ಚಂಡೀಗಢ: ಪಾಕ್ ಭಯೋತ್ಪಾದಕರೊಂದಿಗೆ ನಂಟು ಹೊಂದಿರುವ ಮೂವರನ್ನು ಬಂಧಿಸಲಾಗಿದೆ.
ಮೂವರನ್ನು ಪಂಜಾಬ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಐಎಸ್‌ಐ (ISI) ನಿಯಂತ್ರಿತ ಪಾಕ್ ಮೂಲದ ಭಯೋತ್ಪಾದಕ ಘಟಕದೊಂದಿಗೆ ಬಂಧಿತರು ನಂಟು ಹೊಂದಿದ್ದರು ಎನ್ನಲಾಗಿದೆ. ಸಂಗ್ರೂರ್ ಜೈಲಿನಲ್ಲಿದ್ದ ವ್ಯಕ್ತಿಗಳೊಂದಿಗೆ ಈ ಮೂವರು ಸಂಪರ್ಕದಲ್ಲಿದ್ದರು ಎಂದು ತಿಳಿದು ಬಂದಿದೆ. ಸದ್ಯ ಬಂಧಿತರಿಂದ 8 ಶಸ್ತ್ರಾಸ್ತ್ರಗಳು, 9 ಮ್ಯಾಗ್ಸಿನ್ಸ್, 30 ಲೈವ್ ಕಾರ್ಟ್ರಿಡ್ಜ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ತನಿಖೆ ನಡೆದಿದೆ.