ಲಾಕ್ ಡೌನ್ 5.0 ; ಜೂನ್ 1ರಿಂದ ಏನಿರಬಹುದು? ಏನಿರಲ್ಲ?
ಬೆಂಗಳೂರು : ಕೊರೊನಾ ಲಾಕ್ ಡೌನ್ 4.0 ಇನ್ನೂ ಮೂರು ದಿನಗಳಲ್ಲಿ ಮುಕ್ತಾಯವಾಗಲಿದೆ. ಕೇಂದ್ರ ಸರ್ಕಾರ ಲಾಕ್ ಡೌನ್ 5.0 ಜಾರಿ ತರಲು ಪ್ಲಾನ್ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. ಜೂನ್ 1 ರಿಂದ ಹೊಸ ಲಾಕ್ ಡೌನ್ ಮತ್ತಷ್ಟು ಸಡಿಲಿಕೆಯಾಗುವ ಸಾಧ್ಯತೆ ಇದೆ. ಹಾಗಾದ್ರೆ ಕರ್ನಾಟಕದಲ್ಲಿ ಜೂನ್ 1 ರಿಂದ ಏನಿರಬಹುದು? ಏನಿರಲ್ಲ ಎಂಬುದನ್ನು ನೋಡುವುದಾದರೆ..
ಏನಿರಬಹುದು?
ಹೋಟೆಲ್ ಗೆ ಅವಕಾಶ
ಪಾರ್ಸೆಲ್ ಜೊತೆಗೆ ಕೂತು ತಿನ್ನುವುದಕ್ಕೂ ಅವಕಾಶ
ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯ
ಶಾಪಿಂಗ್ ಮಾಲ್ ಓಪನ್ ಮಾಡಲು ಅವಕಾಶ ನೀಡಬಹುದು.
ಒಂದು ಪಾಳಿಯಲ್ಲಿ ಶೇ.50ರಷ್ಟು ಸಿಬ್ಬಂದಿಗಷ್ಟೇ ಕೆಲಸಕ್ಕೆ ಅವಕಾಶ
ಶಾಪಿಂಗ್ ಮಾಲ್ ಗಳಲ್ಲಿರುವ ಸೂಪರ್ ಮಾರ್ಕೆಟ್, ಎಲೆಕ್ಟ್ರಾನಿಕ್ ಉತ್ಪನ್ನಗಳು, ಉಡುಪುಗಳು, ಫೂಟ್ ವೇರ್, ಜ್ಯುವೆಲ್ಲರಿ, ಕನ್ನಡಕ ಮಾರಾಟಕ್ಕೆ ಅವಕಾಶ.
ಥರ್ಮಲ್ ಸ್ಕ್ರೀನಿಂಗ್, ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸಿಂಗ್ ಕಡ್ಡಾಯ
ನಮ್ಮ ಮೆಟ್ರೋ ರೈಲುಗಳ ಸಂಚಾರಕ್ಕೆ ಅನುಮತಿ ನೀಡಬಹುದು. ಆದ್ರೆ ಥರ್ಮಲ್ ಸ್ಕ್ರೀನಿಂಗ್, ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸಿಂಗ್ ಕಡ್ಡಾಯ
ದೇವಾಲಯ ತೆರೆಯಲು ಅವಕಾಶ ನೀಡುವ ಸಾಧ್ಯತೆಗಳಿವೆ.
ಜೂನ್ 1ರಿಂದ ದೇವಸ್ಥಾನ, ಮಸೀದಿ, ಚರ್ಚ್ ಗಳು ತೆರೆಯಲು ಅನುಮತಿ
ಭಕ್ತರ ಸಂಖ್ಯೆಯ ಮೇಲೆ ಮಿತಿ ಹೇರುವುದು
ನಿರ್ದಿಷ್ಟ ಸಮಯದಲ್ಲಷ್ಟೇ ಪೂಜೆ, ಪ್ರಾರ್ಥನೆ, ನಮಾಜ್ ಗೆ ಅವಕಾಶ
ಥರ್ಮಲ್ ಸ್ಕ್ರೀನಿಂಗ್, ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸಿಂಗ್ ಕಡ್ಡಾಯ
ಸಿನಿಮಾ ಚಿತ್ರೀಕರಣಕ್ಕೆ ಷರತ್ತುಬದ್ಧ ಅನುಮತಿ
ಜಿಮ್ ಮತ್ತು ಫಿಟ್ನೆಸ್ ಸೆಂಟರ್ಗಳಿಗೆ ಷರತ್ತುಬದ್ಧ ಅನುಮತಿ
ಜೂನ್ 1ರಿಂದ ಏನಿರಲ್ಲ?
ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್ ಗಳು ಓಪನ್ ಆಗಲ್ಲ
ಶಾಲೆ-ಕಾಲೇಜುಗಳು ಆರಂಭವಾಗಲ್ಲ
ಕೋಚಿಂಗ್ ಸೆಂಟರ್ಗಳು, ಟ್ರೈನಿಂಗ್ ಸೆಂಟರ್ಗಳು ಬಂದ್
ನೈಟೈ ಕ್ಲಬ್, ಪಬ್ ಬಂದ್ ಮುಂದುವರಿಕೆ
ಪ್ರವಾಸಿ ತಾಣಗಳ ಬಂದ್ ಮುಂದುವರೆಯಲಿದೆ
ಸ್ವಿಮ್ಮಿಂಗ್ ಪೂಲ್ ಗಳು, ಕ್ರೀಡಾಕೂಟಕ್ಕೆ ಅನುಮತಿ ಇಲ್ಲ
ಸಾರ್ವಜನಿಕ ಸಭೆ, ಸಮಾರಂಭ, ದೇವರ ಉತ್ಸವ, ರಥೋತ್ಸವ ಬಂದ್








