ಬೆಂಗಳೂರು: ರಾಜ್ಯದಲ್ಲಿ ಲಾಕ್ ಡೌನ್ ಇದ್ರೂ ಕೆಲವರು ಮನೆಯಿಂದ ಹೊರಬಂದು ಸುಖಾಸುಮ್ಮನೆ ತಿರುಗಾಡುತ್ತಿದ್ದಾರೆ. ಪೊಲೀಸರ ವಾರ್ನಿಂಗ್ ಗೂ ಕ್ಯಾರೆ ಎನ್ನದೆ ಅಲ್ಲಲ್ಲಿ ಜನರು ಅನಾವಶ್ಯಕವಾಗಿ ಓಡಾಡುತ್ತಿದ್ದಾರೆ. ಹೀಗಾಗಿ ಜನರ ಓಡಾಟವನ್ನು ತಡೆಯಲು ಇದೀಗ ಸೀಲ್ ಡೌನ್ ಅಸ್ತ್ರ ಪ್ರಯೋಗಿಸಿದ್ದಾರೆ. ಈಗಾಗಲೇ ಬೆಂಗಳೂರಿನ ಕತ್ರಿಗುಪ್ಪೆ, ಶಿವಾಜಿನಗರ ಸೇರಿದಂತೆ ಹಲವು ಏರಿಯಾಗಳನ್ನ ಸೀಲ್ ಡೌನ್ ಮಾಡಲಾಗಿದೆ. ಬೆಂಗಳೂರು ಸೇರಿದಂತೆ ಹಾಟ್ ಸ್ಪಾಟ್ ಜಿಲ್ಲೆಗಳನ್ನೂ ಸೀಲ್ ಡೌನ್ ಮಾಡಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಗಣನೀಯ ಏರಿಕೆಯಾಗುತ್ತಿರೋ ಹಿನ್ನೆಲೆ ಸೀಲ್ ಡೌನ್ ಗೆ ಸಿದ್ಧತೆ ನಡೆದಿದೆ. ಬೆಂಗಳೂರು ನಗರದ ಎಲ್ಲಾ ಏರಿಯಾಗಳ ಸಬ್ ವೇಗಳನ್ನು ಬಂದ್ ಮಾಡಲಾಗುತ್ತೆ. ಇದ್ರಿಂದಾಗಿ ಏರಿಯಾದಿಂದ ಏರಿಯಾಗೆ ಇರೋ ಸಂಪರ್ಕ ಕಡಿತವಾಗಲಿದೆ. ಯಾವುದೇ ವಾಹನ ಹೊರಗಡೆ ಬಂದ್ರೆ ಮುಖ್ಯ ರಸ್ತೆಗೆ ಬರಲೇಬೇಕಾಗುತ್ತದೆ.
ಏನಿದು ಸೀಲ್ ಡೌನ್..?
ಲಾಕ್‌ಡೌನ್ ಅಂದ್ರೆ, ಯಾವ ಪ್ರದೇಶದಲ್ಲಿ ಲಾಕ್‌ಡೌನ್ ಇರುತ್ತೋ ಅಲ್ಲಿ ಸಾರ್ವಜನಿಕರಿಗೆ ಬೇಕಾದ ಅಗತ್ಯ ವಸ್ತುಗಳು, ನಿಗದಿತ ಸಮಯದಲ್ಲಿ ಮಾತ್ರ ಸಿಗಲು ಅವಕಾಶ ನೀಡಲಾಗುತ್ತೆ. ಆದ್ರೆ ಸೀಲ್‌ಡೌನ್ ನಲ್ಲಿ ಅದಕ್ಕೆ ಅವಕಾಶ ಇರುವುದಿಲ್ಲ, ಇಡೀ ಪ್ರದೇಶಕ್ಕೆ ಪ್ರದೇಶವೇ ಸೀಲ್ ಆಗುತ್ತದೆ. ಅಂದ್ರೆ, ಲಾಕ್‌ಡೌನ್ ಸಂದರ್ಭದಲ್ಲಾದ್ರೂ ಸಾರ್ವಜನಿಕರಿಗೆ ಅವಶ್ಯಕತೆ ಇರುವ ಮೆಡಿಕಲ್ ಶಾಪ್‌ಗಳು, ಹಾಲು, ತರಕಾರಿ, ಹಣ್ಣುಗಳನ್ನು ಖರೀದಿಸಲು ಅವಕಾಶವಿರುತ್ತದೆ. ಆದ್ರೆ ಸೀಲ್‌ಡೌನ್ ಸಂದರ್ಭದಲ್ಲಿ ಅದ್ಯಾವುದಕ್ಕೂ ಅವಕಾಶವಿರಲ್ಲ. ಅಂದ್ರೆ, ಸಾರ್ವಜನಿಕರು ಯಾರು ಕೂಡ ಮನೆಯಿಂದ ಹೊರ ಬರಬಾರದು.
ನಿತ್ಯದ ವಸ್ತುಗಳಾದ ಹಾಲು, ಹಣ್ಣು, ತರಕಾರಿ ಕೂಡ ಸಿಗುವುದಿಲ್ಲ. ಇದರ ಜೊತೆಗೆ ಮೆಡಿಕಲ್ ಶಾಪ್‌ಗಳು ಕೂಡ ತೆರೆಯಲು ಅವಕಾಶವಿಲ್ಲ. ಇನ್ನು ಮೆಡಿಕಲ್ ಎಮರ್ಜೆನ್ಸಿ ಇದ್ರೂ ಕೂಡ ಸೀಲ್‌ಡೌನ್ ಸಂದರ್ಭದಲ್ಲಿ ಸಹಾಯವಾಣಿಗಳ ಮೂಲಕ ಸಾರ್ವಜನಿಕರು ವೈದ್ಯಕೀಯ ಸೌಲಭ್ಯ ಪಡೆದುಕೊಳ್ಳಬೇಕು.








