಂದಾಗಿ ಸ್ಮಾರ್ಟ್ ಫೋನ್ ಉತ್ಪನ್ನ ಮಾರಾಟವನ್ನು ಕೊನೆಗೊಳಿಸುವುದಾಗಿ ಹೇಳಿದೆ.
ಸುಮಾರು ಆರು ವರ್ಷಗಳಿಂದ ತೀವ್ರ ನಷ್ಟದಿಂದ ತತ್ತರಿಸಿರುವ ಎಲ್ ಜಿ, ತನ್ನ ಫೋನ್ ವ್ಯವಹಾರವನ್ನು ಜರ್ಮನ್ ವೋಕ್ಸ್‍ವ್ಯಾಗನ್ ಎಜಿ ಮತ್ತು ವಿಯೆಟ್ನಾಮೀಸ್ ಕಂಪನಿ ವಿಂಗ್‍ಗ್ರೂಪ್ ಜೆಎಸ್‍ಸಿ ಸೇರಿದಂತೆ ಎರಡು ದೊಡ್ಡ ಕಂಪನಿಗಳಿಗೆ ಮಾರಾಟ ಮಾಡುವ ಪ್ಲಾನ್ ವಿಫಲವಾದ ಕಾರಣ, ಈ ನಿರ್ಧಾರವನ್ನ ತೆಗೆದುಕೊಂಡಿದೆ.
ಎಲ್ ಜಿ, ಅಲ್ಟ್ರಾ-ವೈಡ್ ಆಂಗಲ್ ಕ್ಯಾಮೆರಾಗಳು ಸೇರಿದಂತೆ ಹಲವಾರು ಸೆಲ್ ಫೋನ್ ಆವಿಷ್ಕಾರಗಳೊಂದಿಗೆ ಮಾರುಕಟ್ಟೆಗೆ ನುಗ್ಗಿತ್ತು. 2013 ರಲ್ಲಿ, ಆಪಲ್ ಸ್ಯಾಮ್ಸಂಗ್ ನಂತರ ವಿಶ್ವದ ಮೂರನೇ ಅತಿದೊಡ್ಡ ಸ್ಮಾಟ್ರ್ಫೋನ್ ತಯಾರಿಸುವ ಕಂಪನಿಯಾಗಿತ್ತು. ಆದರೆ ನಂತರ, ತೀವ್ರ ಸ್ಪರ್ಧೆಯ ಜೊತೆಗೆ, ಎಲ್ ಜಿ ಕಳೆದ ಆರು ವರ್ಷಗಳಲ್ಲಿ ಸುಮಾರು 4.5 ಬಿಲಿಯನ್ (32,856 ಕೋಟಿ ರೂ.) ನಷ್ಟ ಅನುಭವಿಸಿದೆ. ಈ ಕಾರಣಕ್ಕಾಗಿ, ಕಂಪನಿಯು ಮೊಬೈಲ್ ವ್ಯವಹಾರವನ್ನು ಬಿಡಲು ನಿರ್ಧರಿಸಿದೆ.
