ಮುಂಡಾಜೆ ಬಳಿ ರಾಶಿ ರಾಶಿ ನಾಟಿ ಕೋಳಿ ಪತ್ತೆ – ಕಾರಣ ಇನ್ನೂ ನಿಗೂಢ

1 min read
chickens abandoned Mundaje

ಮುಂಡಾಜೆ ಬಳಿ ರಾಶಿ ರಾಶಿ ನಾಟಿ ಕೋಳಿ ಪತ್ತೆ – ಕಾರಣ ಇನ್ನೂ ನಿಗೂಢ

ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಮುಂಡಾಜೆ ಗ್ರಾಮ ಪಂಚಾಯತ್ ಪ್ರದೇಶದ ಸೀತುವಿನಲ್ಲಿ ಸುಮಾರು 200 ಸೇಲಂ ನಾಟಿ ಕೋಳಿಗಳು ಕಂಡು ಬಂದಿದ್ದು, ಆತಂಕ ಸೃಷ್ಟಿಸಿದೆ. ಸೇಲಂ ತಳಿಗಳ ನಾಟಿ ಕೋಳಿಗಳು ಏಪ್ರಿಲ್ 11 ರಂದು ರಸ್ತೆಯ ಪಕ್ಕದಲ್ಲಿ ಕಂಡುಬಂದಿವೆ.
chickens abandoned Mundaje

ಇವುಗಳ ಪೈಕಿ, ಕೆಲವು ಸತ್ತು ಬಿದ್ದಿದ್ದು, ಹಲವಾರು ಅನಾರೋಗ್ಯದಿಂದ ಬಳಲುತ್ತಿವೆ. ಯಾರು, ಏಕೆ ಮತ್ತು ಯಾವ ಉದ್ದೇಶಕ್ಕಾಗಿ ಅಲ್ಲಿ ಕೋಳಿಗಳನ್ನು ತ್ಯಜಿಸಿದರು ಎಂಬುದರ ಬಗ್ಗೆ ಯಾವುದೇ ಉತ್ತರ ಸಿಕ್ಕಿಲ್ಲ.

ಅನೇಕರು ಈ ಕೋಳಿಗಳನ್ನು ಹಿಡಿದು ತಮ್ಮ ಚೀಲಗಳಲ್ಲಿ ಹಾಕಿ ಮನೆಗೆ ಕೊಂಡೊಯ್ದರೆ ಇನ್ನೂ ಕೆಲವರು ನದಿಯ ಪಕ್ಕದಲ್ಲಿ ಮತ್ತು ಇತರೆಡೆ ಪಾರ್ಟಿಗಳಿಗೆ ವ್ಯವಸ್ಥೆ ಮಾಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಸಾಂಕ್ರಾಮಿಕ ಕಾಯಿಲೆಗಳಿಗೆ ಕಾರಣವಾಗುವ ಅನಾರೋಗ್ಯ ಕೋಳಿ ಮಾಂಸ ಸೇವನೆಯ ಬಗ್ಗೆ ಆತಂಕ ಈ ಪ್ರದೇಶದಲ್ಲಿ ಮನೆಮಾಡಿದೆ. ಪಶುಸಂಗೋಪನಾ ವಿಭಾಗದ ಅಧಿಕಾರಿಗಳು ಭಾನುವಾರ ಸಂಜೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಏನಿದು ಘಟನೆ

ಮುಂಡಾಜೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ರಸ್ತೆಬದಿ ಸುಮಾರು 200 ಸೇಲಂ ತಳಿ ಕೋಳಿಗಳನ್ನು ಪತ್ತೆ ಮಾಡಲಾಗಿದೆ. ಪತ್ತೆಯಾಗಿರುವ ಕೋಳಿಗಳ ಮೌಲ್ಯವನ್ನು ಸುಮಾರು 50,000 ರೂ ಗಳು ಎಂದು ಅಂದಾಜಿಸಲಾಗಿದ್ದು, ಸ್ಥಳದಿಂದ ಸುಮಾರು 50 ಮೀಟರ್ ದೂರದಲ್ಲಿ ಸುಮಾರು 50 ಕೋಳಿಗಳು ಮೃತಪಟ್ಟಿರುವುದು ಕಂಡುಬಂದಿದೆ.
chickens abandoned Mundaje

ಪ್ರತಿದಿನ, ಈ ರಸ್ತೆಯಲ್ಲಿ ನೂರಾರು ವಾಹನಗಳು ಚಲಿಸುತ್ತವೆ‌ಮತ್ತು ಕೋಳಿಗಳು ಪತ್ತೆಯಾದ ಸ್ಥಳದ ಬಳಿ ಯಾವುದೇ ಮನೆಗಳಿಲ್ಲ. ರಸ್ತೆ ಬದಿಯಲ್ಲಿ ರಾಶಿ ರಾಶಿ ಕೋಳಿಗಳನ್ನು ನೋಡಿ ಸಂತೋಷಪಟ್ಟ ದಾರಿಹೋಕರು ಅವುಗಳನ್ನು ಚೀಲಗಳು, ಗೋಣಿ ಚೀಲಗಳು ಇತ್ಯಾದಿಗಳಲ್ಲಿ ತುಂಬಿಸಿಕೊಂಡು ಮನೆಗೆ ಒಯ್ದಿದ್ದಾರೆ. ಅದರಲ್ಲಿ ಕೆಲವು ಅನಾರೋಗ್ಯದಿಂದ ಬಳಲುತ್ತಿದ್ದವು ಎಂದು ಹೇಳಲಾಗುತ್ತಿದೆ.

#chickens #Mundaje

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd