ADVERTISEMENT
Thursday, June 25, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

102 ವರ್ಷಗಳ ಹಿಂದೇಯೇ ಇತ್ತು ಲಾಕ್‍ಡೌನ್, ಮಾಸ್ಕ್, ಕ್ವಾರಂಟೈನ್..!

admin by admin
July 11, 2020
in Newsbeat, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಬೆಂಗಳೂರು: ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಲಾಕ್‍ಡೌನ್, ಸೀಲ್‍ಡೌನ್, ಮಾಸ್ಕ್, ಸೋಷಿಯಲ್ ಡಿಸ್ಟೆನ್ಸ್(ಸಾಮಾಜಿಕ ಅಂತರ), ಕ್ವಾರಂಟೈನ್ ಅನ್ನೋ ಪದಗಳು ನಾಲಿಗೆ ತುದಿಯಲ್ಲಿಂದು ಹರಿದಾಡುತ್ತಿವೆ. ಇದಕ್ಕೆಲ್ಲಾ ಕಾರಣ ಮಹಾಮಾರಿ ಕೊರೊನಾ ವೈರಸ್.

ಆದರೆ, ಲಾಕ್‍ಡೌನ್, ಮಾಸ್ಕ್, ಕ್ವಾರಂಟೈನ್ ಕಾನ್ಸೆಪ್ಟ್ ಇಂದು ನಿನ್ನೆಯದಲ್ಲ. ಬರೋಬ್ಬರಿ 102 ವರ್ಷಗಳ ಹಿಂದೆಯೇ ನಮ್ಮ ಬೆಂಗಳೂರು ಸೇರಿದಂತೆ ಹಲವು ದೇಶಗಳಲ್ಲಿ ಲಾಕ್‍ಡೌನ್, ಮಾಸ್ಕ್ ಕಡ್ಡಾಯ ಎಂಬ ನಿಯಮಗಳು ಜಾರಿಗೆ ಬಂದಿದ್ದವು. ನಮ್ಮ ಇಂದಿನ ಹಿರಿಯರು ಇದೆಲ್ಲಾ ನಮಗೆ ಹೊಸತು. ನಮ್ಮ ಕಾಲದಲ್ಲಿ ಮಾಸ್ಕ್, ಸ್ಯಾನಿಟೈಸರ್, ಲಾಕ್‍ಡೌನ್, ಕ್ವಾರಂಟೈನ್ ಅಂದ್ರೆ ಗೊತ್ತೇ ಇರಲಿಲ್ಲ ಗೊಣಗುತ್ತಾರೆ.

Related posts

ಮನೆ ವಿಚಾರಕ್ಕೆ ಬಂದ್ರೆ ಹುಷಾರ್ ಅನಿತಾ ಕುಮಾರಸ್ವಾಮಿ ಖಡಕ್ ವಾರ್ನಿಂಗ್ ಬೆನ್ನಲ್ಲೇ ಕ್ಷಮೆಯಾಚಿಸಿದ ಸಚಿವ ಎಂಬಿ ಪಾಟೀಲ್

ಮನೆ ವಿಚಾರಕ್ಕೆ ಬಂದ್ರೆ ಹುಷಾರ್ ಅನಿತಾ ಕುಮಾರಸ್ವಾಮಿ ಖಡಕ್ ವಾರ್ನಿಂಗ್ ಬೆನ್ನಲ್ಲೇ ಕ್ಷಮೆಯಾಚಿಸಿದ ಸಚಿವ ಎಂಬಿ ಪಾಟೀಲ್

June 25, 2026
ಶಂಕಿತ ಉಗ್ರನ ವಿಚಾರಣೆಯಲ್ಲಿ ಸ್ಪೋಟಕ ಮಾಹಿತಿ; ರಾಮ ಮಂದಿರ ಗುರಿಯಾಗಿಸುವ ಉದ್ದೇಶವಿದ್ದ ಆರೋಪ

ಶಂಕಿತ ಉಗ್ರನ ವಿಚಾರಣೆಯಲ್ಲಿ ಸ್ಪೋಟಕ ಮಾಹಿತಿ; ರಾಮ ಮಂದಿರ ಗುರಿಯಾಗಿಸುವ ಉದ್ದೇಶವಿದ್ದ ಆರೋಪ

June 25, 2026

 

ಆದರೆ, ನೂರು ವರ್ಷಗಳ ಹಿಂದೆಯೇ ಇವೆಲ್ಲಾ ಇದ್ದವು ಎಂಬುದಕ್ಕೆ ಪುಷ್ಠಿ ನೀಡುವಂತಹ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. 1918ರಲ್ಲಿ ಕೊರೊನಾ ಮಾದರಿಯ ಸ್ಪಾನಿಶ್ ಇನ್‍ಫ್ಲುಯೆಂಜಾ ವೈರಸ್ ಅಟ್ಟಹಾಸಕ್ಕೆ ಭಾರತ ಸೇರಿದಂತೆ ಇಡೀ ಪ್ರಪಂಚ ತತ್ತರಿಸಿ ಹೋಗಿತ್ತು.

