ಕೆಎಸ್ಪಿಸಿಎಲ್ ನೀತಿ ವಿರೋಧಿಸಿ ಮೇ 19 ವರೆಗೆ ಮದ್ಯ ಮಾರಾಟಗಾರರ ಮುಷ್ಕರ
ಕೆಎಸ್ಪಿಸಿಎಲ್ ಹೊಸ ನೀತಿಯಿಂದ ಮದ್ಯ ಮಾರಾಟಗಾರರಿಗೆ ಸಮಸ್ಯೆ ಎದುರಾಗಿದೆ ಎಂಬ ಕಾರಣಕ್ಕೆ ಇಂದಿನಿಂದ ಮೇ 19ರವರೆಗೆ ಮದ್ಯ ಮಾರಾಟಗಾರರು ಮುಷ್ಕರಕ್ಕೆ ಕರೆ ನೀಡಿದ್ದಾರೆ.
ಕೆಎಸ್ಪಿಸಿಎಲ್ ಹೊಸ ನೀತಿಯಿಂದ ಮದ್ಯ ಖರೀದಿ ಮಾಡುವ ವ್ಯವಸ್ಥೆ ಬದಲಾಗಿರುವುದರಿಂದ ಸಣ್ಣ ಉದ್ದಿಮೆದಾರರಿಗೆ ತೊಂದರೆಯಾಗುತ್ತಿದೆ ಎಂದು ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟ ಆರೋಪ ಮಾಡಿದೆ.
ಕೆಎಸ್ಪಿಸಿಎಲ್ನಿಂದ ಮ್ಯಾನುವಲ್ ಮೆತಡ್ ಮೂಲಕ ಇಷ್ಟು ವರ್ಷ ವೈನ್ ಮರ್ಚೆಂಟ್ಸ್, ಬಾರ್ ಮಾಲೀಕರು ಖರೀದಿ ಮಾಡುತ್ತಿದ್ದರು. ಈಗ ವೆಬ್ಸೈಟ್ ಮೂಲಕ ಲಾಗಿನ್ ಆಗಿ ತಮಗೆ ಬೇಕಾದ ಮದ್ಯಗಳನ್ನು ಆಯ್ಕೆ ಮಾಡಿ, ಆನ್ಲೈನ್ ಮೂಲಕ ಹಣ ರವಾನೆ ಮಾಡಬೇಕು. ರಾತ್ರಿ 9 ರಿಂದ ಬೆಳಗ್ಗೆ 9 ಗಂಟೆಯವರೆಗೆ ಲಿಸ್ಟ್ ಫಿಲ್ ಮಾಡಿ, ಗೋದಾಮಿನಲ್ಲಿ ದಾಸ್ತಾನಿರುವ ಮದ್ಯಗಳನ್ನು ಮಾತ್ರ ಪಡೆದುಕೊಳ್ಳಬೇಕು. ಈ ನೂತನ ಪದ್ಧತಿ ಬಾರ್ ಮತ್ತು ವೈನ್ ವ್ಯಾಪಾರಿಗಳಿಗೆ ಆತಂಕ ಸೃಷ್ಟಿಸಿದೆ.
ಶ್ರೀಮಂತ ಬಾರ್ ಮಾಲೀಕರು ವೈನ್ ಶಾಪ್ ಮಾಲೀಕರು ಬೇಕಾದಷ್ಟು ಮದ್ಯವನ್ನು ಖರೀದಿ ಮಾಡುತ್ತಾರೆ. ಸಣ್ಣ ಉದ್ದಿಮೆದಾರರಿಗೆ ಇದರಿಂದ ಬಹಳ ಸಮಸ್ಯೆಯಾಗಿದೆ. ಗ್ರಾಹಕರಿಂದ ಬೇಡಿಕೆ ಇರುವ ಮದ್ಯ ಸಿಗುವುದಿಲ್ಲ. ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವ ಶೇ.80 ಜನಕ್ಕೆ ಕಳೆದ ಒಂದು ತಿಂಗಳಿನಿಂದ ಸಮಸ್ಯೆಯಾಗಿದೆ ಮದ್ಯ ಮಾರಾಟಗಾರರ ಆರೋಪ
ಈ ಸಮಸ್ಯೆ ಕುರಿತು ಮಾತನಾಡಿ ಬಗೆಹರಿಸಿಕೊಳ್ಳಲು ಕೆಎಸ್ಪಿಸಿಎಲ್ ಎಂಡಿ ತಯಾರಿಲ್ಲ. ಈ ಬಗ್ಗೆ ಸಭೆ ಮಾಡಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿರುವ ಆಯುಕ್ತರು ಒಂದು ತಿಂಗಳು ಕಳೆದರೂ ಸಭೆ ಮಾಡಲು ಮುಂದಾಗಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ..
ಒಂದೊಂದು ದಿನ ಒಂದೊಂದು ಜಿಲ್ಲೆಯಲ್ಲಿ ಮದ್ಯ ಮಾರಾಟಗಾರರು ಮುಷ್ಕರಕ್ಕ ಹಮ್ಮಿಕೊಳ್ಳಲು ಪ್ರತಿಭಟನೆಗೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಮುಷ್ಕರ ಎಲ್ಲೆಲ್ಲಿ? ಯಾವಾಗ?
ಮೇ 6 : ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ
ಮೇ 10 : ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಗದಗ, ಕೊಪ್ಪಳ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಹಾವೇರಿ
ಮೇ 12 : ಮೈಸೂರು, ಚಿಕ್ಕಮಗಳೂರು, ಹಾಸನ, ಮಂಡ್ಯ, ಮಂಗಳೂರು, ಕೊಡಗು, ಶಿವಮೊಗ್ಗ, ಉಡುಪಿ, ಉತ್ತರಕನ್ನಡ
ಮೇ 17 : ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ತುಮಕೂರು
ಮೇ 19 : ಬೆಂಗಳೂರು ನಗರ ವಿಭಾಗದ ಕೆಎಸ್ಬಿಸಿಎಲ್ ಡಿಪೋಗಳಲ್ಲಿ ಮದ್ಯ ಖರೀದಿ ಮಾಡದಿರಲು ಬಾರ್ ಮಾಲೀಕರ ಸಂಘ ನಿರ್ಧರಿಸಿದೆ.