ಲಾಕ್ ಡೌನ್ ಗೆ ರಾಜ್ಯ ಸ್ತಬ್ದ, ರಾಜಧಾನಿ ರಸ್ತೆಗಳು ಖಾಲಿ ಖಾಲಿ
ಬೆಂಗಳೂರು: ಮಹಾಮಾರಿ ಕೊರೊನಾ ಹರಡುವುದನ್ನು ತಡೆಗಟ್ಟಲು ರಾಜ್ಯ ಸರ್ಕಾರದ ಭಾನುವಾರದಡೌನ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಲಾಕ್ ಡೌನ್ ಗೆ ಯಶಸ್ವಿಯಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಡಲಾಗಿತ್ತು.
ರಾಜಧಾನಿ ಬೆಂಗಳೂರು ಕೂಡ ಸ್ತಬ್ದವಾಗಿದೆ.
ಮೆಜೆಸ್ಟಿಕ್ ನ ಬಿಎಂಟಿಸಿ, ಕೆಎಸ್ ಆರ್ ಟಿಸಿ ಬಸ್ ನಿಲ್ದಾಣಗಳು ಜನರಿಲ್ಲದೆ ಖಾಲಿ ಖಾಲಿ ಯಾಗಿವೆ. ಮೆಜೆಸ್ಟಿಕ್ ನಲ್ಲಿ ಕೆಲ ಆಟೋಗಳ ಸಂಚಾರ ಹೊರತುಪಡಿಸಿ ಬೇರೆ ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ಮಲ್ಲೇಶ್ವರ, ತುಮಕೂರು ರಸ್ತೆ, ಮೈಸೂರು ರಸ್ತೆ, ಬಳ್ಳಾರಿ ರಸ್ತೆ ಸೇರಿದಂತೆ ನಗರದ ಬಹುತೇಕ ರಸ್ತೆಗಳು ಖಾಲಿ ಖಾಲಿಯಾಗಿವೆ.
ಪ್ರಮುಖ ಮೇಲ್ಸೇತುವೆ ಗಳನ್ನು ಕ್ಲೋಸ್ ಮಾಡಲಾಗಿದೆ.
ಯಲಹಂಕ ಸೇರಿದಂತೆ ಕೆಲವು ಮಾರುಕಟ್ಟೆಗಳಲ್ಲಿ ತರಕಾರಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ವ್ಯಾಪಾರಿಗಳು ತರಕಾರಿ ಖರೀದಿಸಿ ತೆರಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಲಾಕ್ ಡೌನ್ ಮಾಡಿದ್ದರೂ ದ್ವಿಚಕ್ರ ವಾಹನಗಳಲ್ಲಿ ಜನರು ಓಡಾಡುತ್ತಿದ್ದಾರೆ. ಅಗತ್ಯ ವಸ್ತುಗಳ ಖರೀದಿ, ಆಸ್ಪತ್ರೆ, ಮೆಡಿಕಲ್, ಮಾಂಸ- ಮೀನು ಖರೀದಿಸಲು ಬೈಕ್ ನಲ್ಲಿ ತೆರಳುತ್ತಿದ್ದಾರೆ. ಇಂದು ಗುರು ಪೂರ್ಣಿಮೆ ಇದ್ದರೂ ಸಾಯಿಬಾಬಾ ದೇವಾಲಯ ಸೇರಿ ಎಲ್ಲಾ ದೇವಸ್ಥಾನಗಳು ಬಂದ್ ಆಗಿವೆ. ಹೀಗಾಗಿ ಪೂಜೆಗೆಂದು ಬಂದವರು ವಾಪಸ್ ತೆರಳಿದರು.