1918ರಲ್ಲಿ ಲಾಕ್‍ಡೌನ್..!
ಹೌದು, 1918ರ ಅಕ್ಟೋಬರ್ 19ರಂದು ಇಂದಿನ ಉತ್ತರ ಅಮೆರಿಕದ ಕೆನಡಾ ರಾಜ್ಯದ ಕೆಲೋನಾ ನಗರದಲ್ಲಿ ಲಾಕ್‍ಡೌನ್ ಮಾಡಲಾಗಿತ್ತು. ಅಂದು ಸ್ಪಾನಿಶ್ ವೈರಸ್ ಎಂಬ ಮಹಾಮಾರಿ ವೈರಸ್, ಕೆನಡಾ ರಾಜ್ಯದಲ್ಲಿ ಸಾವಿರಾರು ಜನರಿಗೆ ತಗುಲಿ ಸಾವು-ನೋವು ಉಂಟು ಮಾಡಿತ್ತು.

ಈ ಹಿನ್ನೆಲೆಯಲ್ಲಿ ಕೆಲೊನಾ ನಗರದ ಮೇಯರ್ ಡಿ.ಡಬ್ಲೂ ಸದರ್‍ಲ್ಯಾಂಡ್ ಲಾಕ್‍ಡೌನ್ ಮಾಡಿದ್ದರು. ಆದರೆ ಅಂದು ಲಾಕ್‍ಡೌನ್ ಪದ ಬಳಕೆ ಮಾಡಿರಲಿಲ್ಲ. ಆದರೆ, ಸ್ಪಾನಿಶ್ ಫ್ಲೂ ಹರಡುವುದನ್ನು ತಪ್ಪಿಸಲು ಶಾಲಾ-ಕಾಲೇಜು, ಚರ್ಚ್‍ಗಳು, ಸಿನಿಮಾ ಮಂದಿರಗಳು, ಸಂಚಾರಿ ಥಿಯೇಟರ್‍ಗಳು, ಸ್ವಿಮ್ಮಿಂಗ್ ಪೂಲ್, ಅಮ್ಯೂಸ್‍ಮೆಂಟ್, ಲಾಡ್ಜ್‍ಗಳ ಬಂದ್ ಸೇರಿದಂತೆ ಇಡಿ ನಗರದಲ್ಲಿ ಮಾನವ ಚಟುವಟಿಕೆ ನಿರ್ಭಂದಿಸಿ ಆದೇಶ ಹೊರಡಿಸಿದ್ದ ಸಾರ್ವಜನಿಕ ನೋಟಿಸ್ ವೈರಲ್ ಆಗಿದೆ. ಇದನ್ನೇ ನಾವು ಈಗ ಲಾಕ್‍ಡೌನ್ ಎಂದು ಬೇರೆ ಹೆಸರಲ್ಲಿ ಕರೆಯುತ್ತಿದ್ದೇವೆ.

ಮಾಸ್ಕ್ ಬಳಕೆಗೂ ಆದೇಶ
ಸ್ಪಾನಿಶ್ ಫ್ಲೂ ಇಡೀ ಜಗತ್ತಿನಾದ್ಯಂತ ಮನುಷ್ಯರ ಮಾರಣ ಹೋಮವನ್ನೇ ನಡೆಸುತ್ತಿತ್ತು. ಸ್ಪಾನಿಶ್ ಫ್ಲೂನಿಂದ ಬಚಾಚಾಗಲು ಮಾಸ್ಕ್ ಧರಿಸುವಂತೆ ಸೂಚಿಸಲಾಗಿತ್ತು.

