ಬೆಂಗಳೂರು : ದೇಶದಲ್ಲಿ ಲಾಕ್ ಡೌನ್ 4.0 ಜಾರಿಯಲ್ಲಿದ್ದು, ನಿನ್ನೆ ಲಾಕ್ ಡೌನ್ 4.0ಗೆ ಸಂಬಂಧಿಸಿದಂತೆ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಜಾರಿ ಮಾಡಿದೆ. ಅದಕ್ಕೆ ಸಂಬಂಧಿಸಿದಂತೆ ಇಂದು ರಾಜ್ಯ ಸರ್ಕಾರ ಹಲವು ಸಡಿಲಿಕೆಗಳನ್ನು ನೀಡಿದೆ.
ಹಾಗಾದ್ರೆ ರಾಜ್ಯದಲ್ಲಿ ನಾಳೆಯಿಂದ ಏನಿರುತ್ತೆ, ಏನಿರಲ್ಲ ಎಂಬೋದನ್ನ ನೋಡೋದಾದ್ರೆ..
ಏನಿರುತ್ತೆ..?
ಬಿಎಂಟಿಸಿ, ಕೆಎಸ್ ಆರ್ ಟಿಸಿ ಸೇರಿದಂತೆ ಎಲ್ಲ ಬಸ್ ಗಳ ಓಡಾಟಕ್ಕೆ ಅನುಮತಿ. ಆದ್ರೆ
ಒಂದು ಬಸ್ ನಲ್ಲಿ ಕೇವಲ 30 ಜನರು ಮಾತ್ರ ಪ್ರಯಾಣ ಮಾಡಲು ಅವಕಾಶ. ಸಾಮಾಜಿಕ ಅಂತರದೊಂದಿಗೆ ಮಾಸ್ಕ್ ಕಡ್ಡಾಯ.
ಹೊರ ರಾಜ್ಯದಿಂದ ಬರೋರಿಗೆ ಕ್ವಾರಂಟೈನ್ ಮಾಡುವ ತೀರ್ಮಾನ ಮುಂದುವರಿಕೆ
ಆಟೋ, ಟ್ಯಾಕ್ಸಿ ಓಡಾಟಕ್ಕೆ ಅನುಮತಿ (ಮಾಸ್ಕ್ ಕಡ್ಡಾಯ)
ಮಾಲ್ ಗಳು ಹೊರತುಪಡಿಸಿ ಎಲ್ಲ ಅಂಗಡಿಗಳನ್ನು ತೆರೆಯಲು ಅನುಮತಿ
ನಮ್ಮ ರಾಜ್ಯದಲ್ಲಿ ಓಡಾಡಲು ಟ್ರೇನ್ ಗಳಿಗೆ ಮಾತ್ರ ಅವಕಾಶ
ಸಲೂನ್ ಶಾಪ್ ತೆರೆಯಲು ಅನುಮತಿ
ಪಾರ್ಕ್ ಗಳಲ್ಲಿ ಬೆಳಗ್ಗೆ 7 ರಿಂದ 9 ಹಾಗೂ ಸಂಜೆ 5 ರಿಂದ 7ಗಂಟೆವರೆಗೆ ಓಡಾಟಕ್ಕೆ ಮಾಡಲು ಅವಕಾಶ
ಏನಿರಲ್ಲ..?
ಮಾಲ್, ಸಿನಿಮಾ ಥಿಯೇಟರ್, ಹೋಟೆಲ್ ಇರಲ್ಲ.
ಬೇರೆ ರಾಜ್ಯದಿಂದ ಅನಾವಶ್ಯಕವಾಗಿ ಬರಲು ಅವಕಾಶವಿಲ್ಲ.
ಹೊರಗಡೆಯಿಂದ ಬರುವ ಟ್ರೇನ್ ಗಳಿಗೆ ಅವಕಾಶ ನೀಡಲ್ಲ.
ಭಾನುವಾರ ಮಾತ್ರ ಕಂಪ್ಲೀಟ್ ಲಾಕ್ ಡೌನ್, ಜನರು ಓಡಾಡಂಗಿಲ್ಲ.
ಭಾನುವಾರದಂದು ಅಗತ್ಯ ಸೇವೆ ಹೊರತುಪಡಿಸಿ ಸಂಪೂರ್ಣ ಬಂದ್.








