ಕೊರೊನಾ ವೈರಸ್ ವಿರುದ್ಧ ಹೋರಾಡಲು ದೇಶದಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿದ್ದು, ನಾಳೆಯಿಂದ ಲಾಕ್ ಡೌನ್ 3.0 ಜಾರಿಯಲ್ಲಿರಲಿದೆ. ಇದರಲ್ಲಿ ರೆಡ್ ಝೋನ್ ಹೊರೆತು ಪಡಿಸಿ ಉಳಿದ ಝೋನ್ ಗಳಿಗೆ ಕೆಲ ವಿನಾಯಿತಿಗಳನ್ನು ನೀಡಲಾಗಿದೆ.
ನಾಳೆ ಜಿಲ್ಲೆಯಲ್ಲಿ ಏನಿರುತ್ತೆ? ಏನಿರಲ್ಲ? ಅನ್ನೋದನ್ನ ನೋಡೋದಾದ್ರೆ..
ಏನಿರುತ್ತೆ
ಜಿಲ್ಲೆಯಾದ್ಯಂತ ಆಟೋ ರಿಕ್ಷಾ, ಕ್ಯಾಬ್ ಸಂಚಾರಕ್ಕೆ ಅನುಮತಿ.
ಆಟೋ ಮತ್ತು ಕ್ಯಾಬ್ ಗಳಲ್ಲಿ ಚಾಲಕ ಮತ್ತು ಇಬ್ಬರು ಪ್ರಯಾಣಿಕರಿಗೆ ಅವಕಾಶ.
ಖಾಸಗಿ ವಾಹನಗಳಾದ ಬೈಕ್ ಮತ್ತು ಕಾರುಗಳ ಸಂಚಾರಕ್ಕೆ ಅನುಮತಿ.
ಕಾರುಗಳಲ್ಲಿ ಚಾಲಕ ಸೇರಿ ಇಬ್ಬರು ಪ್ರಯಾಣಿಕರು ಮತ್ತು ಬೈಕ್ ಗಳಲ್ಲಿ ಒಬ್ಬರಷ್ಟೇ ಪ್ರಯಾಣಿಸಲು ಅನುಮತಿ.
ಸ್ಥಳೀಯ ಅಂಗಡಿಗಳು,ವಸತಿ ಸಂಕೀರ್ಣಗಳ ಶಾಪ್, ಸಣ್ಣಪುಟ್ಟ ಶಾಪ್ ಗಳನ್ನು ತೆರೆಯಲು ಅನುಮತಿ.
ಖಾಸಗಿ ಸಂಸ್ಥೆ ಮತ್ತು ಕಚೇರಿಗಳಲ್ಲಿ 33% ಸಿಬ್ಬಂದಿ ಬಳಸಿ ಕೆಲಸಕ್ಕೆ ಅನುಮತಿ.
ಅಗತ್ಯ ಸೇವೆಗಳಿಗೆ ಇ-ಕಾಮರ್ಸ್ ಸಂಸ್ಥೆಗಳಿಗೆ ಅವಕಾಶ.
ಮಾರುಕಟ್ಟೆ ಮತ್ತು ಮಾರುಕಟ್ಟೆ ಸಂಕೀರ್ಣಗಳಲ್ಲಿ ಅಗತ್ಯ ವಸ್ತುಗಳ ಶಾಪ್ ತೆರೆಯಲಷ್ಟೇ ಅನುಮತಿ.
ಏನಿರೋದಿಲ್ಲ?
ಹೊಟೇಲ್ ಬಾರ್, ರೆಸ್ಟೋರೆಂಟ್, ಮಾಲ್, ಸಿನಿಮಾ ಮಂದಿರ, ಜಿಮ್, ಕ್ರೀಡಾ ಸಂಕೀರ್ಣ, ಕ್ಲಬ್, ಸ್ವಿಮ್ಮಿಂಗ್ ಪೂಲ್, ಪಾರ್ಕ್, ಸೆಲೂನ್, ಸ್ಪಾ, ಬ್ಯೂಟಿ ಪಾರ್ಲರ್, ಟೆಕ್ಸ್ ಟೈಲ್ಸ್ ಮತ್ತು ಬಟ್ಟೆ ಅಂಗಡಿಗಳು ಬಂದ್.
ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಸೇರಿ ಜನ ಸೇರುವ ಎಲ್ಲಾ ಕಾರ್ಯಕ್ರಮಗಳು ನಿಷೇಧ.
ರಾತ್ರಿ 7 ರಿಂದ ಬೆ.7ರ ವರೆಗೆ ಎಲ್ಲಾ ರೀತಿಯ ಸಂಚಾರ, ಸೇವೆ ಬಂದ್.