ಕೆಮ್ಮುವಾಗ ಹಾಗೂ ಸೀನುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅಗತ್ಯವಿಲ್ಲದಿದ್ದರೆ ಯಾರೂ ಮನೆಗಳಿಂದ ಹೊರಗೆ ಬರಬಾರದು. ಯಾರಾದರೂ ಸೀನಿದರೆ, ಕೆಮ್ಮಿದರೆ ದೂರು ಇದ್ದು ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಸೂಚನೆ ನೀಡಲಾಗಿತ್ತು.

ಬೆಂಗಳೂರಿನಲ್ಲೂ 1928ರಲ್ಲೇ ಆಗಿತ್ತಾ ಲಾಕ್‍ಡೌನ್..!
ಹೌದು, ಬೆಂಗಳೂರು ನಗರ 1928ರಲ್ಲೇ ಲಾಕ್‍ಡೌನ್‍ಗೆ ಸಾಕ್ಷಿಯಾಗಿದೆ. ಆದರೆ, ಇಂದಿನ ಲಾಕ್‍ಡೌನ್‍ಗೆ ಹೋಲಿಕೆ ಮಾಡಲಾಗದೇ ಹೋದರೋ, ಅಂದು ಜನ ಮನೆಯಿಂದ ಹೊರ ಬರದಂತೆ, ಹೆಚ್ಚು ಜನ ಸೇರುವ ಸಿನಿಮಾ ಮಂದಿರ, ನಾಟಕಗಳಿಗೆ ಹೋಗಬಾರದು ಎಂದು ಅಂದಿನ ಬೆಂಗಳೂರು ಸಿಟಿ ಮುನ್ಸಿಪಲ್ ಕೌನ್ಸಿಲ್‍ನ ಆರೋಗ್ಯ ಇಲಾಖೆ ನೀಡಿದ್ದ ನೋಟಿಸ್ ವೈರಲ್ ಆಗಿದೆ.

1918ರಲ್ಲಿ ಕಾಣಿಸಿಕೊಂಡಿದ್ದ ಇನ್‍ಫ್ಲುಯೆಂಜಾ ಮಾದರಿಯ ಸಾಂಕ್ರಾಮಿಕ ವೈರಸ್‍ನಿಂದಾ ಜನರು ಕೆಮ್ಮು, ಜ್ವರ, ನೆಗಡಿಯಂತಹ ಲಕ್ಷಣಗಳಿಂದ ಬಳಲುತ್ತಿದ್ದರು. ಹೀಗಾಗಿ ಈ ಸೋಂಕಿನಿಂದ ರಕ್ಷಿಸಿಕೊಳ್ಳಲು ಜನರು ಪಾಲಿಸಬೇಕಾದ ಸೂಚನೆಗಳನ್ನು ನೋಟಿಸ್‍ನಲ್ಲಿ ಪ್ರಕಟಿಸಲಾಗಿತ್ತು.

ನೋಟಿಸ್‍ನ ಕೆಲವು ಸೂಚನೆಗಳು ಕೆಳಗಿನಂತಿವೆ…
1.ಜನರು ಗುಂಪಾಗಿ ಸೇರುವ ಸ್ಥಳಗಳು ಅಂದರೆ ಸಿನಿಮಾ, ನಾಟಕ ಇವುಗಳಿಗೆ ಹೋಗಬಾರದು( ಇದರ ಅರ್ಥವೇ ಅಂದಿನ ಲಾಕ್‍ಡೌನ್)
2. ಕೆಮ್ಮುತ್ತಿರುವವ ಸಮೀಪ ಸೇರಬಾರದು (ಸೋಷಿಯಲ್ ಡಿಸ್ಟೆನ್ಸ್)
3. ರಾತ್ರಿ-ಹಗಲು ಒಳ್ಳೆ ಗಾಳಿ ಬೀಸುವ ಜಾಗದಲ್ಲಿ ಇರಬೇಕು
4. ದೇಹಕ್ಕೂ ಮನಸ್ಸಿಗೂ ಆಲಸ್ಯವಾಗುವಂತೆ ದುಡಿಮೆ ಕೆಲಸ ಮಾಡಬಾರದು( ಹೋಂ ಕ್ವಾರಂಟೈನ್ )
5. ಸಾಂಕ್ರಾಮಿಕ ರೋಗದಿಂದ ದೂರವಿರಲು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು. ಇದಕ್ಕೆ ಪೂರಕವಾಗಿ ಅರಿಶಿಣ, ದಾಲ್ಚಿನ್ನಿ, ಲವಂಗ, ಮೆಣಸು, ಒಣಗಿದ ಶುಂಠಿ, ಬೆಳ್ಳುಳ್ಳಿಯ ಜತೆಗೆ ಸಕ್ಕರೆಯನ್ನು ಸೇರಿಸಿಕೊಂಡು ಕಷಾಯ ಮಾಡಿಕೊಂಡು ದಿನಕ್ಕ ಎರಡು ಅಥವಾ ಮೂರು ಬಾರಿ ತೆಗೆದುಕೊಳ್ಳುವುದು ಒಳ್ಳೆಯದು ಎಂದು 1928 ಮಾರ್ಚ್11ರಂದು ಬೆಂಗಳೂರು ನಗರ ಮುನ್ಸಿಪಲ್ ಕೌನ್ಸಿಲ್(ಇಂದು ಅದು ಬಿಬಿಎಂಪಿ) ಅರೋಗ್ಯ ಅಧಿಕಾರಿ ಜೆ.ವಿ ಮಾಸ್ಕರ್‍ನೆಹಾಸ್ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದರು.
ಇದನ್ನೆಲ್ಲಾ ನೋಡಿದರೆ ಸಾಂಕ್ರಾಮಿಕ ರೋಗಳ ತಡೆಗೆ ಲಾಕ್‍ಡೌನ್, ಮಾಸ್ಕ್, ಸಾಮಾಜಿಕ ಅಂತರ, ಹೋಂ ಕ್ವಾರಂಟೈನ್‍ನಂತಹ ಮಾರ್ಗಗಳನ್ನು 100 ವರ್ಷಗಳ ಹಿಂದೆಯೇ ನಮ್ಮ ಪೂರ್ವಿಜರು ಅನುಭವಿಸಿದ್ದರು ಎಂಬುದಕ್ಕೆ ಈ ದಾಖಲೆಗಳು ಪುಷ್ಠಿ ನೀಡುತ್ತಿವೆ.

 

 

Tags: 102 years agoLockdownmaskQuarantine
ShareTweetSendShare
Join us on:

Related Posts

ಮನೆ ವಿಚಾರಕ್ಕೆ ಬಂದ್ರೆ ಹುಷಾರ್ ಅನಿತಾ ಕುಮಾರಸ್ವಾಮಿ ಖಡಕ್ ವಾರ್ನಿಂಗ್ ಬೆನ್ನಲ್ಲೇ ಕ್ಷಮೆಯಾಚಿಸಿದ ಸಚಿವ ಎಂಬಿ ಪಾಟೀಲ್

ಮನೆ ವಿಚಾರಕ್ಕೆ ಬಂದ್ರೆ ಹುಷಾರ್ ಅನಿತಾ ಕುಮಾರಸ್ವಾಮಿ ಖಡಕ್ ವಾರ್ನಿಂಗ್ ಬೆನ್ನಲ್ಲೇ ಕ್ಷಮೆಯಾಚಿಸಿದ ಸಚಿವ ಎಂಬಿ ಪಾಟೀಲ್

by Shwetha
June 25, 2026
0

ರಾಜ್ಯ ರಾಜಕಾರಣದಲ್ಲಿ ಬಿಡದಿ ಟೌನ್ ಶಿಪ್ ವಿವಾದ ಈಗ ತಾರಕಕ್ಕೇರಿದೆ. ರಾಜಕೀಯ ಕೆಸರೆರಚಾಟದ ನಡುವೆ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರ ಎಂಟ್ರಿ ದೊಡ್ಡ ಸಂಚಲನ ಮೂಡಿಸಿದೆ....

ಶಂಕಿತ ಉಗ್ರನ ವಿಚಾರಣೆಯಲ್ಲಿ ಸ್ಪೋಟಕ ಮಾಹಿತಿ; ರಾಮ ಮಂದಿರ ಗುರಿಯಾಗಿಸುವ ಉದ್ದೇಶವಿದ್ದ ಆರೋಪ

ಶಂಕಿತ ಉಗ್ರನ ವಿಚಾರಣೆಯಲ್ಲಿ ಸ್ಪೋಟಕ ಮಾಹಿತಿ; ರಾಮ ಮಂದಿರ ಗುರಿಯಾಗಿಸುವ ಉದ್ದೇಶವಿದ್ದ ಆರೋಪ

by Shwetha
June 25, 2026
0

ಹರಿಹರದಲ್ಲಿ ಬಂಧಿಸಲ್ಪಟ್ಟಿರುವ ಉತ್ತರ ಪ್ರದೇಶ ಮೂಲದ 20 ವರ್ಷದ ಶಂಕಿತ ಉಗ್ರನ ವಿಚಾರಣೆ ವೇಳೆ ಆತಂಕಕಾರಿ ಮಾಹಿತಿ ಹೊರಬಂದಿದೆ ಎಂದು ವರದಿಯಾಗಿದೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ,...

