LLC 2022 : ಇಂಡಿಯಾ ಮಹಾರಾಜಸ್ ನೊಂದಿಗೆ ಪಂದ್ಯ.. ಸನತ್ ಔಟ್.. ವಾಟ್ಸನ್ ಇನ್
ಲೆಜೆಂಡ್ಸ್ ಲೀಗ್ ಕ್ರಿಕೆಟ್ 2022 ರಲ್ಲಿ ಪ್ರತ್ಯೇಕವಾದ ಮ್ಯಾಚ್ ನಡೆಯಲಿದೆ. ಆಜಾದಿ ಕಿ ಅಮೃತ್ ಮಹೋತ್ಸವ್ ಭಾಗವಾಗಿ ಇಂಡಿಯಾ ಮಹಾರಾಜಸ್, ವರ್ಲ್ಡ್ ಜೈಯೆಂಟ್ಸ್ ನಡುವೆ ಒಂದು ಚಾರಿಟಿ ಮ್ಯಾಚ್ ನಡೆಯಲಿದೆ.
ಸೆಪ್ಟಂಬರ್ 16 ರಂದು ಈಡನ್ ಗಾರ್ಡನ್ ವೇದಿಕೆಯಾಗಿ ಈ ಮ್ಯಾಚ್ ನಡೆಯಲಿದೆ.
ಇದಕ್ಕಾಗಿ ಎರಡೂ ತಂಡಗಳನ್ನು ಮ್ಯಾನೇಜ್ ಮೆಂಟ್ ಪ್ರಕಟಿಸಿದೆ.
ಇಂಡಿಯಾ ಮಹಾರಾಜಸ್ ತಂಡಕ್ಕೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕ್ಯಾಪ್ಟನ್ ಆಗಿದದ್ದರೇ, ವರ್ಲ್ಡ್ ಜೈಯಂಟ್ಸ್ ಗೆ ಇಂಗ್ಲೆಂಡ್ ತಂಡದ ಮಾಜಿ ಕ್ಯಾಪ್ಟನ್ ಇಯಾನ್ ಮಾರ್ಗನ್ ಸಾರಥ್ಯ ವಹಿಸಲಿದ್ದಾರೆ.
ಆದ್ರೆ ವರ್ಲ್ಡ್ ಜೈಂಟ್ಸ್ ತಂಡದಲ್ಲಿ ಇದೀಗ ಎರಡು ಬದಲಾವಣೆಗಳು ನಡೆದಿವೆ. ಈ ಮ್ಯಾಚ್ ಗೆ ದಕ್ಷಿಣ ಆಫ್ರಿಕಾ ತಂಡದ ಮಾಜಿ ಆಟಗಾರ ಹರ್ಷಲ್ ಗಿಬ್ಸ್, ಶ್ರೀಲಂಕಾ ಕ್ರಿಕೆಟ್ ದಿಗ್ಗಜ ಸನತ್ ಜಯಸೂರ್ಯ ದೂರವಾಗಿದ್ದಾರೆ.

ಇವರಿಬ್ಬರ ಸ್ಥಾನದಲ್ಲಿ ನ್ಯೂಜಿಲೆಂಡ್ ಮಾಜಿ ನಾಯಕ ಡಾನಿಯಲ್ ವೆಟೋರಿ, ಆಸ್ಟ್ರೇಲಿಯಾ ತಂಡದ ಆಲ್ ರೌಂಡರ್ ಶೇನ್ ವಾಟ್ಸನ್ ತಂಡಕ್ಕೆ ಸೇರಿದ್ದಾರೆ.
ಲೆಜೆಂಡ್ಸ್ ಲೀಗ್ ಕ್ರಿಕೆಟ್ ಸೀಸನ್ 2 ರಲ್ಲಿ ಟೈಟಲ್ ಗೋಸ್ಕರ ನಾಲ್ಕು ತಂಡಗಳು ಮುಖಾಮುಖಿಯಾಗಲಿವೆ. ಇದರಲ್ಲಿ 15 ಮ್ಯಾಚ್ ಗಳು ಇರಲಿವೆ.
ಇಂಡಿಯಾ ಮಹಾರಾಜ್ಸ್ ತಂಡ
ಸೌರವ್ ಗಂಗೂಲಿ, ವೀರೇಂದ್ರ ಸೆಹ್ವಾಗ್, ಮೊಹ್ಮದ್ ಕೈಫ್, ಯೂಸೆಫ್ ಪಠಾಣ್, ಸುಬ್ರಹ್ಮಣ್ಯಂ ಬದ್ರಿನಾಥ್, ಇರ್ಫಾನ್ ಪಠಾಣ್, ಪಾರ್ಥಿವ್ ಪಟೇಲ್, ಸ್ಟುವರ್ಟ್ ಬಿನ್ನಿ, ಎಸ್ ಶ್ರೀಶಾಂತ್, ಹರ್ಭಜಾನ್ ಸಿಂಗ್, ನಮನ್ ಓಜಾ, ದಿಂಡಾ, ಪ್ರಜ್ಞಾನ್ ಓಜಾ, ಅಜಯ್ ಜಡೇಜಾ, ಆರ್ ಪಿ ಸಿಂಗ್, ಜೋಗಿಂದರ್ ಶರ್ಮಾ, ರಿತೇಂದರ್ ಸಿಂಗ್ ಸೌಥಿ.