Liquor purchase : ಮದ್ಯ ಖರೀದಿಗೆ ವಯಸ್ಸಿನ ಇಳಿಕೆ ಇಲ್ಲ: ಸಾರ್ವಜನಿಕರ ವಿರೋಧಕ್ಕೆ ಮಣಿದ ಸರ್ಕಾರ
ಮದ್ಯ ಖರೀದಿಗೆ ವಯಸ್ಸಿನ ಇಳಿಕೆ ಇಲ್ಲ
ಸಾರ್ವಜನಿಕರ ವಿರೋಧಕ್ಕೆ ಮಣಿದ ಸರ್ಕಾರ
ವಯೋಮಿತಿಯನ್ನು 18 ವರ್ಷಕ್ಕಿಳಿಸಲು ಕರಡು
ಮದ್ಯ ಖರೀದಿಗೆ 21 ವರ್ಷ ವಯಸ್ಸು ಅಗತ್ಯ
ಕರ್ನಾಟಕ ಅಬಕಾರಿ ಪರವಾನಿಗೆಗೆ ತಿದ್ದು ಪಡಿ ಇಲ್ಲ
ಸಾರ್ವಜನಿಕ ವಲಯದಿಂದ ಭಾರಿ ವಿರೋಧ ಕಂಡುಬಂದ ಕಾರಣ ಮದ್ಯ ಖರೀದಿ ವಯೋಮಿತಿ ಸಡಿಲಿಕೆ ಮಾಡದಿರಲು ಸರ್ಕಾರ ನಿರ್ಧರಿಸಿದೆ. ಮದ್ಯ ಕೊಂಡುಕೊಳ್ಳಲು ಇದ್ದ 21 ವರ್ಷದ ವಯಸ್ಸಿನ ಮಿತಿಯನ್ನು 18 ವರ್ಷಕ್ಕೆ ಇಳಿಸುವ ಕರ್ನಾಟಕ ಅಬಕಾರಿ ಪರವಾನಿಗೆಯ ಸಾಮಾನ್ಯ ಷರತ್ತು ತಿದ್ದುಪಡಿ ನಿಯಮ 2023ರ ಕರಡು ಅಧಿಸೂಚನೆಯನ್ನು ಹಿಂಪಡೆಯಲಾಗಿದೆ ಎಂದು ಅಬಕಾರಿ ಇಲಾಖೆ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
ಕರುಡು ನಿಯಮಗಳ ಬಗ್ಗೆ ಆಕ್ಷೇಪಣೆಗಳನ್ನ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲಾಗಿತ್ತು. ಸಾರ್ವಜನಿಕರು. ಸಂಘ ಸಂಸ್ಥೆಗಳು ಮತ್ತು ಮಾಧ್ಯಮಗಳಿಂದ ಆಕ್ಷೇಪಣೇಗಳು ಬಂದ ಹಿನ್ನಲೆಯಲ್ಲಿ ಸರ್ಕಾರ ಇವುಗಳನ್ನ ಪರಿಗಣಿಸಿ ನಿಯಮವನ್ನ ಬದಲಿಸದಿರಲು ತೀರ್ಮಾನಿಸಿದೆ.
Liquor purchase: No lowering of age for purchase of liquor: Govt bowed to public opposition








