ಅಕ್ರಮ ಸಂಬಂಧ ಶಂಕೆ- ತಲೆ ಮೇಲೆ ಕಲ್ಲು ಹಾಕಿ ಕೊಲೆ
ಕೋಲಾರ- ಅಕ್ರಮ ಸಂಬಂಧ ಹೊಂದಿದ್ದ ಎಂದು ಶಂಕಿಸಿ ವ್ಯಕ್ತಿಯನ್ನು ರಸ್ತೆಯಲ್ಲೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರದ ಮುಳಬಾಗಿಲು ನಗರದ ಪಳ್ಳಿಗರ ಪಾಳ್ಯದಲ್ಲಿ ತಡರಾತ್ರಿ ಈ ಘಟನೆ ಜರುಗಿದ್ದು, ನಾಗರಾಜ್ (೩೫) ಕೊಲೆಯಾದ ದುರ್ದೈವಿ. ಅದೇ ಏರಿಯಾದ ಅಪ್ಪಿ ಎಂಬಾತ ಕೊಲೆಯಾದವನಾಗಿದ್ದು, ಇನ್ನೂ ಅಪ್ಪಿ ಪತ್ನಿ ಜೊತೆಗೆ ನಾಗರಾಜ್ ಅಕ್ರಮ ಸಂಬಂಧ ಹೊಂದಿದ್ದ ಆರೋಪ ಕೇಳಿಬಂದಿದೆ. ಕಳೆದ ರಾತ್ರಿ ಇಸ್ಪೀಟ್ ಆಡುವಾಗ ಇದೇ ವಿಚಾರವಾಗಿ ಗಲಾಟೆ ಮಾಡಿಕೊಂಡು ಕೊಲೆ ಮಾಡಲಾಗಿದೆ. ಇನ್ನೂ ಈ ಕೊಲೆ ಪೂರ್ವ ನಿಯೋಜಿತ ಎಂಬ ಮಾಹಿತಿ ಹೊರಬಂದಿದ್ದು, ಆರೋಪಿ ಅಪ್ಪಿಯನ್ನು ಮುಳಬಾಗಿಲು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ ಈ ಘಟನೆ ಮುಳಬಾಗಿಲು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ.
ಕಾನೂನು ಪ್ರಕಾರ ದಾಖಲೆ ಸರಿ ಇದ್ದವರಿಗೆ ಭೂ ಗ್ಯಾರಂಟಿ – CM ಡಿ.ಕೆ. ಶಿವಕುಮಾರ್
ಕಾನೂನು ಪ್ರಕಾರ ದಾಖಲೆ ಸರಿ ಇದ್ದವರಿಗೆ ಭೂ ಗ್ಯಾರಂಟಿ - CM ಡಿ.ಕೆ. ಶಿವಕುಮಾರ್ ಸರ್ಕಾರ ಆರನೇ ಗ್ಯಾರಂಟಿಯಾಗಿ ಭೂ ಗ್ಯಾರಂಟಿ ನೀಡುತ್ತಿರುವುದರ ಬಗ್ಗೆ ಕೇಳಿದಾಗ, "ಈ...