ರಫೇಲ್ ಕುರಿತ ಪಾಕಿಸ್ತಾನದ ಸುಳ್ಳು ಬಯಲು: ದೇಶದ ಭದ್ರತೆಗಿಂತ ಪಾಕಿಸ್ತಾನದ ಪ್ರೊಪಗಾಂಡವೇ ಮುಖ್ಯವಾಯಿತೇ? ರಾಹುಲ್ ವಿರುದ್ಧ  ಬಿಜೆಪಿ ಕೆಂಡ

ರಫೇಲ್ ಕುರಿತ ಪಾಕಿಸ್ತಾನದ ಸುಳ್ಳು ಬಯಲು: ದೇಶದ ಭದ್ರತೆಗಿಂತ ಪಾಕಿಸ್ತಾನದ ಪ್ರೊಪಗಾಂಡವೇ ಮುಖ್ಯವಾಯಿತೇ? ರಾಹುಲ್ ವಿರುದ್ಧ ಬಿಜೆಪಿ ಕೆಂಡ

by Shwetha
June 25, 2026
0

ಭಾರತೀಯ ವಾಯುಪಡೆಯ ಬತ್ತಳಿಕೆಯಲ್ಲಿರುವ ಎಲ್ಲಾ 36 ರಫೇಲ್ ಯುದ್ಧ ವಿಮಾನಗಳು ಸುರಕ್ಷಿತವಾಗಿವೆ ಮತ್ತು ಸಕ್ರಿಯ ಸೇವೆಯಲ್ಲಿವೆ ಎಂಬ ಅಧಿಕೃತ ದಾಖಲೆಗಳು ಬಿಡುಗಡೆಯಾಗಿವೆ. ಈ ಬೆನ್ನಲ್ಲೇ ರಫೇಲ್ ವಿಚಾರದಲ್ಲಿ...

ರಾಜ್ಯದಲ್ಲಿ ಒಂದು ವಾರ ಮಳೆ; ಹವಾಮಾನ ಇಲಾಖೆಯಿಂದ ಆರೆಂಜ್ ಅಲರ್ಟ್

ರಾಜ್ಯದಲ್ಲಿ ಒಂದು ವಾರ ಮಳೆ; ಹವಾಮಾನ ಇಲಾಖೆಯಿಂದ ಆರೆಂಜ್ ಅಲರ್ಟ್

by Shwetha
June 25, 2026
0

ರಾಜ್ಯದ ವಿವಿಧ ಭಾಗಗಳಲ್ಲಿ ಮುಂದಿನ ಒಂದು ವಾರ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೂನ್ 24ರಿಂದ 30ರವರೆಗೆ ರಾಜ್ಯದ ಬಹುತೇಕ...

ಆರ್‌ಎಸ್‌ಎಸ್‌ಗೆ ಉಳಿಗಾಲವಿಲ್ಲ, ದೊಣ್ಣೆ ಜನರ ಕೈಗೆ ಸಿಕ್ಕರೆ ಬಡಿಸಿಕೊಳ್ಳಬೇಕಾದೀತು: ಬಿ.ಕೆ. ಹರಿಪ್ರಸಾದ್ ಎಚ್ಚರಿಕೆ

ಘಜ್ನಿಗೂ ಮೋದಿಗೂ ವ್ಯತ್ಯಾಸವೇ ಇಲ್ಲ, ಆರ್‌ಎಸ್‌ಎಸ್‌ಗೆ ಯಾಕಿಲ್ಲ ನೋಂದಣಿ? ಅಚ್ಚೇ ದಿನ್ ಹೆಸರಲ್ಲಿ ದೇಶಕ್ಕೆ ರಾಹುಕಾಲ ಬಂದಿದೆ: ಕೆ ಹರಿಪ್ರಸಾದ್

by Shwetha
June 25, 2026
0

ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೆಪಿಸಿಸಿ ಮುಖಂಡ ಬಿ ಕೆ ಹರಿಪ್ರಸಾದ್ ಅವರು ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ಅಕ್ಷರಶಃ ಕೆಂಡ ಕಾರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram