ನವದೆಹಲಿ : ಇಂದಿನಿಂದ ದೇಶದಲ್ಲಿ ಲಾಕ್ ಡೌನ್ 3.0 ಜಾರಿಯಲ್ಲಿರಲಿದೆ. ಆದರೆ, ದೇಶಾದ್ಯಂತ ವಿವಿಧ ಜಿಲ್ಲೆಗಳನ್ನು ಮೂರು ವಲಯಗಳನ್ನಾಗಿ ವಿಂಗಡಿಸಿದ್ದು, ರೆಡ್ ಝೋನ್ ನಲ್ಲಿ ಲಾಕ್ ಡೌನ್ ಸಂಪೂರ್ಣವಾಗಿ ಜಾರಿಯಲ್ಲಿರಲಿದೆ. ಉಳಿದಂತೆ ಆರೆಂಜ್ ಝೋನ್ ಹಾಗೂ ಗ್ರೀನ್ ಝೋನ್ ನಲ್ಲಿ ಸಾಕಷ್ಟು ಸಡಿಲಿಕೆಯನ್ನು ಮಾಡಲಾಗಿದೆ.
ಈಗಾಗಲೇ ಗ್ರೀನ್, ಆರೆಂಜ್ ಮತ್ತು ಕೆಂಪು ವಲಯಗಳ ವಿಂಗಡಣೆಯನ್ನು ಕೇಂದ್ರ ಮಾಡಿದ್ದು, ಈ ಪಟ್ಟಿಯನ್ನ ಆಯಾ ರಾಜ್ಯ ಸರ್ಕಾರಗಳು ಬದಲಾಯಿಸಬಹುದು ಅನ್ನೋ ಅವಕಾಶ ನೀಡಲಾಗಿದೆ. ಅಲ್ಲದೇ ದೇಶಾದ್ಯಂತ ವಾಯುಯಾನ, ರೈಲು, ಮೆಟ್ರೋ ಸಂಚಾರವಿರುವುದಿಲ್ಲ ಅನ್ನೋದನ್ನೂ ಗೃಹ ಇಲಾಖೆ ಸ್ಪಷ್ಟಪಡಿಸಿದೆ.
ರೆಡ್ ಝೋನ್:
ಏನಿರುತ್ತೆ..?
ರೆಡ್ ಝೋನ್ ಗಳಲ್ಲಿ ಅವಶ್ಯಕ ಕಾರ್ಯಗಳಿಗಾಗಿ ಜನರ ಮತ್ತು ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ದ್ವಿಚಕ್ರವಾಹನಗಳಲ್ಲಿ ಹಿಂಬದಿ ಸವಾರರಿಗೆ ಅವಕಾಶವಿಲ್ಲ.
ಒಬ್ಬ ಪ್ಯಾಸೇಂಜರ್, ಒಬ್ಬ ಡ್ರೈವರ್ ಇದ್ದರೆ ಕ್ಯಾಬ್ ಗೆ ಅನುಮತಿ
ರೆಡ್ ಝೋನ್ ನಲ್ಲಿರುವ ನಗರ ಪ್ರದೇಶಗಲ್ಲಿನ ಕಾರ್ಖಾನೆಗಳಿಗೆ, ವಿಶೇಷ ಎಕನಾಮಿಕ್ ಝೋನ್ ಗಳಿಗೆ, ರಫ್ತು ಕೇಂದ್ರಿತ ಸಂಸ್ಥೆಗಳನ್ನು ತೆರೆಯಲು ಷರತ್ತುಬದ್ಧ ಅನುಮತಿ
ಅವಶ್ಯಕ ವಸ್ತುಗಳ ಉತ್ಪಾದನಾ ಕಾರ್ಖಾನೆಗಳಿಗೆ, ಐಟಿ ಹಾರ್ಡ್ ವೇರ್ ಉತ್ಪಾದನಾ ವಲಯಕ್ಕೆ ಅನುಮತಿ
ಸ್ಥಳೀಯವಾಗಿ ಕೆಲಸಗಾರರು ಲಭ್ಯವಿದ್ದರೆ ಕಟ್ಟಡ ಕಾಮಗಾರಿಗಳಿಗೂ ಅನುಮತಿ.
ಶೇ.33 ಉದ್ಯೋಗಿಗಳೊಂದಿಗೆ ಖಾಸಗಿ ಸಂಸ್ಥೆಗಳು ಕಾರ್ಯ ನಿರ್ವಹಿಸಬಹುದಾಗಿದೆ. ಉಳಿದವರು ವರ್ಕ್ ಫ್ರಂ ಹೋಮ್ ಮಾಡಬೇಕು.
ಆದರೆ, ರಕ್ಷಣಾ ಮತ್ತು ಭದ್ರತಾ ಸೇವೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಪೊಲೀಸ್, ಜೈಲು, ಹೋಮ್ ಗಾರ್ಡ್ಸ್, ಸಿವಿಲ್ ಡಿಫೆನ್ಸ್, ಫೈರ್ ಮತ್ತು ಎಮರ್ಜನ್ಸಿ ಮುಂತಾದ ಸೇವೆಗಳನ್ನು ನೀಡುವ ಕಚೇರಿಗಳು ತಮಗೆ ಅವಶ್ಯವಿರುವಷ್ಟು ಉದ್ಯೋಗಿಗಳನ್ನು ಬಳಸಿಕೊಳ್ಳಬಹುದಾಗಿದೆ.
ರೆಡ್ ಝೋನ್ ಗ್ರಾಮೀಣ ಪ್ರದೇಶಗಳಲ್ಲಿ ಕೈಗಾರಿಕೆ, ಮನ್ರೇಗ (MGNREGA), ಆಹಾರ ಸಾಮಗ್ರಿ ತಯಾರಿಕೆಗೆ ಅವಕಾಶ.
ಗ್ರಾಮೀಣ ಪ್ರದೇಶಗಳಲ್ಲಿ ಅಂಗಡಿಗಳನ್ನು ತೆರೆಯಲು ಅವಕಾಶ
ಕೃಷಿ ಚಟುವಟಿಕೆಗಳಿಗೆ ಅವಕಾಶ. ಆರೋಗ್ಯ ಸೇವೆಗಳಿಗೆ ಅವಕಾಶವಿದೆ.
ಹೊರಗಿನ ರೋಗಿಗಳ ಇಲಾಖೆಗಳು (ಒಪಿಡಿಗಳು) ಮತ್ತು ವೈದ್ಯಕೀಯ ಚಿಕಿತ್ಸಾಲಯಗಳು ಕೆಂಪು, ಹಳದಿ ಮತ್ತು ಹಸಿರು ವಲಯಗಳಲ್ಲಿ ಕಾರ್ಯನಿರ್ವಹಿಸಲು ಅನುಮತಿ ಇದೆ.
ಏನಿರಲ್ಲ..?
ಎಲ್ಲಾ ವಲಯಗಳಲ್ಲಿ 65 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು, ಸಹ-ಅಸ್ವಸ್ಥರು, ಗರ್ಭಿಣಿಯರು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲಿಯೇ ಇರಬೇಕು.
ಸಾರ್ವಜನಿಕ ಬಸ್ ಸಂಚಾರಕ್ಕೆ ಅನುಮತಿ ಇಲ್ಲ
ಸಾರ್ವಜನಿಕರು ಅಂತರ್ ರಾಜ್ಯ ಮತ್ತು ಅಂತರ್ ಜಿಲ್ಲೆ ಓಡಾಟಕ್ಕೆ ನಿರ್ಬಂಧ
ವಾಯು ಯಾನ, ರೈಲು, ಮೆಟ್ರೋ ಸೇವೆ, ಅಂತರ್ ರಾಜ್ಯ ಸಾರಿಗೆ
ಶಾಲಾ, ಕಾಲೇಜು, ಇತರೆ ಯಾವುದೇ ಶಿಕ್ಷಣ ಸಂಸ್ಥೆಗಳು ಇರಲ್ಲ
ಲಾಡ್ಜಿಂಗ್, ಹೋಟೆಲ್, ರೆಸ್ಟೊರೆಂಟ್, ಸಾರ್ವಜನಿಕ ಕಾರ್ಯಕ್ರಮ
ಸಿನಿಮಾ ಹಾಲ್ ಗಳು, ಮಾಲ್, ಜಿಮ್, ಕ್ರೀಡಾ ಸಂಕಿರಣಗಳು
ಆರೆಂಜ್ ಝೋನ್
ಏನಿರುತ್ತೆ..?
ಆರೆಂಜ್ ಜೋನ್ ಗಳಲ್ಲಿ ಮತ್ತು ರೆಡ್ ಜೋನ್ ಗಳಲ್ಲಿ ಒಬ್ಬ ಡ್ರೈವರ್ ಹಾಗೂ ಒಬ್ಬ ಪ್ಯಾಸೇಂಜರ್ ಇರುವ ಟ್ಯಾಕ್ಸಿ ಸರ್ವೀಸ್ ಗೆ ಅನುಮತಿ
ಅಂತರ್ ಜಿಲ್ಲೆ ಸಂಚಾರಕ್ಕೆ ಕೇವಲ ಅನುಮತಿ ಪಡೆದ ಕಾರ್ಯಗಳಿಗೆ ಮಾತ್ರ ಅವಕಾಶ
ನಾಲ್ಕು ಚಕ್ರವಾಹನಗಳ ಸಂಚಾರಕ್ಕೂ ಅನುಮತಿ ನೀಡಲಾಗಿದ್ದು ಅದ್ರಲ್ಲಿ ಡ್ರೈವರ್ ಹೊರತುಪಡಿಸಿ ಇಬ್ಬರು ಸಂಚರಿಸಬಹುದಾಗಿದೆ
ಹಿಂಬದಿ ಸವಾರರೊಂದಿಗೆ ಸಂಚರಿಸುವ ಅವಕಾಶವನ್ನು ದ್ವಿಚಕ್ರವಾಹನಗಳಿಗೆ ಆರೇಂಜ್ ಝೋನ್ ನಲ್ಲಿ ನೀಡಲಾಗಿದೆ
ಏನಿರಲ್ಲ..?
ಸಾರ್ವಜನಿಕ ಸಾರಿಗೆ ಸಂಚಾರಕ್ಕೆ ಅವಕಾಶವಿಲ್ಲ
ಅನವಶ್ಯಕ ಸಂಚಾರಕ್ಕೆ ಅನುಮತಿ ನೀಡಲಾಗುವುದಿಲ್ಲ
ವಾಯು ಯಾನ, ರೈಲು, ಮೆಟ್ರೋ ಸೇವೆ, ಅಂತರ್ ರಾಜ್ಯ ಸಾರಿಗೆ
ಶಾಲಾ, ಕಾಲೇಜು, ಇತರೆ ಯಾವುದೇ ಶಿಕ್ಷಣ ಸಂಸ್ಥೆಗಳು ಇರಲ್ಲ
ಲಾಡ್ಜಿಂಗ್, ಹೋಟೆಲ್, ರೆಸ್ಟೊರೆಂಟ್, ಸಾರ್ವಜನಿಕ ಕಾರ್ಯಕ್ರಮ
ಸಿನಿಮಾ ಹಾಲ್ ಗಳು, ಮಾಲ್, ಜಿಮ್, ಕ್ರೀಡಾ ಸಂಕಿರಣಗಳು ಇರಲ್ಲ.
ಗ್ರೀನ್ ಝೋನ್
ಏನಿರುತ್ತೆ..?
ಅಗತ್ಯ ಸೇವೆಗಳ ಸರಕು ಸಾಗಣೆಗೆ ಅವಕಾಶ
ಗೃಹ ಇಲಾಖೆ ಅನುಮತಿ ಇರುವ ಸಾರಿಗೆಗೆ ಮಾತ್ರ ಅವಕಾಶ
ಆರೋಗ್ಯ ಸೇವೆ, ಔಷಧಿ ಮಳಿಗೆಗಳನ್ನ ತೆರೆಯಲು ಅನುಮತಿ
ಬಹುತೇಕ ಎಲ್ಲ ಸೇವೆಗಳೂ ಹಸಿರು ವಲಯದಲ್ಲಿ ಲಭ್ಯ
ಶೇಕಡ 50ರಷ್ಟು ಮಾತ್ರ ಪ್ರಯಾಣಿಕರ ಜೊತೆ ಬಸ್ ಸಂಚಾರಕ್ಕೆ ಅನುಮತಿ
ಬಸ್ ಡಿಪೋಗಳೂ ಸಹ ಶೇಕಡ 50ರಷ್ಟು ಉದ್ಯೋಗಿಗಳೊಂದಿಗೆ ಕಾರ್ಯನಿರ್ವಹಿಸಬಹುದು
ಎಲ್ಲ ರೀತಿಯ ಸರಕು ಸಾಗಣೆಗೂ ಅವಕಾಶ, ಇದನ್ನ ತಡೆಯುವಂತಿಲ್ಲ
ಅಂತರ್ ರಾಜ್ಯ ಸಾಗಣೆಗೆ ಪ್ರತ್ಯೇಕ ಪಾಸ್ ನ ಅವಶ್ಯಕತೆ ಇರುವುದಿಲ್ಲ
ಈಗಾಗಲೇ ಅನುಮತಿ ನೀಡಿರುವ ಸೇವೆಗಳಿಗೆ ಮತ್ತೆ ಅನುಮತಿ ಬೇಕಿಲ್ಲ
ಮದ್ಯ ಮಾರಾಟಕ್ಕೆ ಕೇಂದ್ರದಿಂದ ಅನುಮತಿ
ಏನಿರಲ್ಲ?
ವಾಯು ಯಾನ, ರೈಲು, ಮೆಟ್ರೋ ಸೇವೆ, ಅಂತರ್ ರಾಜ್ಯ ಸಾರಿಗೆ
ಶಾಲಾ, ಕಾಲೇಜು, ಇತರೆ ಯಾವುದೇ ಶಿಕ್ಷಣ ಸಂಸ್ಥೆಗಳು ಇರಲ್ಲ
ಲಾಡ್ಜಿಂಗ್, ಹೋಟೆಲ್, ರೆಸ್ಟೊರೆಂಟ್, ಸಾರ್ವಜನಿಕ ಕಾರ್ಯಕ್ರಮ
ಸಿನಿಮಾ ಹಾಲ್ ಗಳು, ಮಾಲ್, ಜಿಮ್, ಕ್ರೀಡಾ ಸಂಕಿರಣಗಳು
65 ವರ್ಷ ಮೇಲ್ಪಟ್ಟವರು, 10 ವರ್ಷಕ್ಕೂ ಕಡಿಮೆ ಇರುವ ಮಕ್ಕಳು
ಗರ್ಭಿಣಿಯರು ತಮ್ಮ ಮನೆಗಳನ್ನ ಬಿಟ್ಟು ಬರುವಂತಿಲ್ಲ