ಬೆಂಗಳೂರು : ಬಿಜೆಪಿ (BJP) ಸರ್ಕಾರದ ಅವಧಿಯಲ್ಲಿ ಕನಸಿನ ಕೂಸು ಇಂದಿರಾ ಕ್ಯಾಂಟೀನ್ ಗೆ ಈಗ ಮತ್ತೆ ಕಳೆ ಬಂದಿದೆ. ಫೈವ್ ಸ್ಟಾರ್ ಹೋಟೆಲ್ ಇಂದಿರಾ ಕ್ಯಾಂಟಿನ್ (Indira Canteen) ಈಗ ಲಕ ಲಕ ಎನ್ನುತ್ತಿದೆ.
ಕಾಂಗ್ರೆಸ್ ಸರ್ಕಾರ (Congress Government) ಬಂದ ನಂತರ ಇಂದಿರಾ ಕ್ಯಾಂಟಿನ್ ನತ್ತ ಮತ್ತೆ ಜನರು ಬರುತ್ತಿದ್ದಾರೆ. ಬಿಜೆಪಿ (BJP) ಅವಧಿಯಲ್ಲಿ ದುಡ್ಡು ಬಿಡುಗಡೆಯಾಗದೆ ನಿರ್ವಹಣೆ ಸಮಸ್ಯೆಯಿಂದ ಇಂದಿರಾ ಕ್ಯಾಂಟಿನ್ ಅವಸಾನದತ್ತ ಹೋಗಿತ್ತು. ಈಗ 198 ವಾರ್ಡ್ ನಲ್ಲಿಯೂ ಇಂದಿರಾ ಕ್ಯಾಂಟಿನ್ ಗೆ ಮತ್ತೆ ಜೀವ ಬರಲಿದೆ.
ಒಂದು ತಿಂಗಳೊಳಗೆ ಹೊಸ ಟೆಂಡರ್ ಇಂದಿರಾ ಕ್ಯಾಂಟಿನ್ ರೀ ಒಪನ್ ಆಗಲಿದೆ. ಈ ಬಾರಿ ಕಳೆದ ಬಾರಿಗಿಂತಲೂ ವೆರೈಟಿ ವೆರೈಟಿ ಫುಡ್ (Indira Canteen Food) ಮೆನು ಇರಲಿದೆ. ಪೌಷ್ಟಿಕಾಂಶವುಳ್ಳ ತಿಂಡಿ ಕೊಡುವಂತೆ ಸೂಚನೆ ನೀಡಲಾಗಿದೆ. ಐದು ರೂಪಾಯಿಂದ ಹತ್ತು ರೂಪಾಯಿಗೆ ದರ ಏರಿಕೆ ಮಾಡಲಾಗುತ್ತಿದ್ದು, ತಿಂಡಿ ಕ್ವಾಂಟಿಟಿ ಜಾಸ್ತಿ ಇರಲಿದೆ. ಬೆಂಗಳೂರಿನಲ್ಲಿ 120-130 ಕ್ಯಾಂಟಿನ್ ಗಳು ಸುಸ್ಥಿತಿಯಲ್ಲಿದೆ. ಆದರೆ ಅಡುಗೆ ಮನೆಗೆ ಹೊಸ ಸಾಮಾಗ್ರಿಗಳು ಬೇಕು ಎನ್ನಲಾಗುತ್ತಿದೆ.