`ಲಾಕ್’ ಓಪನ್ ಲೆಕ್ಕಾಚಾರ : ಸಾಧ್ಯಾಸಾಧ್ಯತೆಗಳೇನು..?
ಬೆಂಗಳೂರು : ಜೂನ್ ಏಳರ ಬಳಿಕ ರಾಜ್ಯದಲ್ಲಿ ಲಾಕ್ ಡೌನ್ ವಿಸ್ತರಣೆ ಆಗುತ್ತಾ..? ಅಥವಾ ಹಂತ ಹಂತವಾಗಿ ಲಾಕ್ ಡೌನ್ ಸಡಿಳಿಕೆ ಮಾಡ್ತಾರಾ..? ಎಂಬ ಬಗ್ಗೆ ಈಗಾಗಲೇ ರಾಜ್ಯದಲ್ಲಿ ಚರ್ಚೆಗಳು ನಡೆಯುತ್ತಿವೆ.
ಕೊರೊನಾ ಪಾಸಿಟಿವಿಟಿ ದರ ಶೇಕಡಾ ಐದಕ್ಕಿಂತ ಕಡಿಮೆಯಾದರೇ ಕಫ್ರ್ಯೂ ನಿಯಮ ಸಡಿಲಿಸಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ. ಸದ್ಯ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ. ಒಂದು ವೇಳೆ ಜೂನ್ ಏಳರ ಬಳಿಕ ಅನ್ ಲಾಕ್ ಮಾಡಬೇಕು ಅಂದರೇ ಜೂನ್ ಆರರ ಹೊತ್ತಿಗೆ ಶೇ 5ಕ್ಕೆ ಇಳಿಯುವುದೇ ಎಂಬ ಕುತೂಹಲ ಜೋರಾಗಿದೆ.
ಸದ್ಯ ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇಕಡಾ 12.30ರಷ್ಟಿದ್ದು, ಕಫ್ರ್ಯೂ ಅವಧಿ ಮುಕ್ತಾಯಕ್ಕೆ ಇನ್ನೂ ಐದು ದಇನ ಬಾಕಿ ಇದೆ. ಅಷ್ಟರೊಳಗೆ ಪಾಸಿಟಿವಿಟಿ ದರ ಶೇಖಡಾ 5ಕ್ಕಿಂತ ಕಡಿಮೆ ಆಗಬಹುದು ಎಂಬ ಲೆಕ್ಕಾಚಾರವೂ ನಡೆದಿದೆ.
ಸಾಧ್ಯಾಸಾಧ್ಯತೆಗಳೇನು..?
ಪಾಸಿಟಿವಿಟಿ ಐದಕ್ಕಿಂತ ಕಡಿಮೆಯಾದರೇ ಲಾಕ್ ಡೌನ್ ಸಡಿಲಗೊಳಿಸಬಹುದು. ಇಲ್ಲವಾದರೇ ಇನ್ನೂ ಒಂದು ವಾರ ಕಠಿಣ ಕಫ್ರ್ಯೂ ನಿಮಯ ಮುಂದುವರಿಕೆ
ಲಾಕ್ ಡೌನ್ ನಡುವೆ ಕೆಲವು ವಲಯಗಳಿಗೆ ವಿನಾಯಿತಿ ಸಾಧ್ಯತೆ
ಶೇಕಡಾ 30 ಮಿತಿಯಲ್ಲೇ ಕೈಗಾರಿಕೆ ಉತ್ಪನ್ನಗಳ ತಯಾರಿಕೆಗೆ ಅನುವು
ಹೋಟೆಲ್, ಅಂಗಡಿ, ಹೋಲ್ ಸೇಲ್ ಮಾರ್ಕೆಟ್ ಸಂಜೆ 6 ಗಂಟೆಯವರೆಗೆ ಓಪನ್
ಮದ್ಯ ಪಾರ್ಸೆಲ್ ಬೆಳಿಗ್ಗೆ 10 ರಿಂದ 6 ರವರೆಗೆ ಅನುಮತಿ
ಕಟ್ಟಡ ಕಾಮಗಾರಿಕೆ ಕಾರ್ಮಿಕರು, ಸಿಬ್ಬಂದಿ ಸಂಚಾರಕ್ಕೆ ಅವಕಾಶ
ಆಟೋ, ಟ್ಯಾಕ್ಸಿ ಸಂಚಾರಕ್ಕೆ ಅವಕಾಶ
ಇಳಿಯುತ್ತಿದೆ ಪಾಸಿಟಿವಿಟಿ
ರಾಜ್ಯದಲ್ಲಿ ಕಳೆದ ಐದು ದಿನಗಳಿಂದ ಕೊರೊನಾ ಸೋಂಕಿನ ಪ್ರಕರಣಗಳು ಇಳಿಕೆಯಾಗುತ್ತಿವೆ. ಇದನ್ನ ಗಮಿಸಿದ್ರೆ ರಾಜ್ಯದಲ್ಲಿ ಪಾಸಿಟಿವಿಟಿ ದರ ಕಡಿಮೆ ಆಗುತ್ತಿರುವುದು ಸ್ಪಷ್ಟವಾಗುತ್ತಿದೆ.
ಜೂನ್ 1 – 12.30%
ಮೇ 31 – 13.57%
ಮೇ 30 – 14.68%
ಮೇ 29 – 14.95%
ಮೇ 28 – 16.42%
ಈ ಟ್ರೆಂಡ್ ಅನ್ನ ಗಮಿಸಿದ್ರೆ ಜೂನ್ ಏಳರ ಹೊತ್ತಿಗೆ ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ದರ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲಾಕ್ ಡೌನ್ ಹಂತ ಹಂತವಾಗಿ ಓಪನ್ ಆಗಬಹುದು.