ಆಸ್ಟ್ರೇಲಿಯಾ ಸಂಸತ್ ಗೆ ತ್ರಿವರ್ಣ ಧ್ವಜದ ದೀಪಾಲಂಕಾರ – ಜೈಶಂಕರ್ ಗೆ ಭವ್ಯ ಸ್ವಾಗತ…
ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಕೇಂದ್ರ ವಿದೇಶಾಂಗ ವ್ಯವಹಾರ ಸಚಿವ ಡಾ. ಎಸ್. ಜೈಶಂಕರ್ ಕ್ಯಾನ್ಬೆರಾದಲ್ಲಿ ಭವ್ಯ ಸ್ವಾಗತ ನೀಡಲಾಗಿದೆ.
ಆಸ್ಟ್ರೇಲಿಯಾದ ಹಳೆಯ ಸಂಸತ್ ಭವನಕ್ಕೆ ತ್ರಿವರ್ಣ ಧ್ವಜದ ದೀಪಾಲಂಕಾರ ಮಾಡಲಾಗಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಜೈಶಂಕರ್, ಆಸ್ಟ್ರೇಲಿಯಾದ ಹಳೆಯ ಸಂಸತ್ ಭವನವನ್ನು ತ್ರಿವರ್ಣ ಧ್ವಜವರ್ಣದಲ್ಲಿ ಅಲಂಕರಿಸಿರುವುದನ್ನು ನೋಡಿ ಅತೀವ ಸಂತಸವಾಯಿತು ಎಂದು ತಿಳಿಸಿದ್ದಾರೆ.
ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ವೆನಿಪಾಂಗ್ ಅವರೊಂದಿಗೆ ಸಭೆ ನಡೆಸಿದ ಜೈಶಂಕರ್ ಬಳಿಕ ಸಂಯುಕ್ತ ಸಂವಾದ ಸಮ್ಮೇಳನ ಉದ್ದೇಶಿಸಿ ಅವರು ರಷ್ಯಾದೊಂದಿಗಿನ ಭಾರತದ ಬಾಂಧವ್ಯದ ಕುರಿತು ವಿವರಿಸಿದರು.
ಹಲವು ದಶಕಗಳವರೆಗೆ ಪಾಶ್ಚಿಮಾತ್ಯ ರಾಷ್ಟ್ರಗಳು ಭಾರತಕ್ಕೆ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿರಲಿಲ್ಲ. ಆಗ ಸೋವಿಯತ್ ಒಕ್ಕೂಟ ಮತ್ತು ಈಗ ರಷ್ಯಾ ನಮಗೆ ನೆರವು ನೀಡಿ, ಭಾರತದ ಹಿತ ಕಾಪಾಡಿದೆ ಎಂದು ತಿಳಿಸಿದರು.
ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ ದ್ವಿಪಕ್ಷೀಯ ಬಾಂಧವ್ಯ ವರ್ಧನೆಯ ಕುರಿತಂತೆ ಸಂತಸ ವ್ಯಕ್ತಪಡಿಸಿದ ಅವರು, ಹಣಕಾಸು ವ್ಯವಸ್ಥೆ, ಶಿಕ್ಷಣ, ರಕ್ಷಣೆ, ಸುರಕ್ಷತೆ, ಶುದ್ಧ ಇಂಧನ ಸೇರಿದಂತೆ ಹಲವು ಸಹಯೋಗಗಳ ಪ್ರಸ್ತಾಪ ಮಾಡಿದರು. ಕ್ವಾಡ್ ವ್ಯವಸ್ಥೆ, ಮುಖ್ಯವಾಗಿ ಭಾರತ-ಫೆಸಿಫಿಕ್ ವಲಯಕ್ಕೆ ಕೇಂದ್ರೀಕೃತವಾಗಿದೆ ಎಂದು ತಿಳಿಸಿದರು.
Lighting of tricolor flag at Australian Parliament – grand welcome for Jaishankar…